ತನ್ನ ಅದ್ಭುತ ನಟನೆ, ವಿಶಿಷ್ಟವಾದ ಡ್ಯಾನ್ಸ್ ಮೂಲಕ ಜನರ ಮನಸ್ಸನ್ನು ಗೆದ್ದ ತಮಿಳು ನಟ ವಿಜಯ್ ಅವರು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮಿಳು ಚಿತ್ರರಂಗದಲ್ಲಿ ವಿಜಯ್ ಅವರು ತನ್ನದೆ ಆದ ಛಾಪು ಮೂಡಿಸಿದ್ದಾರೆ. ವಿಜಯ್ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ಅವರ ಸಿನಿಮಾಗಳ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ತಮಿಳು ನಟ ವಿಜಯ್ ಅವರ ನಿಜವಾದ ಹೆಸರು ಜೋಸೆಫ್ ವಿಜಯ್ ಚಂದ್ರಶೇಖರ್. ಇವರು ಸಿನಿಮಾಗಳಲ್ಲಿ ನಟಿಸುವುದರೊಂದಿಗೆ, ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾರೆ ಅಲ್ಲದೆ ಸಿಂಗರ್ ಕೂಡ ಹೌದು. ಇವರು 1974 ಜೂನ್ 22 ರಂದು ಚೆನ್ನೈನಲ್ಲಿ ಜನಿಸಿದ್ದಾರೆ. ತಂದೆಯ ಹೆಸರು ಎಸ್. ಎ ಚಂದ್ರಶೇಖರ್, ತಾಯಿಯ ಹೆಸರು ಶೋಭಾ ಚಂದ್ರಶೇಖರ್ ಅವರು ಕೂಡ ಸಿಂಗರ್. ಇವರು ಸಂಗೀತಾ ಎಂಬುವವರನ್ನು 25 ಆಗಸ್ಟ್ 1999 ರಂದು ಮದುವೆಯಾಗಿದ್ದಾರೆ. ಇವರಿಗೆ ಮಗ ಹಾಗೂ ಮಗಳಿದ್ದಾಳೆ, ಮಗನ ಹೆಸರು ಜೇಸನ್ ಸಂಜಯ್ ಹಾಗೂ ಮಗಳ ಹೆಸರು ದಿವ್ಯಾ. ಇವರು ತಮ್ಮ ಶಿಕ್ಷಣವನ್ನು ಚೆನ್ನೈನಲ್ಲಿ ಮುಗಿಸಿದ್ದಾರೆ. ಇವರ ಮೆಚ್ಚಿನ ನಟ ಕಮಲ ಹಾಸನ್, ರಜನಿಕಾಂತ್ ಹಾಗೂ ಅಮಿತಾಬ್ ಬಚ್ಚನ್. ಇವರ ಮೆಚ್ಚಿನ ನಟಿ ಸಿಮ್ರಾನ್.

ಇವರಿಗೆ ಸ್ಟಂಟ್ ಮಾಡುವುದು, ಡ್ಯಾನ್ಸ್ ಮಾಡುವುದು ಮತ್ತು ಹಾಡುವುದು ಎಂದರೆ ಇಷ್ಟ. ಇವರು ಸುಮಾರು 60 ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಜಯ್ ಅವರು ತಮಿಳು ಚಿತ್ರರಂಗದ ಬಹುತೇಕ ಎಲ್ಲ ಸ್ಟಾರ್ ನಟಿಯರೊಂದಿಗೆ ನಟಿಸಿದ್ದಾರೆ. ತೆರಿ, ಪೂವೆ ಉನಕಗ, ಪ್ರಿಯಮನವಲೆ, ಖುಷಿ, ನಂಬನ್, ಕತ್ತಿ, ಗಿಲ್ಲಿ, ತಿರುಮಲೈ, ಫ್ರೆಂಡ್ಸ್, ತುಪಾಕಿ ಹೀಗೆ ಅನೇಕ ಸಿನಿಮಾಗಳಲ್ಲಿ ವಿಜಯ್ ಅವರು ನಟಿಸಿ, ಜನಪ್ರಿಯ ನಟರೆಂದು ಗುರುತಿಸಿಕೊಂಡಿದ್ದಾರೆ. ಇವರಿಗೆ ತಮಿಳಿನ ಉತ್ತಮ ನಟನೆಂಬ ಅವಾರ್ಡ್ ಕೂಡ ಲಭಿಸಿದೆ. ಇವರು ಒಂದು ಸಿನಿಮಾಕ್ಕೆ 2 ಕೋಟಿ ರೂಪಾಯಿ ಹಣವನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಇವರ ಬಳಿ ಉತ್ತಮ ಮಟ್ಟದ ಕಾರುಗಳಿವೆ. ವಿಜಯ್ ಅವರ ಕುಟುಂಬದವರೊಂದಿಗಿನ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ವಿಜಯ್ ಅವರು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿ, ಜನರಿಗೆ ಉತ್ತಮ ಮನರಂಜನೆ ಸಿಗುವಂತಾಗಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!