ಪುರುಷರ ಮಹಿಳೆಯ ಅಂದಕ್ಕೆ ಮರುಳಾಗುತ್ತಾನೆ ಎಂಬುವುದು ನಿಜ, ಆದರೆ ಅದುವೇ ನೂರರಷ್ಟು ಸತ್ಯವಲ್ಲ. ಪುರುಷ ಮಹಿಳೆಯಲ್ಲಿ ಏನನ್ನು ನೋಡಿ ಆಕರ್ಷಿತನಾಗುತ್ತಾನೆ ಎಂದು ಕೇಳಿದರೆ ಬಹುತೇಕ ಎಲ್ಲಾ ಮಹಿಳೆಯರು ಅಂದ ನೋಡಿ ಎಂದು ಹೇಳಬಹುದು. ಆದರೆ ಅದಕ್ಕೂ ಮಿಗಿಲಾಗಿ ಸೌಂದರ್ಯಕ್ಕಿಂತ ಇತರ ಗುಣಗಳಿಗೆ ಹೆಚ್ಚು ಆಕರ್ಷಿತನಾಗುತ್ತಾನೆ. ಅಚ್ಚರಿ ಅನಿಸುತ್ತಿದೆ ಅಲ್ವಾ? ಹೌದು, ಪುರುಷ ಅಂದಕ್ಕಿಂತ ಈ ಗುಣಗಳಿರುವ ಮಹಿಳೆಯತ್ತ ಹೆಚ್ಚು ಆಕರ್ಷಿತನಾಗುತ್ತಾನೆ ಎಂದು ಇಂಗ್ಲೆಂಡ್‌ನ ನ್ಯೂ ಕಾಸ್ಟಲ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನ ಹೇಳಿದೆ. ಹಾಗಿದ್ದರೆ ಇಂತಹ ಲಕ್ಷಣಗಳನ್ನು ಹೊಂದಿದ ಮಹಿಳೆಗೆ ಪುರುಷ ಹೆಚ್ಚು ಆಕರ್ಷಿತನಾಗುತ್ತಾನೆ? ಎನ್ನುವುದನ್ನು ನೋಡೋಣ.

ಯಾವ ಬಗೆಯ ಮಹಿಳೆಯತ್ತ ಪುರುಷ ಆಕರ್ಷಿಸುತ್ತಾನೆ ಎಂದು ನೋಡುವುದಾದರೆ, ದೊಡ್ಡ ಧ್ವನಿ ಇದ್ದು ಮೆಲ್ಲನೆ ಮಾತನಾಡುವವರು ಪುರುಷರಿಗೆ ಬಹಳ ಬೇಗ ಇಷ್ಟವಾಗುತ್ತಾರೆ. ಜೋರು ಧ್ವನಿಯವರು , ಜೋರಾಗಿ ಕೂಗಾಡಿ ಮಾತು ಆಡುವ ಸ್ತ್ರೀಯರು ಇಷ್ಟವಾಗುವುದಿಲ್ಲ ಎಂದೇ ಪುರುಷರು ಬಯಸುತ್ತಾರೆ. ಆದರೆ ಗುಸು-ಗುಸು ಮಾತನಾಡುವವರಿಗಿಂತ ಗಟ್ಟಿ ಧ್ವನಿಯಲ್ಲಿ ಮಾತಮಾಡಿದರೆ ಅವರಲ್ಲಿ ಬೇರೆಯದೇ ರೀತಿಯ ಎನರ್ಜಿ ಇರುತ್ತದೆ ಆ ಎನರ್ಜಿ ಪುರುಷನನ್ನು ಆಕರ್ಷಿಸುವುದು. ಇನ್ನು ನಗು. ಸುಂದರವಾದ ನಗುವಿನ ಮುಖವನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ. ಯಾವುದೇ ಒಬ್ಬ ವ್ಯಕ್ತಿ ಮುಖ ಗಂಟು ಹಾಕಿಕೊಂಡು ಇದ್ದರೆ ಅಂಥವರನ್ನು ಮಾತನಾಡಿಸಬೇಕುಃ ಎಂದೇ ಅನಿಸುವುದಿಲ್ಲ ಅದೇ ಮುಖದಲ್ಲಿ ನಗುವಿರುವ ವ್ಯಕ್ತಿಯೊಡನೆ ಆತ್ಮೀಯತೆ ಮೂಡುತ್ತದೆ. ಅಲ್ಲದೆ ಇಂಥ ಮಹಿಳೆಯರ ಕಡೆಗೆ ಪುರುಷ ಆಕರ್ಷಿತನಾಗುತ್ತಾನೆ ಎಂದು ಅಧ್ಯಯನ ತಿಳಿಸಿದೆ.

ಇನ್ನೂ ಮೇಕಪ್ ವಿಷಯಕ್ಕೆ ಬರುವುದಾದರೆ ಕಡಿಮೆ ಮೇಕಪ್ ಮಾಡುವ ಹುಡುಗಿಯರು ಹುಡುಗರಿಗೆ ಇಷ್ಟ ಆಗುತ್ತಾರೆ ಎನ್ನುತ್ತಾರೆ. ಮೇಕಪ್‌ ಮಾಡುವುದೇ ಇನ್ನೊಬ್ಬರು ನಮ್ಮನ್ನು ನೋಡಲಿ ಎಂದು. ಹೆಣ್ಣುಮಕ್ಕಳು ಗಾಢ ಮೇಕಪ್ ಮಾಡಿಕೊಂಡು ಹೋದರೆ ನಮ್ಮ ಅಂದವನ್ನು ಪುರುಷರು ಹೊಗಳಬಹುದು ಎಂದುಕೊಳ್ಳುತ್ತಾರೆ. ಆದರೆ ಇಷ್ಟಪಡುತ್ತಾರಾ ಎಂದು ಕೇಳಿದರೆ ಈ ಮಾತನ್ನು ಹೇಳುವುದು ಕಷ್ಟವಾಗುವುದು. ನೀವು ಯಾವುದೇ ಪುರುಷರನ್ನು ಕೇಳಿ ನೋಡಿ ತುಂಬಾ ಮೇಕಪ್ ಮಾಡುವ ಹೆಣ್ಣುಮಕ್ಕಳಿಗಿಂತ ಕಡಿಮೆ ಮೇಕಪ್ ಮಾಡುವವರೇ ಇಲ್ಲ ಸ್ವಲ್ಪವೂ ಮೇಕಪ್ ಮಾಡದೆಯೇ ತಾವು ಇದ್ದ ಹಾಗೇ ಇರುವಂತಹ ಹೆಣ್ಣುಮಕ್ಕಳೇ ಪುರುಷರಿಗೆ ಇಷ್ಟವಾಗುವುದು. ಇನ್ನು ದೊಡ್ಡ ಕಂಗಳನ್ನು ಹೊಂದಿರುವ ಮಹಿಳೆ ತುಂಬಾ ಆಕರ್ಷಿತರಾಗಿ ಕಾಣುತ್ತಾರೆ ಎಂದು ಹೇಳಲಾಗುತ್ತದೆ. ಅಲ್ಲದೆ ದೊಡ್ಡ ಕಣ್ಣುಗಳು ಆರೋಗ್ಯದ ಸಂಕೇತ ಕೂಡ ಎಂದು ಹೇಳಲಾಗುವುದು. ದೊಡ್ಡ ಕಣ್ಣುಗಳನ್ನು ಹೊಂದಿರುವವರಲ್ಲಿ ಈಸ್ಟ್ರೋಜಿನ್ ಉತ್ಪತ್ತಿ ಹೆಚ್ಚಿಗಿ ಇರುತ್ತದೆ ಅಧಿಕ ಈಸ್ಟ್ರೋಜಿನ್ ಹೊಂದಿರುವವರು ಕಡಿಮೆ ಈಸ್ಟ್ರೋಜಿನ್ ಹೊಂದಿರುವಬಾರಿಗಿಂತ ಅಧಿಕ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇನ್ನು ಪುರುಷನಿಗೆ ಇಷ್ಟವಾಗಲು ನಾವು ತುಂಬಾ ಆಕರ್ಷಕವಾಗಿರಬೇಕು ಎಂದು ಎಷ್ಟೋ ಮಹಿಳೆಯರು ಅಂದುಕೊಂಡಿರುತ್ತಾರೆ. ಆದರೆ ತುಂಬಾ ಅಂದವಾದ ಮಹಿಳೆಗಿಂತ ಸಾಧಾರಣ ರೂಪಿನ ಮಹಿಳೆಯತ್ತ ಪುರುಷ ಹೆಚ್ಚು ಆಕರ್ಷಿತನಾಗುತ್ತಾನೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!