ಇಂದಿನ ದಿನಗಳಲ್ಲಿ ವೀರ್ಯದಾನವು ತುಂಬಾ ನಿಧಾನವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ವೀರ್ಯದಾನ ಮಾಡುವವರಿಗೆ ತುಂಬಾ ಧೈರ್ಯ ಮತ್ತು ನಿಸ್ವಾರ್ಥ ಭಾವವು ಬೇಕಾಗುತ್ತದೆ. ತುಂಬಾ ಹಿಂದಿನ ವಿಧಾನವನ್ನು ನೀವು ಆನಂದಿಸದೆ ಇದ್ದರೆ ಆಗ ವೀರ್ಯ ದಾನವು ತುಂಬಾ ಬೇಸರ ಮೂಡಿಸಬಹುದು. ಆದರೆ ಈಗ ವಿಜ್ಞಾನವು ಎಷ್ಟು ಮುಂದುವರಿದಿದೆ ಎಂದರೆ ವೀರ್ಯ ದಾನಕ್ಕಾಗಿಯೇ ಯಂತ್ರವನ್ನು ಕಂಡು ಹುಡುಕಿದೆ. ಆದ್ದರಿಂದ ನಾವು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಒಬ್ಬ ಗಂಡಸಿಗೆ ಊರ ತುಂಬಾ ನೂರಾರು ಮಕ್ಕಳು. ಪರಿಣಾಮ ಆ ಮಕ್ಕಳಿಗೆ ಊರ ತುಂಬಾ ಅಣ್ಣ ತಮ್ಮ ಅಕ್ಕ ತಂಗಿಯರು. ಇದು ರಿಯಲ್ ಆಗಿ ನೆಡೆದ ಕತೆಯಾಗಿದೆ. ಈ ಕಥೆಯೂ ನಿಜವಾಗಿರುವುದು ನೆದರಲ್ಯಾಂಡ್ ಮತ್ತು ಅಕ್ಕ ಪಕ್ಕದ ಉರೋಪಿನ ದೇಶಗಳಲ್ಲಿ. ಪುರುಷ ಬಂಜೆತನದ ಪರಿಣಾಮ ಮಕ್ಕಳಾಗದೇ ಕೊರಗುತ್ತಿರುವವರು,ಅಥವಾ ಜೀವನದಲ್ಲಿ ಮದುವೆಯಾಗದೆ ಒಂಟಿಯಾಗಿ ಕೊರಗುವ ಅನೇಕ ಹೆಂಗಸರಿಗೆ ಹೊಸ ದಾರಿಯ ಮೂಲಕ ಮಗುವನ್ನು ಪಡೆದುಕೊಳ್ಳುತ್ತಿದ್ದಾರೆ. ವೀರ್ಯ ಧಾನಿಗಳಿಂದ ವೀರ್ಯವನ್ನು ಪಡೆದು ಮಕ್ಕಳನ್ನು ಪಡೆಯಬಹುದಾಗಿದೆ.
ನೆದರ್ಲ್ಯಾಂಡ್ ನಲ್ಲಿ ಕಾರ್ಪೆಂಟರ್ ಕೆಲಸ ಮಾಡುವ ವ್ಯಾನೆಸ್ಸಾ ಎನ್ನುವವರು ಮದುವೆಯಾಗದೆ ಇದ್ದಾಗ, ವಯಸ್ಸಾಗದೇ ಇರುವ ಮೊದಲು ಒಂದು ಮಗುವನ್ನು ಪಡೆದುಕೊಳ್ಳೋಣ ಎಂದು ತೀರ್ಮಾನಿಸುತ್ತಾರೆ. ಇದಕ್ಕಾಗಿ ವೀರ್ಯ ದಾನಿಯ ಹುಡುಕಾಟಕ್ಕೆ ಶುರುಮಾಡುತ್ತಾರೆ. ವೀರ್ಯ ದಾನಿಗಳ ಅನೇಕ ಫರ್ಟಿಲಿಟಿ ಕ್ಲಿನಿಕ್ ಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿನ ರೇಟು ತುಂಬಾ ದುಬಾರಿ ಎಂದು ವಾಪಸ್ಸಾಗುತ್ತಾರೆ. ನಂತರ ಆನ್ಲೈನ್ನಲ್ಲಿ ವೀರ್ಯದಾನಿಗಾಗಿ ಹುಡುಕಾಟ ಶುರು ಮಾಡುತ್ತಾರೆ. ಆಗ ಜೋನಾಥನ್ ಜೈ ಕಬ್ ಎನ್ನುವರು ಅವರಿಗೆ ದೊರಕುತ್ತಾರೆ. ಅವನ ವೀರ ಪಡೆದು ಆಕೆ ಗರ್ಭವನ್ನು ಧರಿಸುತ್ತಾಳೆ.
ಮೊದಲು ಹೆಣ್ಣು ಮಗುವಿಗೆ ನಂತರ ಮತ್ತೊಮ್ಮೆ ಅವನಿಂದಲೇ ವಿಧಾನವನ್ನು ಪಡೆದು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ತುಂಬಾ ಖುಷಿಯಿಂದ ಆಕೆ ಇರುತ್ತಾಳೆ. ಆದರೆ ಒಂದು ವಿಚಾರ ಆಕೆಗೆ ಆಗಾತವೊಂದು ಕಾದಿರುತ್ತದೆ. ಅದೇನೆಂದರೆ ಅನೇಕ ಜನರಿಗೆ ಇತನೇ ವೀರ್ಯಾಧಾನ ಮಾಡಿದ್ದಾನೆ ಎಂಬ ವಿಚಾರ ಗೊತ್ತಾಗುತ್ತದೆ. ಈ ವಿಚಾರವನ್ನು ತಿಳಿದು ನೆದರ್ಲ್ಯಾಂಡ್ ಆರೋಗ್ಯ ಇಲಾಖೆಯು ತನಿಖೆ ಕೈಗೊಂಡಾಗ ಈತನು ನೂರಕ್ಕೂ ಹೆಚ್ಚು ಮಕ್ಕಳ ಜನ್ಮ ಕಾರಣೀಕರ್ತನಾಗಿದ್ದಾನೆ ಎಂಬುದು ತಿಳಿಯುತ್ತದೆ. ಇದರಲ್ಲಿ ಆಗುವ ಸಮಸ್ಯೆಯೆಂದರೆ ಮಕ್ಕಳು ದೊಡ್ಡವರಾದಮೇಲೆ ವಂಶವಾಹಿನಿಯ ಬಗ್ಗೆ ಗೊತ್ತಿಲ್ಲದೆ ಪ್ರೀತಿಸಿ ಮದುವೆಯಾದರೆ ವಿಕಲಾಂಗ ಮಕ್ಕಳು ಹುಟ್ಟುವ ಸಂಭವ ಹೆಚ್ಚಾಗಿರುತ್ತದೆ. ವೀರ್ಯ ದಾನವು ಈಗಿನ ಕಾಲದಲ್ಲಿ ಒಂದು ವ್ಯಾಪಾರವಾಗಿಬಿಟ್ಟಿದೆ. ಇದು ಮುಂದಿನ ಪೀಳಿಗೆಯನ್ನು ಕುಂಟಿತಗೊಳಿಸುತ್ತದೆ.