ನಮ್ಮ ರಾಜ್ಯವು 31ಜಿಲ್ಲೆಗಳನ್ನು ಹೊಂದಿದೆ. ಅವುಗಳಲ್ಲಿ ಹಾವೇರಿ ಜಿಲ್ಲೆ ಕೂಡ ಒಂದು. ಇಲ್ಲಿ ಏಲಕ್ಕಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಾಗಾಗಿ ಇದನ್ನು ಏಲಕ್ಕಿಗಳ ಕಂಪಿನ ನಾಡು ಎಂದು ಕರೆಯಲಾಗುತ್ತದೆ. ಹಾಗೆಯೇ ಇಲ್ಲಿ ಬ್ಯಾಡಗಿ ಮೆಣಸು ಬಹಳ ಪ್ರಸಿದ್ಧವಾಗಿದೆ. ಬ್ಯಾಡಗಿಯಲ್ಲಿ ಮೆಣಸನ್ನು ಬಹಳ ಜನ ವರ್ಷಕ್ಕೆ ಆಗುವಷ್ಟು ತೆಗೆದುಕೊಂಡು ಹೋಗುತ್ತಾರೆ. ಆದ್ದರಿಂದ ನಾವು ಇಲ್ಲಿ ಹಾವೇರಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕರ್ನಾಟಕದ ಹೃದಯವೆಂದು ಹಾವೇರಿ ಜಿಲ್ಲೆಯನ್ನು ಕರೆಯಲಾಗುತ್ತದೆ. ಏಕೆಂದರೆ ಇದು ಕರ್ನಾಟಕದ ಮಧ್ಯ ಭಾಗದಲ್ಲಿ ಇದೆ. ಹಾವು ಮತ್ತು ಕೇರಿ ಎಂಬ ಪದಗಳಿಂದ ಹಾವೇರಿ ಎಂಬ ಹೆಸರು ಬಂದಿದೆ. ಹಾವು ಮತ್ತು ಕೇರಿ ಎಂದರೆ ಹಾವುಗಳನ್ನು ಹೊಂದಿರುವ ಸ್ಥಳ ಎಂದು ಅರ್ಥ. ಮೊದಲು ಇದು ಧಾರವಾಡ ಜಿಲ್ಲೆಯ ಭಾಗವಾಗಿತ್ತು. ಬಹು ದಿನಗಳ ಹೋರಾಟದ ನಂತರ ಧಾರವಾಡಕ್ಕೆ ಸೇರಿದ್ದ ಈ ಹಾವೇರಿಯನ್ನು 1997ರಲ್ಲಿ ಜಿಲ್ಲೆಯನ್ನಾಗಿ ಮಾಡಲಾಯಿತು. ಜನಪದ ವಿಶ್ವ ವಿದ್ಯಾಲಯವನ್ನು ಹಾವೇರಿ ಜಿಲ್ಲೆ ಹೊಂದಿದೆ.
ಏಷ್ಯಾದ ಎರಡನೇ ಅತಿ ದೊಡ್ಡ ಮೆಣಸಿನ ಮಾರುಕಟ್ಟೆಯನ್ನು ಇದು ಹೊಂದಿದೆ. ಹಾಗೆಯೇ ಇದು ಸಾವಿರಕ್ಕೂ ಹೆಚ್ಚು ಮಠಗಗಳನ್ನು ಇದು ಹೊಂದಿದೆ. ಹಾಗೆಯೇ ಕರ್ನಾಟಕದಲ್ಲಿ ಕೃಷ್ಣಮೃಗ ವನ್ಯಜೀವಿಧಾಮವನ್ನು ಈ ಜಿಲ್ಲೆ ಮಾತ್ರ ಹೊಂದಿದೆ. ಹಾಗೆಯೇ ಕರ್ನಾಟಕದ ಪ್ರಸಿದ್ಧ ಕವಿ ಕನಕದಾಸರು ಹುಟ್ಟಿರುವ ಸ್ಥಳ ಬಾಡ ಹಾವೇರಿ ಜಿಲ್ಲೆಯಲ್ಲಿ ಇದೆ. ತ್ರಿಪದಿಗಳ ಬ್ರಹ್ಮ ವಚನಕಾರ ಕೂಡ ಈ ಜಿಲ್ಲೆಯ ಸವಣೂರಿನಲ್ಲಿ ಜನಿಸಿದ್ದಾರೆ. ಹಾಗೆಯೇ ಈ ಜಿಲ್ಲೆಯ ಸವಣೂರಿನಲ್ಲಿ 500ವರ್ಷಗಳ ಹಳೆಯ ಹುಣಸೇ ಮರವನ್ನು ಹೊಂದಿದೆ.
ಹಾಗೆಯೇ ಅತ್ಯಂತ ಪ್ರಸಿದ್ಧ ಗುಡಿಯಾದ ದ್ಯಾಮವ್ವನ ಗುಡಿಯನ್ನು ಇಲ್ಲಿ ಕಾಣಬಹುದು. ಕಲ್ಯಾಣ ಚಾಲುಕ್ಯರ ರಾಜನಾದ ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಿತವಾದ ಶ್ರೀ ಪುರಸಿದ್ಧೇಶ್ವರ ದೇವಾಲಯವನ್ನು ಕೂಡ ಹೊಂದಿದೆ. ಹಾಗೆಯೇ ಇದು ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಹುಕ್ಕೇರಿ ಮಠವನ್ನು ಸಹ ಇದು ಹೊಂದಿದೆ. ಇದು ರಾಜ್ಯದ ರಾಜಧಾನಿ ಆದ ಬೆಂಗಳೂರಿನಿಂದ 335ಕಿಲೋಮೀಟರ್ ದೂರದಲ್ಲಿ ಇದೆ. ಹಾಗೆಯೇ ಧಾರವಾಡದಿಂದ ಸುಮಾರು 95ಕಿಲೋಮೀಟರ್ ದೂರದಲ್ಲಿ ಇದೆ.