ಗರ್ಭಧಾರಣೆ ಪ್ರಕ್ರಿಯೆ ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಪ್ರಕೃತಿ ಸಹಜ ಪದ್ಧತಿ ಎಂದೇ ಹೇಳಬಹುದು. ಆದರೂ ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಗರ್ಭಧಾರಣೆಯ ಸಮಸ್ಯೆ ತುಂಬಾ ಕಾಡುತ್ತಿದೆ. ಆಧುನಿಕ ಕಾಲದಲ್ಲಿ ಈಗೆಲ್ಲಾ ಎಲ್ಲಾ ರೋಗಕ್ಕೂ ಒಂದೊಂದು ಮಾತ್ರೆ ಮದ್ದು ಎನ್ನುವುದು ಇದೆ ಅದೇ ರೀತಿ ಗರ್ಭಧಾರಣೆಗೆ ಕೂಡಾ ಇದೆ. ಆದರೆ ಇವೆಲ್ಲಾ ಮಾತ್ರೆ ಮದ್ದು ಬರುವುದಕ್ಕೂ ಮುನ್ನ ನಮ್ಮ ಪೂರ್ವಜರು ಅಂದರೆ ಅಜ್ಜಿ , ಮುತ್ತಜ್ಜಿ ಅವರಜ್ಜಿ ಎಲ್ಲರೂ ಯಾವುದೇ ರೀತಿಯ ಮಾತ್ರೆಗಳೂ ಇಲ್ಲದೆ ಸಹಜವಾಗಿ ಗರ್ಭ ಧರಿಸುತ್ತಾ ಇದ್ದರು.
ಈಗಿನ ಕಾಲದಲ್ಲಿ ನಮ್ಮ ಆಹಾರ ವಿಹಾರಗಳ ಬದಲಾವಣೆ , ವಾತಾವರಣದಿಂದಾಗಿ ಗರ್ಭ ಧರಿಸುವಿಕೆ ಸ್ವಲ್ಪ ತಡವಾಗಿ ಆಗಬಹುದು. ಆದರೂ ಗರ್ಭಧಾರಣೆಯ ಸಾಯದಲ್ಲಿ ಸಾಕಷ್ಟು ಕಾಳಜಿ , ಎಚ್ಚರ ವಹಿಸಬೇಕಾಗುವುದು. ಹಾಗಿದ್ದರೆ ಗರ್ಭಧಾರಣೆಗೆ ಇಚ್ಛಿಸುವವರು ಯಾವ ರೀತಿ ಕಾಳಜಿ ವಹಿಸಬೇಕಾಗುವುದು? ಏನು ಮಾಡಬೇಕು ಏನು ಮಾಡಬಾರದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮೊದಲಿಗೆ ಹೆಣ್ಣುಮಕ್ಕಳು ತಿಳಿದುಕೊಳ್ಳಬೇಕಾದ ಅಂಶ ಎಂದರೆ ತಿಂಗಳ ಪೀರಿಯಡ್ ಈ ಸಮಯದಲ್ಲಿ ಓವುಲೇಶನ್ ಯಾವಾಗ ಆಗುತ್ತೆ ಎನ್ನುವುದನ್ನು ಅರಿತಿರಬೇಕು. ಇಷ್ಟಕ್ಕೂ ಓವುಲೇಶನ್ ಅಂದ್ರೆ ಹೆಣ್ಣುಮಕ್ಕಳಿಗೆ ಪೀರಿಯಡ್ ಆದ ನಂತರ ಬಿಡುಗಡೆ ಆಗುವ ಒಂದು ಮೊಟ್ಟೆ. ಈ ಗರ್ಭಧಾರಣೆಗೆ ಸಹಾಯವಾಗುವ ಮೊಟ್ಟೆಯ ಕಾಲಾವಧಿ ಹನ್ನೆರಡು ಗಂಟೆಯಿಂದ ಇಪ್ಪತ್ನಾಲ್ಕು ಗಂಟೆ ಅಷ್ಟೇ ಅಷ್ಟರ ನಂತರ ಮೊಟ್ಟೆಗೆ ಜೀವ ಇರುವುದಿಲ್ಲ. ಆದರೆ ಸ್ಪರ್ಮ್ ಹಾಗಲ್ಲ ಇದಕ್ಕೆ ಮಹಿಳೆಯರ ದೇಹ ಸೇರಿದ ನಂತರ ಮೂರರಿಂದ ಐದು ದಿನಗಳ ವರೆಗೂ ಜೀವಂತವಾಗಿ ಇರುತ್ತದೆ. ಹಾಗಾಗಿ ಗರ್ಭಧಾರಣೆಗೆ ಓವುಲೇಶನ ಸಮಯ ಸರಿಯಾಗಿ ತಿಳಿದಿರಬೇಕು.
ಯಾರೊಬ್ಬ ಮಹಿಳೆಗೆ ಆಗಿದ್ದರೂ ಪ್ರತೀ ತಿಂಗಳೂ ಒಂದೇ ದಿನದಂದು ಪೀರಿಯಡ್ ಆದರೂ ಅಥವಾ ಸ್ವಲ್ಪ ದಿನ ಹೆಚ್ಚು ಕಡಿಮೆ ಆಗಿ ಆದರೂ ಯಾವುದೇ ವೈದ್ಯರೂ ಸಹ ಮಹಿಳೆಯರಿಗೆ ಇದೆ ದಿನ ಇದೆ ಸಮಯಕ್ಕೆ ಓವುಲೇಷನ್ ಮೊಟ್ಟೆ ಬಿಡುಗಡೆ ಆಗುತ್ತೆ ಎಂದು ಹೇಳುವುದು ಸಾಧ್ಯವಿಲ್ಲ ಅದು ಯಾವಾಗ ಬೇಕಿದ್ದರೂ ಆಗಬಹುದು. ಇನ್ನು ಪೀರಿಯಡ್ ಆಗಿ ಹತ್ತನೇ ದಿನದಿಂದ ಇಪ್ಪತ್ತನೇ ದಿನದವರೆಗೂ ಈ ಹತ್ತು ದಿನಗಳಲ್ಲಿ ಯಾವಾಗ ಬೇಕಿದ್ದರೂ ಓವುಲೇಶನ್ ಬಿಡುಗಡೆ ಆಗಬಹುದು ಹಾಗೂ ಆ ಸಂದರ್ಭದಲ್ಲಿ ಸಂಪರ್ಕ ಹೊಂದಿದಾಗ ಮಾತ್ರ ಗರ್ಭಧರಿಸಬಹುದು.
ಇನ್ನು ಸರಿಯಾಗಿ ಪ್ರತೀ ತಿಂಗಳು ಪೀರಿಯಡ್ ಆಗದೇ ಇದ್ದಾಗ ಅಥವಾ ವಯಸ್ಸು ಹೆಚ್ಚಾಗಿ ಇದ್ದಾಗ ಇಂತಹ ಸಂದರ್ಭಗಳಲ್ಲಿ ಕೂಡಾ ಗರ್ಭ ನಿಲ್ಲುವ ಸಾಧ್ಯತೆ ಕಡಿಮೆ. ಹೀಗಿದ್ದಾಗ ಪ್ರತೀ ತಿಂಗಳು ಪೀರಿಯಡ್ ಆದಾಗ ಸಂಪರ್ಕ ಹೊಂದಿದಾಗ ಕೂಡಾ ಗರ್ಭ ನಿಲ್ಲದೆ ಇದ್ದಾಗ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಚಿಕಿತ್ಸೆ ಪಡೆಯಬೇಕು. ಪ್ರತೀ ತಿಂಗಳು ಪೀರಿಯಡ್ ಆದಾಗ ಗರ್ಭ ನಿಲ್ಲಲ್ಲು ಪ್ರಯತ್ನಿಸಿ ಅದು ವಿಫಲ ಆದಾಗ ಹೆಚ್ಚು ಸ್ಟ್ರೆಸ್ ಆಗುವುದು ಇಲ್ಲವೇ ಡಿಪ್ರೆಶನ್ ಹೋಗುವುದು ಆಗುತ್ತದೆ. ಅರ್ಧ ಜನರಿಗೆ ಈ ಸ್ಟ್ರೆಸ್ ಇದರಿಂದಲೇ ಗರ್ಭ ನಿಲ್ಲುವುದಿಲ್ಲ ಆದಷ್ಟು ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಬೇಕು. ಇನ್ನು ಮೂವತ್ತು ವರ್ಷ ಆದ ನಂತರ ಗರ್ಭ ಧಾರಣೆಗೆ ಪ್ರಯತ್ನಿಸುವುವರು ಇರೆಗ್ಯೂಲರ್ ಪೀರಿಯಡ್ ಸಮಸ್ಯೆ , ಥೈರಾಯ್ಡ್ ಸಮಸ್ಯೆ ಇರುವವರು ಆದಷ್ಟು ಬೇಗ ಚಿಕಿತ್ಸೆ ಪಡೆಯಬೇಕು.
ಇನ್ನು ಸಾಮಾನ್ಯವಾಗಿ ಎಷ್ಟೇ ಪ್ರಯತ್ನ ಮಾಡಿದರೂ ಗರ್ಭ ಧಾರಣೆ ಆಗುತ್ತಿಲ್ಲ ಎಂದು ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಹೋದಾಗ ಮೊದಲು ಗಂಡ ಹೆಂಡತಿ ಇಬ್ಬರೂ ಸಹ ಒಮ್ಮೆ ತಪಾಸಣೆಗೆ ಒಳಗಾಗಬೇಕು. ಏಕೆಂದರೆ ಯಾವಾಗಲೂ ಹೆಣ್ಣಿನಲ್ಲಿ ಮಾತ್ರ ಸಮಸ್ಯೆ ಇರುವುದಿಲ್ಲ. ಇನ್ನು ದೇಹದ ತೂಕ ಹೆಚ್ಚಾಗಿ ಇರುವವರಿಗೆ ಕೂಡಾ ಬೇಗ ಗರ್ಭಧಾರಣೆ ಆಗುವುದಿಲ್ಲ. ಹಾಗಾಗಿ ಎತ್ತರಕ್ಕೆ ತಕ್ಕಂತೆ ತೂಕ ಇರಬೇಕು ಉದಾಹರಣೆಗೆ ಗರ್ಭ ಧರಿಸುವ ಮಹಿಳೆಯ ಎತ್ತರ ೧೬೦ ಸೆಂಟಿಮೀಟರ್ ಇದ್ದರೆ ಅದರಲ್ಲಿ ನೂರನ್ನು ಕಳೆದರೆ ನಮಗೆ ಸಿಗುವುದು ೬೦ ಈ ರೀತಿ ನಾವು ನಮ್ಮ ದೇಹದ ತೂಕ ಮತ್ತು ಎತ್ತರವನ್ನು ಸರಿ ಯಾಗಿ ಅಳತೆ ಮಾಡಿ ಕೊಳ್ಳಬಹುದು.
ಒಂದುವೇಳೆ ಇದಕ್ಕಿಂತ ತೂಕ ಹೆಚ್ಚಿದ್ದರೆ ಸರಿಯಾದ ಆರೋಗ್ಯಕರ ಡಯೆಟ್ ಮಾಡಿಕೊಂಡು ವ್ಯಾಯಾಮ ಮಾಡಿ ದೇಹದ ತೂಕವನ್ನು ಸಾಮಾನ್ಯವಾಗಿ ಏಳರಿಂದ ಹತ್ತು ಕೆಜಿ ಅಷ್ಟು ಆದರೂ ಇಳಿಸಿಕೊಳ್ಳಬೇಕು. ಇನ್ನು ದೇಹದ ತುಕಕ್ಕೂ , ಗರ್ಭ ಧಾರಣೆಗೂ ಏನು ಸಂಬಂಧ ಎಂದು ನೋಡುವುದಾದರೆ , ತೂಕ ಕಡಿಮೆ ಇದ್ದಷ್ಟು ದೇಹದಲ್ಲಿ ಓವುಲೇಶನ್ ಬಿಡುಗಡೆಗೆ ಸಹಾಯ ಆಗುತ್ತದೆ. ಈ ರೀತಿಯಾಗಿ ಮಹಿಳೆಯರು ಗರ್ಭಧಾರಣೆಗೆ ತಮ್ಮನ್ನು ತಾವೇ ತಯಾರಿ ಮಾಡಿಕೊಳ್ಳಬೇಕು.