ಅಹೋರಾತ್ರ ಮನೆಗೆ ನುಗ್ಗಿ ಸುದೀಪ್​ ಅಭಿಮಾನಿಗಳ ದಾಂಧಲೆ ಆರೋಪ ಕಿಚ್ಚನನ್ನು ಅರೆಸ್ಟ್​ ಮಾಡಲು ಆಗ್ರಹ. ಕಿಚ್ಚ ಸುದೀಪ್​ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದ ಬರಹಗಾರ ಹಾಗೂ ಚಿಂತಕ ಅಹೋರಾತ್ರ ಅವರ ಮನೆಗೆ ಕೆಲವರು ನುಗ್ಗಿ ದಾಂಧಲೆ ಮಾಡಿದ್ದಾರೆ. ಈ ರೀತಿ ದಾಂಧಲೆ ಮಾಡಿದವರನ್ನು ಅವರು ಕಿಚ್ಚ ಸುದೀಪ್​ ಅಭಿಮಾನಿಗಳು ಎಂದು ಅಹೋರಾತ್ರ ದೂರಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ಲೈವ್​ ವಿಡಿಯೋ ಮಾಡಿ ಬೇಸರ ಹೊರಹಾಕಿದ್ದಾರೆ. ಫೇಸ್​ಬುಕ್​ನಲ್ಲಿ ಅಹೋರಾತ್ರ ಲೈವ್​ ಬಂದಿದ್ದಾರೆ. ಈ ವೇಳೆ ಅವರ ಮನೆಗೆ ಒಂದಷ್ಟು ಜನರು ನುಗ್ಗಲು ಪ್ರಯತ್ನಿಸಿದ್ದಾರೆ. ಇದೆಲ್ಲ ಕಿಚ್ಚ ಸುದೀಪ್​ ಅಭಿಮಾನಿಗಳದ್ದೇ ಕೆಲಸ. ಅವರು ನನ್ನನ್ನು ಕೊಲ್ಲಲು ಬಂದಿದ್ದರು. ಕಿಚ್ಚ ಸುದೀಪ್​ ಈಗಲೇ ಅರೆಸ್ಟ್​ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಕಿಚ್ಚ ಸುದೀಪ್​ ರಮ್ಮಿ ಗೇಮ್​ನ ರಾಯಭಾರಿ ಆಗಿದ್ದರು. ಇದಕ್ಕೆ ಅಹೋರಾತ್ರ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಕಿಚ್ಚ ಅವರನ್ನು ಅಹೋರಾತ್ರ ನಿರಂತರವಾಗಿ ಟೀಕಿಸಿದ್ದರು. ಸುದೀಪ್​ ಮಾಡಿದ್ದು ಸರಿಯಲ್ಲ. ಅನೇಕರು ಆನ್​ಲೈನ್​ ಜೂಜಿನಿಂದ ಮನೆ ಮಠ ಕಳೆದುಕೊಂಡಿದ್ದಾರೆ. ಹೀಗಾಗಿ ಅವರು ಇದರ ರಾಯಭಾರಿ ಆಗಿರುವುದು ಸರಿಯಲ್ಲ ಎಂದು ಹೇಳಿದ್ದರು. ಇಷ್ಟೇ ಅಲ್ಲ ಸುದೀಪ್​ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಹೋರಾತ್ರ ಅವರ ನಡೆಗೆ ಕಿಚ್ಚನ ಅಭಿಮಾನಿಗಳು ಸಿಟ್ಟಾಗಿದ್ದರು. ಅಷ್ಟೇ ಅಲ್ಲ, ಇದು ಮುಂದುವರೆದರೆ ಸರಿ ಇರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಈ ವಿಚಾರದಲ್ಲಿ ಲೈವ್​ ಬಂದು ಮಾತನಾಡಿದ್ದ ಅಹೋರಾತ್ರ, ಕಿಚ್ಚನ ಅಭಿಮಾನಿಗಳು ನನಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಏಕವಚನದಲ್ಲೇ ಮಾತನಾಡಿದ್ದರು.

ಸತತವಾಗಿ ಸುದೀಪ್​ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಸುದೀಪ್​ ಅಭಿಮಾನಿಗಳು ಅಹೋರಾತ್ರ ಅವರ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎಂಬುದು ಅಹೋರಾತ್ರ ಅವರ ಆರೋಪ. ಸದ್ಯ ಈ ವಿಚಾರ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆಯಂತೆ. ಕಿಚ್ಚ ಸುದೀಪ್​ ಸದ್ಯ ಬಿಗ್​ ಬಾಸ್​ ಮನೆಯಲ್ಲಿ ಬ್ಯುಸಿ ಇರುತ್ತಾರೆ. ತಮಗೆ ಸಿಕ್ಕ ಸಮಯದಲ್ಲಿ ಪ್ರತಿಕ್ರಿಯೆ ನೀಡಿದ ಸುದೀಪ್ ಅವರು ಈ ರೀತಿಯಾಗಿ ಹೇಳುತ್ತಾರೆ. ನಾನು ಬರೀ ನನ್ನ ಸ್ವಾರ್ಥಕಾಗಿ ನಾನು ಹಣ ಮಾಡಬೇಕು ಎಂದು ರಮ್ಮಿ ಗೇಮ್ ಶೋ ದ ರಾಯಭಾರಿ ಆಗಲಿಲ್ಲ ನಾನು ಅದರಲ್ಲಿ ಒಂದು ಭಾಗ ಅಷ್ಟೇ ಕೇವಲ ಎರಡು ತಿಂಗಳ ಒಪ್ಪಂದ ಮಾಡಿಕೊಂಡಿದ್ದೆ ಒಪ್ಪಂದದ ನಂತರ ನನಗೂ ಅದಕ್ಕೂ ಸಂಬಂಧವಿಲ್ಲ. ನಾನೂ ಕೂಡಾ ದೊಡ್ಡ ಪ್ರಮಾಣದಲ್ಲಿ ಸಮಾಜ ಸೇವೆ ಮಾಡದೆ ಹೋದರೂ ಅಳಿನಿನಷ್ಟು ಆದರೂ ಸಮಾಜ ಸೇವೆ ಮಾಡಿರುವೆ ಅದರ ಬಗ್ಗೆಯೂ ನೋಡಿ ಎಂದು ಹೇಳಿ ತಮ್ಮ ಬೇಸರ ವ್ಯಕ್ತ ಪಡಿಸಿದ್ದಾರೆ. ಇನ್ನು ಅಹೋರಾತ್ರ ಅವರೂ ಕೂಡಾ ರಮ್ಮಿ ಗೇಮ್ ನ ಯಾವುದೇ ಕಂಪನಿಯ ಹೆಸರನ್ನು ಕೂಡಾ ಹೇಳದೆ ಬರೀ ಸುದೀಪ್ ಅವರ ಹೆಸರನ್ನೇ ಹೇಳುತ್ತಿರುವುದು ಸುದೀಪ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಬಹುದು. ಇನ್ನು ಸುದೀಪ್ ಅವರು ಈ ಘಟನೆ ಬಗ್ಗೆ ಯಾವ ರೀತಿಯಲ್ಲಿ ಸಮೂರ್ಣವಾಗಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!