ಸಾಮಾನ್ಯವಾಗಿ ಕೋಣಕ್ಕೆ ಹೆಚ್ಚೆಂದರೆ ಎರಡರಿಂದ ಎರಡೂವರೆ ಲಕ್ಷಕ್ಕೆ ಬೆಲೆಬಾಳುತ್ತದೆ. ಆದರೆ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ-ಐನಾಪುರ ಗ್ರಾಮದ ಒಂದು ಕೋಣಕ್ಕೆ 61 ಲಕ್ಷಕ್ಕೆ ಬೆಲೆಬಾಳುತ್ತದೆ. ಮನೆಯಲ್ಲೇ ಸಾಕಿರುವ ಸಾಮಾನ್ಯ ತಳಿಯ ಕೋಣ ಗಜೇಂದ್ರ. ಮೂರು ವರ್ಷದ ಈ ಕೋಣ ಮನೆಯಲ್ಲೇ ಹುಟ್ಟಿ ಬೆಳೆಯುತ್ತಿದೆ.ದಪ್ಪ ಕಾಲುಗಳು, ದೈತ್ಯಾಕಾರದ ದೇಹವನ್ನು ಹೊಂದಿರುವ ಕೋಣದ ಹೆಸರು ಗಜೇಂದ್ರ.

ಗಜೇಂದ್ರ ಕೋಣವನ್ನ ಸಾಕಲು ದಿನಕ್ಕೆ 1,200 ರೂಪಾಯಿ ವರೆಗೂ ಖರ್ಚಾಗುತ್ತಿದ್ದು, ಅದನ್ನ ಖರ್ಚು ಅಂದುಕೊಳ್ಳದೆ ತನ್ನ ಮನೆಯ ಮಗನಂತೆ ಸಾಕುತ್ತಿದ್ದೇನೆ ಎಂದು ವಿಲಾಸ ನಾಯಿಕ್ ಹೇಳುತ್ತಾರೆ.ಮಾರಾಟ ಮಾಡದೆ ಚೆನ್ನಾಗಿ ಮೇಯಿಸಿ ಮಗನಂತೆ ಈ ಮಟ್ಟಿಗೆ ಬೆಳೆಸಿದ್ದಾರೆ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ-ಐನಾಪುರ ಗ್ರಾಮದ ವಿಲಾಸ್ ನಾಯಿಕ್.
ಐದು ಕೆ ಜಿ ಹಿಂಡಿ, ಐದು ಕೆ ಜಿ ಹಿಟ್ಟು ಗಜೇಂದ್ರನಿಗೆ ತಿನ್ನಿಸುತ್ತಾರೆ. ಜೊತೆಗೆ ಎಂದಿನಂತೆ ಜಾನುವಾರುಗಳಿಗೆ ನೀಡುವ ಮೇವನ್ನು ಹಾಕಿ ಮೇಯಿಸುತ್ತಾರೆ.ಗಜೇಂದ್ರ ಆಚೆ ಬಂದರೆ ಸಾಕು ಜನರೆಲ್ಲಾ ಕೂಗೊಕೆ ಶುರು ಮಾಡುತ್ತಾರೆ. ಹುಟ್ಟುವಾಗಲೇ ಲಕ್ಷ ಬೇಡಿಕೆಯಿಂದ ಹುಟ್ಟಿದ್ದ ಗಜೇಂದ್ರ ಇದೀಗ ಕೋಟಿ ಬೆಲೆ ಬಾಳುವಂತಿದೆ.

ಫೆಬ್ರವರಿ 20ರಂದು ಮಹಾರಾಷ್ಟ್ರದ ತಾಸಗಾಂವದಲ್ಲಿ ನಡೆದ ಕೃಷಿ ಮೇಳದಲ್ಲಿ ಇವರು ಕೂಡ ಭಾಗವಹಿಸಿರುತ್ತಾರೆ. ಈ ವೇಳೆ ಮಹಾರಾಷ್ಟ್ರದ ಹಾಲು ಉದ್ಯಮಿ ಜಿತಳೆ ಎಂಬುವವರೂ ಇದಕ್ಕೆ 61 ಲಕ್ಷ ಕೊಡುತ್ತೀನಿ ಕೊಡಿ ಎಂದು ಕೇಳಿದ್ದರೂ ರೈತ ವಿಲಾಸ್ ನೀಡಿಲ್ಲ.ದೈತ್ಯಾಕಾರದ ಗಜೇಂದ್ರ ಕೋಣದ ತೂಕ ಬರೋಬ್ಬರಿ ಒಂದೂವರೆ ಟನ್ ಅಂದರೆ 1,500 ಕೆಜಿ ಇದೆ.ಪ್ರತಿ ನಿತ್ಯ ಬೆಳಗ್ಗೆ, ಸಂಜೆ ಎರಡು ಹೊತ್ತು ಸೇರಿ ಸುಮಾರು ಹದಿನೈದು ಲೀಟರ್ ಹಾಲನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕಿ ಕುಡಿಸುತ್ತಾರೆ.ವಿಲಾಸ ನಾಯಿಕ್ ಗಜೇಂದ್ರನನ್ನು ಸಾಕುವುದರ ಜೊತೆಗೆ ಐವತ್ತು ಬೇರೆ ಬೇರೆ ತಳಿಗಳ ಎಮ್ಮೆಯನ್ನ ಸಾಕಿದ್ದು, ನಿತ್ಯವೂ 125 ಲೀಟರ್ ಹಾಲು ಉತ್ಪಾದಿಸುತ್ತಾರೆ.

ಕೋಣವನ್ನ ನೋಡಿದ ಮಹಾರಾಷ್ಟ್ರದ ಕೃಷಿ ಇಲಾಖೆಯ ಅಧಿಕಾರಿಗಳು ಇದಕ್ಕೆ ‘ಕರ್ನಾಟಕದ ಕಿಂಗ್’ ಅಂತಾ ಬಿರುದು ಕೊಟ್ಟು ಸರ್ಟಿಫಿಕೇಟ್ ಕೂಡ ಕೊಟ್ಟು ಕಳುಹಿಸಿದ್ದಾರೆ.ಮನೆಯಲ್ಲೇ ಸಾಕಿರುವ ಸಾಮಾನ್ಯ ತಳಿಯ ಕೋಣ ಗಜೇಂದ್ರ. ಮೂರು ವರ್ಷದ ಈ ಕೋಣ ಮನೆಯಲ್ಲೇ ಹುಟ್ಟಿ ಬೆಳೆಯುತ್ತಿದೆ. ನಾಲ್ಕು ವರ್ಷದ ಹಿಂದೆ ಹರಿಯಾಣದಿಂದ ಮುರ್ರಾ ಎಂಬ ತಳಿ ಎಮ್ಮೆಯನ್ನ ಒಂದೂವರೆ ಲಕ್ಷ ರೂಪಾಯಿ ಕೊಟ್ಟು ತಂದಿರುತ್ತಾರೆ. ಎಮ್ಮೆ ತಂದ ಒಂದು ವರ್ಷಕ್ಕೆ ಈ ಗಜೇಂದ್ರ ಕೋಣ ಜನಿಸುತ್ತದೆ. ಜನಿಸಿದ ವೇಳೆಯಲ್ಲಿ ಇದರ ಆಕಾರವನ್ನ ನೋಡಿದ ಕೆಲವರು ಒಂದು ಲಕ್ಷಕ್ಕೆ ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಾರೆ. ಆದರೆ ಅದನ್ನ ಆಗ ಮಾರಾಟ ಮಾಡದೆ ಚೆನ್ನಾಗಿ ಮೇಯಿಸಿ ಮಗನಂತೆ ಈ ಮಟ್ಟಿಗೆ ಬೆಳೆಸಿದ್ದಾರೆ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ-ಐನಾಪುರ ಗ್ರಾಮದ ವಿಲಾಸ್ ನಾಯಿಕ್.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!