ನಮ್ಮ ದೇಹದ ಸಮಸ್ಯೆಗಳಿಗೆ ಪ್ರಕೃತಿಯಿಂದಲೆ ಔಷಧಿಗಳನ್ನು ಪಡೆಯಬಹುದು. ಇದರಿಂದ ಅಡ್ಡ ಪರಿಣಾಮ ಇಲ್ಲದೆ ಶಾಶ್ವತವಾಗಿ ಅನೇಕ ನೋವು ನಿವಾರಣೆಯಾಗುತ್ತದೆ. ಮಂಡಿ ನೋವು, ಕಾಲು ನೋವು, ಹಿಮ್ಮಡಿ ನೋವು ಸರ್ವೆ ಸಾಮಾನ್ಯವಾಗಿದೆ. ಈ ಎಲ್ಲ ನೋವುಗಳಿಗೆ ಪ್ರಕೃತಿಯಿಂದಲೆ ಪರಿಹಾರ ಪಡೆಯಬಹುದು. ಪ್ರಕೃತಿದತ್ತವಾದ ಅನೇಕ ಚಿಕಿತ್ಸಾ ವಿಧಾನಗಳಿವೆ ಅವುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಪ್ರಕೃತಿಯಲ್ಲಿ ನೋವು ನಿವಾರಿಸಲು ಅನೇಕ ಔಷಧಿಗಳಿವೆ, ನೋವನ್ನು ನ್ಯಾಚುರಲ್ ಆಗಿ ನಿವಾರಿಸುವುದು ಒಳ್ಳೆಯದು. ಇತರೆ ಔಷಧಿಗಳಿಂದ ಅಡ್ಡ ಪರಿಣಾಮ ಆಗುವ ಸಾಧ್ಯತೆಗಳು ಇರುತ್ತದೆ. ನೈಸರ್ಗಿಕವಾಗಿ ನೋವನ್ನು ನಿವಾರಿಸಲು ಕೆಲವು ವಿಧಾನಗಳಿವೆ. ಮೊದಲನೇಯದು ಅಕ್ಯುಪ್ರೆಷರ್ ಈ ವಿಧಾನವು ಬಹುಬೇಗನೆ ಪರಿಣಾಮ ಕೊಡುತ್ತದೆ. ಪಾದಗಳ ಮೇಲೆ ಬಿಂದುಗಳಿರುತ್ತವೆ ಬಿಂದುಗಳಿಗೆ ಒತ್ತಡ ಕೊಟ್ಟಾಗ ನೋವು ನಿವಾರಣೆಯಾಗುತ್ತದೆ. ಅಕ್ಯುಪ್ರೆಷರ್ ಒಂದು ಅಧಿಕೃತ ಚಿಕಿತ್ಸೆ ಎಂದು WHO ಹೇಳಿದೆ. ಈ ವಿಧಾನದಲ್ಲಿ ನೋವನ್ನು ನೈಸರ್ಗಿಕವಾಗಿ ಕಡಿಮೆ ಮಾಡಿಕೊಳ್ಳಬಹುದು. ದೇಹದ ಬೇರೆ ಬೇರೆ ಭಾಗದಲ್ಲಿ ಶಕ್ತಿಯ ಕೇಂದ್ರಗಳಿರುತ್ತವೆ ಅದು ಬ್ಲಾಕ್ ಆಗಿರುತ್ತದೆ ಅದನ್ನು ಓಪನ್ ಮಾಡುವ ಮೂಲಕ ನೋವನ್ನು ನಿವಾರಿಸಿಕೊಳ್ಳಬಹುದು. ತಲೆನೋವು ಬಂದಾಗ ಕೈ ಮೇಲಿರುವ ಪಾಯಿಂಟ್ ಅನ್ನು ಮೂರು ನಿಮಿಷ ಪ್ರೆಸ್ ಮಾಡಿಕೊಂಡಾಗ ತಲೆನೋವು ನಿವಾರಣೆಯಾಗುತ್ತದೆ. ಈ ವಿಧಾನದಿಂದ ಶಾಶ್ವತವಾಗಿ ನೋವು ನಿವಾರಣೆಯಾಗದೆ ಇರಬಹುದು ಆದರೆ ತಾತ್ಕಾಲಿಕವಾಗಿ ನೋವು ಶಮನವಾಗುತ್ತದೆ. ಶಾಶ್ವತವಾಗಿ ನಿವಾರಣೆಯಾಗಲು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ವ್ಯಾಯಾಮವನ್ನು ಮಾಡಬೇಕು. ಎರಡನೇಯ ವಿಧಾನ ಅಕ್ಯುಪಂಕ್ಚರ್ ಇದು ಜಗತ್ಪ್ರಸಿದ್ಧವಾಗಿದೆ ಎಲ್ಲಾ ದೇಶಗಳಲ್ಲಿ ಈ ವಿಧಾನವನ್ನು ಅನುಸರಿಸುತ್ತಾರೆ. ಈ ವಿಧಾನವನ್ನು ಚೀನಾದಲ್ಲಿ ಮೊದಲು ಪ್ರಾರಂಭಿಸಲಾಯಿತು. ಸೂಜಿಗಳಿಂದ ಮಾಡುವ ಚಿಕಿತ್ಸೆಯನ್ನು ಅಕ್ಯುಪಂಕ್ಚರ್ ಎನ್ನುವರು. ಶಕ್ತಿ ಬಿಂದುಗಳ ಮೇಲೆ ಸಣ್ಣ ಸೂಜಿಯಿಂದ ಚುಚ್ಚುವ ಮೂಲಕ ನೋವು ನಿವಾರಣೆಯಾಗುತ್ತದೆ. ಈ ವಿಧಾನವನ್ನು ಅನುಸರಿಸುವುದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ಮತ್ತು ಇದು ಉತ್ತಮ ವಿಧಾನವಾಗಿದೆ.

ಮೂರನೇಯ ಪ್ರಮುಖ ವಿಧಾನ ಮಣ್ಣಿನ ಚಿಕಿತ್ಸೆ. 7 ಚಮಚ ಮಣ್ಣು ಮತ್ತು 3 ಚಮಚ ಪುಡಿಮಾಡಿದ ಸಾಸಿವೆಯನ್ನು ಮಿಕ್ಸ್ ಮಾಡಿ ನೋವಿರುವ ಜಾಗ, ಊತ ಬಂದಿರುವ ಜಾಗದ ಮೇಲೆ ನಿಧಾನವಾಗಿ ಹಚ್ಚಿದರೆ ನೋವು ನಿವಾರಣೆಯಾಗುತ್ತದೆ. ಪ್ರತಿದಿನ ಈ ವಿಧಾನವನ್ನು ಮಾಡುವ ಮೂಲಕ ಶಾಶ್ವತವಾಗಿ ನೋವು ನಿವಾರಣೆಯಾಗುತ್ತದೆ ಇದರ ಜೊತೆಗೆ ವ್ಯಾಯಾಮ, ಯೋಗಾಭ್ಯಾಸ, ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವುದರಿಂದ ಆರೋಗ್ಯವಾಗಿರಲು ಸಾಧ್ಯ. ಮಡ್ ಬಾಥ್ ಎಂದು ಮಾಡಲಾಗುತ್ತದೆ, ಇಡೀ ದೇಹಕ್ಕೆ ಹುತ್ತದ ಮಣ್ಣನ್ನು ಹಚ್ಚಿ ಸೂರ್ಯನ ಬಿಸಿಲಿಗೆ 20-30 ನಿಮಿಷ ನಿಂತರೆ ದೇಹಕ್ಕೆ ಹೊಸ ಚೈತನ್ಯ ಸಿಗುತ್ತದೆ. ಮಣ್ಣಿನ ಚಿಕಿತ್ಸೆಯ ಬಗ್ಗೆ ಅಧ್ಯಯನ ನಡೆದಿದೆ, ಅಧ್ಯಯನದಿಂದ ಮಣ್ಣಿನ ಚಿಕಿತ್ಸೆ ಉತ್ತಮವಾದ ಚಿಕಿತ್ಸೆ ಎಂದು ತಿಳಿದಿದೆ. ಅಲ್ಟರ್ ನೇಟ್ ಪ್ಯಾಕ್ ಎಂದರೆ ನೋವು ಇರುವ ಜಾಗದ ಮೇಲೆ 3 ನಿಮಿಷ ಹಾಟ್ ವಾಟರ್ ಬ್ಯಾಗ್ ಇಡುವುದು ಮತ್ತು 1 ನಿಮಿಷ ಐಸ್ ಬ್ಯಾಗ್ ಇಡುವುದು ಈ ರೀತಿ 3-4ಸಲ ಮಾಡುವುದರಿಂದ ರಕ್ತ ಸಂಚಾರದಲ್ಲಿ ಬದಲಾವಣೆಯಾಗಿ ನೋವು ನಿವಾರಣೆಯಾಗುತ್ತದೆ. ಹಾಟ್ ಅಪ್ಲಿಕೇಷನ್ ಎಂದರೆ ನೋವು ಇರುವ ಜಾಗಕ್ಕೆ ಬಿಸಿ ನೀರನ್ನು ಹಾಕುವುದು. ಹಾಟ್ ಫೂಟ್ ಇಮ್ಮರ್ಶನ್ ಎಂದರೆ ರಾತ್ರಿ ಮಲಗುವಾಗ ಅರ್ಧ ಬಕೆಟ್ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಕಾಲನ್ನು ಇಟ್ಟುಕೊಳ್ಳುವುದರಿಂದ ಹಿಮ್ಮಡಿ ನೋವು ನಿವಾರಣೆಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ದೇಹದ ಅಂಗಗಳ ನೋವುಗಳನ್ನು ದೂರ ಮಾಡಿಕೊಳ್ಳಿ.

Leave a Reply

Your email address will not be published. Required fields are marked *