ದರ್ಶನ್ ಹಾಗೂ ಸುದೀಪ್ ಸ್ನೇಹದ ಬಗ್ಗೆ ಕನ್ನಡದ ಹಿರಿಯ ನಟ ವಿ ರವಿಚಂದ್ರನ್ ಅವರು ಹೇಳಿದ ಮಾತು ಏನೂ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಕನ್ನಡ ಚಿತ್ರರಂಗದ ಟಾಪ್​ ನಟರಲ್ಲಿ ಮೊದಲು ಕೇಳಿಬರುವ ಹೆಸರುಗಳೆಂದರೆ ದರ್ಶನ್​ ಮತ್ತು ಸುದೀಪ್​ ಅವರದ್ದು. ದರ್ಶನ್​ ಮತ್ತು ಸುದೀಪ್​ ಅಭಿಮಾನಿಗಳಿಗೆ ಮಾರ್ಚ್​ 5 ಎಂಬುದು ಒಂದು ರೀತಿಯ ಕರಾಳ ದಿನ. ನಾಲ್ಕು ವರ್ಷಗಳ ಹಿಂದೆ ಇದೇ ದಿನಾಂಕದಂದು ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಕಿಚ್ಚ-ದಚ್ಚು ಸ್ನೇಹ ಮುರಿದು ಬಿದ್ದಿತ್ತು. ಆರಂಭದ ದಿನಗಳಿಂದಲೂ ಈ ನಟರ ನಡುವೆ ಉತ್ತಮ ಬಾಂಧವ್ಯ ಬಾಂಧವ್ಯ ಇತ್ತು. 1997ರ ಸಮಯದಲ್ಲಿ ಆಗ ತಾನೇ ಚಿತ್ರರಂಗಕ್ಕೆ ಕಾಲಿಟ್ಟ ಸುದೀಪ್​ ಮತ್ತು ದರ್ಶನ್​ ನಂತರದಲ್ಲಿ ಸ್ಟಾರ್​ ಕಲಾವಿದರಾಗಿ ಬೆಳೆದರು. ಸೋಲು-ಗೆಲುವು ಏನೇ ಇದ್ದರೂ ಇಬ್ಬರ ನಡುವಿನ ಸ್ನೇಹ ಗಟ್ಟಿ ಆಗಿತ್ತು. ಸಿನಿಮಾ ಸಮಾರಂಭಗಳ ವೇದಿಕೆಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಸುದೀಪ್​ ನೀಡಿದ ಒಂದೇ ಒಂದು ಹೇಳಿಕೆಯಿಂದಾಗಿ ದರ್ಶನ್​ ಮನಸ್ಸು ಬದಲಾಗಿ ಬಿಟ್ಟಿತ್ತು.

ಇಷ್ಟಕ್ಕೂ ಸುದೀಪ್​ ಹೇಳಿದ್ದೇನು? ಎಂದು ನೋಡುವುದಾದರೆ , ದರ್ಶನ್​ಗೆ 2002ರಲ್ಲಿ ಮೆಜೆಸ್ಟಿಕ್​ ಸಿನಿಮಾ ದೊಡ್ಡಮಟ್ಟದ ಬ್ರೇಕ್​ ನೀಡಿತು. ಅಷ್ಟರಲ್ಲಾಗಲೇ ಸುದೀಪ್​ ಸ್ಪರ್ಶ, ಹುಚ್ಚ ಸಿನಿಮಾಗಳಿಂದಾಗಿ ಕರುನಾಡಿನಲ್ಲಿ ಮನೆ ಮಾತಾಗಿದ್ದರು. ಮೆಜೆಸ್ಟಿಕ್ ಚಿತ್ರಕ್ಕೆ ದರ್ಶನ್​ ಹೆಸರನ್ನು ತಾವೇ ಸೂಚಿಸಿದ್ದು ಎಂದು ಸುದೀಪ್​ ಅವರು 2017ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದರು. ಈ ಸಂದರ್ಶನದ ತುಣುಕು ದರ್ಶನ್​ ಕಣ್ಣಿಗೆ ಬೀಳುತ್ತಿದ್ದಂತೆಯೇ ಅವರಿಗೆ ಬೇಸರವಾಯಿತು. ಅದಕ್ಕೆ ಅವರು ನೀಡಿದ ಪ್ರತಿಕ್ರಿಯೆ ಸಿಕ್ಕಾಪಟ್ಟೆ ಖಾರವಾಗಿತ್ತು. ಇದಕ್ಕೆ ಟ್ವೀಟ್​ ಮೂಲಕ ದರ್ಶನ್​ ಖಾರದ ಸುದೀಪ್​ ಹೇಳಿಕೆ ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ದರ್ಶನ್​ ಅವರು ಟ್ವಿಟ್ಟರ್​ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು. ಮೆಜೆಸ್ಟಿಕ್​ ಚಿತ್ರಕ್ಕೆ ನನ್ನ ಹೆಸರನ್ನು ಸೂಚಿಸಿದ್ದು ಸುದೀಪ್​ ಅಲ್ಲ ಎಂಬುದನ್ನು ದರ್ಶನ್​ ಸ್ಪಷ್ಟಪಡಿಸಿದ್ದು ಮಾತ್ರವಲ್ಲದೇ ಒಂದು ಖಡಕ್​ ನಿರ್ಧಾರ ತೆಗೆದುಕೊಂಡು ಸುದೀಪ್​ ಜೊತೆಗಿನ ಸ್ನೇಹಕ್ಕೆ ಅಂತ್ಯ ಹಾಡಲು ಅವರು ಮುಂದಾದರು. ಇದು ಅಭಿಮಾನಿಗಳಿಗೆ ಮಾತ್ರವಲ್ಲದೆ, ಇಡೀ ಚಿತ್ರರಂಗಕ್ಕೆ ಶಾಕ್​ ನೀಡಿದ ಘಟನೆ ಆಯಿತು.

ಇಷ್ಟಕ್ಕೂ 2017 ಮಾರ್ಚ್ 5ರ ದರ್ಶನ್ ಟ್ವೀಟ್​ ನಲ್ಲಿ ಏನಿತ್ತು? ಅಂತದ್ದು ಎಂದು ನೋಡುವುದಾದರೆ , ನಾನು ಮತ್ತು ಸುದೀಪ್​ ಇನ್ಮುಂದೆ ಸ್ನೇಹಿತರಲ್ಲ. ನಾವು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟರು ಮಾತ್ರ. ದಯವಿಟ್ಟು ಯಾವುದೇ ಊಹಾಪೋಹಗಳು ಬೇಡ. ಇದು ಇಲ್ಲಿಗೆ ಮುಗಿಯಿತು ಎಂದು ದರ್ಶನ್​ ಟ್ವೀಟ್​ ಮಾಡಿದರು. ಈ ಬೆಳವಣಿಗೆಯನ್ನು ಯಾರೂ ಸಹ ನಿರೀಕ್ಷಿಸಿರಲಿಲ್ಲ. ಅಂದಿನಿಂದ ಸುದೀಪ್​ ಮತ್ತು ದರ್ಶನ್​ ಅಭಿಮಾನಿಗಳ ನಡುವೆಯೂ ಒಂದು ಗೆರೆ ಮೂಡಿತು. ಅದು ಇಂದಿಗೂ ಮುಂದುವರಿಯುತ್ತಲೇ ಇದೆ. ದಶಕಗಳ ಕಾಲ ತಮ್ಮ ಜೊತೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ ಗೆಳೆಯ ಹೀಗೆ ಏಕಾಏಕಿ ಸ್ನೇಹ ಮುರಿದುಕೊಂಡಿದ್ದು ಸುದೀಪ್​ ಅವರಿಗೂ ಬೇಸರ ತಂದಿತ್ತು. ಆದರೆ ಅವರು ಯಾವುದೇ ರೀತಿಯಲ್ಲಿ ಆಕ್ರಮಣಕಾರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ. ಹಲವು ಸಂದರ್ಶನಗಳಲ್ಲಿ ಅವರಿಗೆ ಈ ಬಗ್ಗೆ ಪ್ರಶ್ನೆ ಎದುರಾಯಿತು. ಆಗೆಲ್ಲ ದರ್ಶನ್​ ಬಗ್ಗೆ ತಮ್ಮ ಮನದಲ್ಲಿ ಇನ್ನೂ ಸ್ನೇಹದ ಭಾವನೆ ಇದೆ ಎಂಬುದನ್ನು ಸೂಚ್ಯವಾಗಿ ಹೇಳುತ್ತಲೇ ಇದ್ದರು. ಆದರೆ ದರ್ಶನ್​ ಮನಸ್ಸು ಬದಲಾಗಲಿಲ್ಲ. ಕಡೆಕಡೆಗೆ ಸುದೀಪ್​ ಕೂಡ ಈ ವಿಚಾರವನ್ನು ಬಿಟ್ಟುಬಿಟ್ಟರು.

ಸೋಷಿಯಲ್​ ಮೀಡಿಯಾದಲ್ಲಿ ಇಂದಿಗೂ ದರ್ಶನ್​ ಮತ್ತು ಸುದೀಪ್​ ಅಭಿಮಾನಿಗಳ ಮಧ್ಯೆ ಆಗಾಗ ವಾರ್​ ನಡೆಯುತ್ತದೆ ಎಂಬುದು ನಿಜ. ಅದರ ನಡುವೆಯೂ ಈ ಸ್ಟಾರ್​ ಕಲಾವಿದರಿಬ್ಬರೂ ಒಂದಾಗಲಿ ಎಂದು ಅನೇಕ ಅಭಿಮಾನಿಗಳು ಬಯಸುತ್ತಿದ್ದಾರೆ. ತಮ್ಮ ಬಯಕೆಯನ್ನು ಕಾಮೆಂಟ್​ಗಳ ಮೂಲಕ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಆದರೆ ಅವರ ಬಯಕೆ ಈಡೇರುವ ಕಾಲ ಈವರೆಗೂ ಬಂದಿಲ್ಲ. ಆದರೆ ಇದರ ನಡುವೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಒಂದು ಟ್ವೀಟ್ ಮಾಡಿದ್ದು ಮತ್ತೆ ಈ ವಿಷಯ ಚರ್ಚೆಗೆ ಕಾರಣವಾಗಿದೆ. ಸಧ್ಯ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರಿಗೂ ಬುದ್ಧಿ ಮಾತು ಹೇಳುವ ಅಧಿಕಾರ, ಅನುಭವ ಇರುವ ವ್ಯಕ್ತಿ ಎಂದರೆ ಅದು ರವಿಚಂದ್ರನ್ ಅವರು. ಅವರಿಗೆ ಇರುವ ಅನುಭವ , ಅವರಿಗೆ ಆಗಿರುವ ವಯಸ್ಸು ಇವುಗಳಿಂದ ರವಿಚಂದ್ರನ್ ಅವರ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಸುದೀಪ್ ಅವರಂತೂ ರವಿಚಂದ್ರನ್ ಅವರನ್ನು ಬಹಳವೇ ಹಚ್ಚಿಕೊಂಡಿದ್ದಾರೆ ಹಾಗೆ ರವಿಚಂದ್ರನ್ ಅವರೂ ಕೂಡಾ ಸುದೀಪ್ ಅವರನ್ನು ಬಹಳವೇ ಹಚ್ಚಿಕೊಂಡಿದ್ದು ಮಾತ್ರವಲ್ಲದೆ ಸುದೀಪ್ ಅವರನ್ನು ಪ್ರೀತಿಯಿಂದ ತನ್ನ ದೊಡ್ಡ ಮಗ ಎಂದೇ ಕರೆಯುತ್ತಾರೆ. ಇನ್ನು ದರ್ಶನ್ ಅವರ ಜೊತೆಗೂ ಕೂಡಾ ರವಿಚಂದ್ರನ್ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಈ ರೀತಿಯಾಗಿ ರವಿಚಂದ್ರನ್ ಇಬ್ಬರೂ ಸ್ಟಾರ್ ನಟರ ಜೊತೆಗೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹಾಗಾಗಿ ರವಿಚಂದ್ರನ್ ಅವರು ಇತ್ತೀಚೆಗೆ ಅಷ್ಟೇ ಸುದೀಪ್ ಹಾಗೂ ದರ್ಶನ್ ಇಬ್ಬರೂ ಆದಷ್ಟು ಬೇಗ ಒಂದಾಗಲಿ ಎನ್ನುವ ಅರ್ಥದಲ್ಲಿ ಒಂದು ಟ್ವೀಟ್ ಮಾಡಿದ್ದಾರೆ.

ಇದು ಚರ್ಚೆಗೆ ಕಾರಣವಾದ ವಿಷಯ. ಒಂದಿಷ್ಟು ಜನರು ಇದು ಫೇಕ್ ಅಕೌಂಟ್ ಎಂದೂ ಇನ್ನೂ ಕೆಲವರು ಇದು ಸತ್ಯ ಹೌದೋ ಅಲ್ಲವೋ ಎಂದು ಅನುಮಾನ ಪಡುತ್ತಿದ್ದಾರೆ. ಒಂದು ವೇಳೆ ಇದು ಫೇಕ್ ಅಕೌಂಟ್ ಆಗಿದ್ದರೆ ಅದರಲ್ಲಿನ ಆಕ್ಟಿವಿಟೀಸ್ ನೋಡಿದಾಗ ಅದು ಫೇಕ್ ಅಕೌಂಟ್ ಎಂದು ಎನ್ನಿಸುವುದಿಲ್ಲ. ಇನ್ನು ದರ್ಶನ್ ತೂಗುದೀಪ ಎನ್ನುವ ಅಕೌಂಟ್ ನಿಂದ ಅದಕ್ಕೆ ಪ್ರತಿಕ್ರಿಯೆ ಕೂಡಾ ಬಂದಿದೆ. ಅಷ್ಟೇ ಅಲ್ಲದೆ ರವಿಚಂದ್ರನ್ ಹಾಗೂ ಜಗ್ಗೇಶ್ ಇಬ್ಬರೂ ಕೂಡಾ ಅದೇ ಅಕೌಂಟ್ ನಿಂದ ದರ್ಶನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗನ್ನು ತಿಳಿಸಿದ್ದಾರೆ. ಇವೆಲ್ಲವನ್ನೂ ಗಮನಿಸಿದಾಗ ರವಿಚಂದ್ರನ್ ಅವರ ಟ್ವೀಟ್ ಅದು ಫೇಕ್ ಅಲ್ಲಾ ನಿಜ ಎಂದೇ ತಿಳಿಯುತ್ತದೆ. ಆದರೆ ಇದ್ದಕ್ಕಿದ್ದ ಹಾಗೇ ರವಿಚಂದ್ರನ್ ಅವರು ಯಾಕೆ ಈ ರೀತಿ ಟ್ವೀಟ್ ಮಾಡಿದರು ಎನ್ನುವುದರ ಬಗ್ಗೆ ಚರ್ಚೆ ಕೂಡಾ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!