ಒಣಕೊಬ್ಬರಿ ಹಾಗೂ ಬೆಲ್ಲ ತಿನ್ನುವುದರಿಂದ ಪುರುಷರಲ್ಲಿ ಏನಾಗುತ್ತೆ ತಿಳಿಯಿರಿ

0 25

ಒಂದು ತುಂಡು ಬೆಲ್ಲವನ್ನು ದಿನಾ ಸವಿಯುವುದರಿಂದ ಎಷ್ಟೊಂದು ಆರೋಗ್ಯಕರ ಗುಣಗಳಿವೆಯೆಂದು ಗೊತ್ತಿದೆಯೇ? ಬೆಲ್ಲದ ಗುಣಗಳ ಬಗ್ಗೆ ತಿಳಿದವರು ದಿನಾ ಒಂದು ತುಂಡು ಬೆಲ್ಲ ಬಾಯಿಗೆ ಹಾಕಿ ಬಾಯಿ ಸಿಹಿಯಾಗಿಸಲು ಮರೆಯುವುದಿಲ್ಲ ನೋಡಿ. ಅದೇ ರೀತಿ ಇನ್ನು ತೆಂಗಿನಕಾಯಿ ಕೂಡಾ ಇದನ್ನು ಇಡೀ ಜಗತ್ತಿನಲ್ಲಿ ಬಳಕೆ ಮಾಡಲಾಗುತ್ತದೆ. ತೆಂಗಿನಕಾಯಿ ಕೇವಲ ಬರೀ ದೇವರ ಪೂಜೆಗೆ ಹಾಗೂ ಅಡುಗೆಗೆ ಮಾತ್ರ ಬಳಕೆ ಮಾಡುವುದು ಅಲ್ಲದೇ ಇದರಿಂದ ನಮಗೆ ಔಷಧೀಯ ಉಪಯೋಗಕ್ಕೂ ಕೂಡಾ ಬಳಕೆ ಮಾಡಿಕೊಳ್ಳಬಹುದು. ಹಾಗಿದ್ದರೆ ಒಣಕೊಬ್ಬರಿ ಇದರ ಜೊತೆಗೆ ಸ್ವಲ್ಪ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಇದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ತೆಂಗಿನ ಕಾಯಿ ಅಥವಾ ಒಣಕೊಬ್ಬರಿ ಇದರಲ್ಲಿ ಇರುವ ಅಂಶಗಳು ಎಂದರೆ ನಾರು, ತಾಮ್ರ, ಮೆಗ್ನೀಷಿಯಂ, ಸತು, ಸಲೋನಿಯಂ ಅಂತಹ ಉತ್ತಮ ಪೋಷಕಾಂಶಗಳನ್ನು ಇದು ಹೊಂದಿರುತ್ತದೆ. ರುಚಿ ಹಾಗೂ ಪರಿಮಳದ ವಿಚಾರದಲ್ಲಿ ಉತ್ತಮ ಗುಣಮಟ್ಟ ಹೊಂದಿರುವ ಇದರ ಬಳಕೆಯಿಂದ ಸಾಕಷ್ಟು ಆರೋಗ್ಯಕರ ಲಾಭಗಳು ಇದೆ. ಅವುಗಳು ಏನೆಂದು ನೋಡುವುದಾದರೆ, ಒಂದು ಅಧ್ಯಯನದ ಪ್ರಕಾರ ನಿಯಮಿತವಾಗಿ ಒಣಕೊಬ್ಬರಿ ಸೇವನೆ ಮಾಡುವುದರಿಂದ ಪುರುಷರಲ್ಲಿ ಉಂಟಾಗುವ ಬಂಜೆತನ ಅಥವಾ ಸಂತಾನೋತ್ಪತ್ತಿ ಮಟ್ಟ ಕಡಿಮೆ ಆಗುವುದು ಇದನ್ನು ನಿಯಂತ್ರಣ ಮಾಡಬಹುದು. ಒಣಕೊಬ್ಬರಿಯಲ್ಲಿ ಇರುವ ಸಲೋನಿಯಮ್ ಎಂಬ ಅಂಶವು ಪುರುಷರಲ್ಲಿ ಉಂಟಾಗುವ ಬಂಜೆತನವನ್ನು ನಿವಾರಣೆ ಮಾಡುತ್ತದೆ. ಪ್ರತೀ ಇಪ್ಪತ್ತೆಂಟು ಗ್ರಾಂ ಒಣಕೊಬ್ಬರಿ ಇದರಲ್ಲಿ ಎರಡು ಮೈಕ್ರೋ ಗ್ರಾಂ ಅಷ್ಟು ಸಲೋನಿಯಮ್ ಎಂಬ ಅಂಶ ಇರುತ್ತದೆ.

ಒಣಕೊಬ್ಬರಿ ತಿನ್ನುವುದರಿಂದ ಇದು ರಕ್ತ ಹೀನತೆಯನ್ನು ನಿವಾರಿಸುತ್ತದೆ. ಒಂದು ನಿರ್ಧಿಷ್ಟ ಅವಧಿಯ ನಂತರ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ರಕ್ತ ಹೀನತೆ ಉಂಟಾಗುತ್ತದೆ. ಇದು ಸಹಜವಾಗಿಯೇ ಉಂಟಾಗುವುದು. ಕಬ್ಬಿಣ ಅಂಶದ ಕೊರತೆಯಿಂದಾಗಿ ತೀವ್ರ ತರದ ಆರೋಗ್ಯಕರ ಸಮಸ್ಯೆಗಳು ಉಂಟಾಗುತ್ತವೆ. ಒಣಕೊಬ್ಬರಿ ಇದನ್ನು ತಿನ್ನುವುದರಿಂದ ಹೆಚ್ಚೆಚ್ಚು ಕಬ್ಬಿಣ ಅಂಶವನ್ನು ಹೀರಿ ರಕ್ತದಲ್ಲಿ ಕಬ್ಬಿಣದ ಕೊರತೆ ಉಂಟಾಗುವುದನ್ನು ತದೆದು ರಕ್ತ ಹೀನತೆ ಉಂಟಾಗುವುದನ್ನು ಸಹ ತಡೆಯುತ್ತದೆ. ಅಷ್ಟೇ ಅಲ್ಲದೆ ಒಣಕೊಬ್ಬರಿ ಇದು ಅನೇಕ ಪೋಷಕಾಂಶಗಳನ್ನು ಹೊಂದಿರುವುದರಿಂದ ದೇಹಕ್ಕೆ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈಗಿನ ಯುವಜನತೆ ಯಾವುದೇ ಒಂದು ಕೆಲಸ ಮಾಡುವುದಾದರೂ ಪೌಷ್ಟಿಕಾಂಶಗಳ ಕೊರತೆಯಿಂದಾಗಿ ನಿಶ್ಯಕ್ತಿ ಹೊಂದುತ್ತಾರೆ. ಹಾಗಿದ್ದಾಗ ಒಣಕೊಬ್ಬರಿ ಜೊತೆಗೆ ಸ್ವಲ್ಪ ಬೆಲ್ಲವನ್ನು ತಿನ್ನುವುದರಿಂದ ನಿಶ್ಯಕ್ತಿ ದೂರ ಆಗುವುದು. ಈ ರೀತಿಯಾಗಿ ನಾವು ಒಣಕೊಬ್ಬರಿ ಹಾಗೂ ಬೆಲ್ಲವನ್ನು ನಿಯಮಿತವಾಗಿ ಸೇವಿಸುವುದರಿಂದ ಈ ಎಲ್ಲಾ ಲಾಭಗಳನ್ನು ಪಡೆಯಬಹುದು.

Leave A Reply

Your email address will not be published.