ಸಾಮಾನ್ಯವಾಗಿ ಬಾಳೆಲೆಯಲ್ಲಿ ಊಟ ಮಾಡೋದು ಅಂದ್ರೆ ಬಹಳಷ್ಟು ಜನಕ್ಕೆ ತುಂಬಾನೇ ಇಷ್ಟವಾದದ್ದು ಇನ್ನು ಬಾಳೆಲೆಯಲ್ಲಿ ಅನೇಕ ಬಗೆಯ ಔಷಧಿ ಗುಣಗಳನ್ನು ನಾವು ಕಾಣಬಹುದು. ಕೆಲವರು ಬಾಳೆಲೆಯಲ್ಲಿ ಊಟ ಮಾಡ್ತಾರೆ ಆದ್ರೆ ಅದರಲ್ಲಿರುವಂತ ಹಲವು ಬಗೆಯ ಗುಣಗಳನ್ನು ತಿಳಿದಿರುವುದಿಲ್ಲ ಆಗಾಗಿ ಈ ಮೂಲಕ ಇದರ ಪ್ರಯೋಜನವನ್ನು ತಿಳಿಯೋಣ ಬನ್ನಿ. ಬಾಳೆ ಎಲೆಯಲ್ಲಿ ಆಹಾರ ಸೇವನೆ ಮಾಡುವ ಪದ್ಧತಿ ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಮದುವೆ ಸೇರಿದಂತೆ ಧಾರ್ಮಿಕ ಸಮಾರಂಭಗಳಲ್ಲಿ ಬಾಳೆ ಎಲೆಯಲ್ಲಿಯೇ ಊಟ ಬಡಿಸಲಾಗುತ್ತದೆ.ಇದರಲ್ಲಿ ಹಲವಾರು ಆರೋಗ್ಯಕರ ಲಾಭಗಳಿವೆ. ಹಾಗೂ ಊಟದ ರುಚಿಯನ್ನ ಹೆಚ್ಚಿಸುವ ಶಕ್ತಿ ಬಾಳೆ ಎಲೆಗಿದೆ. ಆಗಿರುವಾಗ ಇದರ ಮಹತ್ವ ಎಂತದ್ದು ಎಂದು ನಿಮಲ್ಲರಿಗೂ ಗೊತ್ತಿರುವ ವಿಷಯ.
ಬಹುಪಯೋಗಗಳು: ಚರ್ಮಕ್ಕೆ ಸಂಬಂಧಿಸಿದ ರೋಗಗಳಿಗೆ ಬಾಳೆ ಎಲೆ ರಾಮಬಾಣ. ಬಾಳೆ ಎಲೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಹಚ್ಚುವುದರಿಂದ ಚರ್ಮ ರೋಗ ಕಡಿಮೆಯಾಗುತ್ತದೆ.
ಬಾಳೆ ಎಲೆಯಲ್ಲಿ ಪ್ರತಿದಿನ ಊಟ ಮಾಡುವುದರಿಂದ ಬೆಳ್ಳಗಾಗಿರುವ ಕೂದಲು ಹೊಳಪು ಪಡೆದು ಕಪ್ಪುಬಣ್ಣಕ್ಕೆ ತಿರುಗುತ್ತದೆ. ಸಸ್ಯಹಾರಿ ಆಹಾರವನ್ನು ಬಾಳೆ ಎಲೆಯಲ್ಲಿ ಸುತ್ತಿ ತುಂಬಾ ಸಮಯದವರೆಗೆ ತಾಜಾ ಇಡಬಹುದು.
ಗರ್ಭಿಣಿಯರು ಬಾಳೆ ಎಳೆಯಲ್ಲಿ ಊಟ ಮಾಡಿದರೆ ಹುಟ್ಟುವ ಮಗುವಿನ ಅರೋಗ್ಯ ಚನ್ನಾಗಿರುತ್ತದೆ.
ಬಾಳೆ ಎಲೆಗೆ ಬಿಸಿ ಆಹಾರ ಹಾಕುವುದರಿಂದ ಬಾಳೆ ಎಲೆಯಲ್ಲಿರುವ ಪೌಷ್ಟಿಕಾಂಶ ಆಹಾರದ ಜೊತೆ ಬೆರೆತು ಆರೋಗ್ಯ ವೃದ್ಧಿಯಾಗುತ್ತದೆ. ಹಾಗಾಗಿ ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಹೆಚ್ಚಾಗಿ ಊಟಕ್ಕೆ ಬಳಸುತ್ತಾರೆ ಅವುಗಳಿಗಿಂತ ಬಾಳೆಲೆ ಹೆಚ್ಚಾಗಿ ಬಳಸಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ನೈಸರ್ಗಿಕವಾಗಿ ಸಿಗುವಂತ ಇಂಥ ಹಲವು ಬಗೆಯ ಔಷಧಿ ಗುಣಗಳನ್ನು ಹೊಂದಿರುವ ಇವುಗಳನ್ನು ಬಳಸಿಕೊಳ್ಳಿ.