ದಂಟಿನ ಸೊಪ್ಪು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಸಾಮಾನ್ಯವಾಗಿ ದಂಟಿನ ಸೊಪ್ಪನ್ನು ಗ್ರಾಮೀಣ ಪ್ರದೇಶದಲ್ಲಿನ ಜನರು ಅತಿ ಹೆಚ್ಚು ಅಡುಗೆಗೆ ಬಳಸುತ್ತಾರೆಂಬ ನಂಬಿಕೆಯನ್ನು ಹುಸಿಗೊಳಿಸಿ ಆರೋಗ್ಯದ ದೃಷ್ಟಿಯಿಂದ ಪಟ್ಟಣ ಪ್ರದೇಶದ ಜನರೂ ಕೂಡ ಅತಿ ಹೆಚ್ಚು ದಂಟನ್ನು ಬಳಸುತ್ತಿರುವುದು ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿ ನೋಡಬಹುದಾಗಿದೆ. ದಂಟನ್ನು ಕೇವಲ ಹಸಿರು ಸೊಪ್ಪಗಿಯೂ ಅಲ್ಲದೇ ತೇವಾಂಶ ಕೊಬ್ಬು ಪುಷ್ಟಿ ಸಾರಜನಕ ಕಬ್ಬಿಣದ ಅಂಶ ವಿಟಮಿನ್ ಎ ವಿಟಮಿನ್ ಬಿ ಪೋಷಕಾಂಶಗಳನ್ನು ತುಂಬಿದ ಆರೋಗ್ಯಕ್ಕೆ ಪೂರಕವಾದ ಔಷದೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿ ನಾವಿಂದು ನೋಡಬೇಕಾಗುತ್ತದೆ .
ಹೇಳುತ್ತಾ ಹೋದರೆ ಮುಗಿಯದ ದಂಟಿನ ಸೊಪ್ಪಿನಿಂದ ಮಾಡಬಹುದಾದ ಔಷದೋಪಚಾರಗಳ ಬಗ್ಗೆ ತಿಳಿಯೋಣ ಬನ್ನಿ, ದಂಟಿನ ಸೊಪ್ಪನ್ನು ಬೇಯಿಸಿ ಜೇನಿನೊಂದಿಗೆ ಸೇವಿಸುವುದರಿಂದ ಮಲಬದ್ದತೆ ಸಮಸ್ಯೆ ಹಾಗೂ ಕರುಳು ಹುಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ
ಅಷ್ಟೇ ಅಲ್ಲದೆ ಗರ್ಬಿಣಿ ಸ್ತ್ರೀಯರು ಮತ್ತು ಬಾಣಂತಿಯರು ಜೇನು ತುಪ್ಪ ಮತ್ತು ಏಲಕ್ಕಿ ಪುಡಿಯೊಂದಿಗೆ ಒಂದು ಲೋಟ ತಾಜಾ ಸೊಪ್ಪಿನ ರಸವನ್ನು ಕುಡಿಯುವುದರಿಂದ ಹೆರಿಗೆಯ ನಂತರದಲ್ಲಿ ಮೊಲೆಹಾಲಿನ ಪ್ರಮಾಣ ಹೆಚ್ಚಾಗುತ್ತದೆ. ದಂಟಿನ ಸೊಪ್ಪಿನ ಕಷಾಯವನ್ನು ತಯಾರಿಸಿ ಪ್ರತಿದಿನ ಒಂದು ಲೊಟದಂತೆ ಸೇವಿಸುತಾ ಬಂದರೆ ಮೂಲವ್ಯಾದಿ ರೋಗಿಗಳ ನೋವು ಮತ್ತು ಉರಿ ಶೀಘ್ರವೇ ಉಪಶಮನವಾಗುತ್ತದೆ
ದಂಟಿನ ಸೊಪ್ಪಿನ ಪಲ್ಯವನ್ನು ನಿಯಮಿತವಾಗಿ ಸೇವಿಸುವುದರಿಂದ ಅತೀ ಹೆಚ್ಚು ರಕ್ತ ಸ್ರಾವವಾಗುತ್ತಿರುವ ಸ್ತ್ರೀಯರಲ್ಲಿ ರಕ್ತಸ್ರಾವ ಕಡಿಮೆಯಾಗುತ್ತದೆ, ದಂಟಿನ ಸೊಪ್ಪನ್ನು ಅರೆದು ತಲೆಗೆ ಲೇಪಿಸಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿ ಇದನ್ನು ನಿಯನಿತವಾಗಿ ಮಾಡುತ್ತಾ ಬಂದರೆ ಕ್ರಮೇಣ ನೆರೆಕೂದಲುಗಳ ಸಂಖ್ಯೆ ಕಡಿಮೆಯಾಗುವುದಲ್ಲದೇ ತಲೆ ಕೂದಲು ಸೊಂಪಾಗಿ ಬೆಳೆಯುತ್ತವೆ
ದಂಟಿನ ಸೊಪ್ಪಿನ ರಸಕ್ಕೆ ಸ್ವಲ್ಪ ನಿಂಬೆ ರಸ ಬೆರೆಸಿ ಕೈ ಕಾಲುಗಾಳಿಗೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ನಿಯಮಿತವಾಗಿ ದಂಟಿನ ಸೊಪ್ಪನ್ನು ಅಡುಗೆಯಲ್ಲಿ ಉಪಯೋಗಿಸುವುದರಿಂದ ಯುಕೃತ್ತಿನ ಸಮಸ್ಯೆಗಳೇನೇ ಇದ್ದರೂ ನಿವಾರಣೆಯಾಗುತ್ತವೆ, ಇನ್ನು ದಂಟಿನ ಸೊಪ್ಪನ್ನು ಸುಟ್ಟು ಅದರ ಬೂದಿಯನ್ನು ನೀರಿನಲ್ಲಿ ಕಲಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಶೀಘ್ರವೇ ಮೊಡವೆಗಳು ನಿವಾರಣೆಯಾಗುವುದಲ್ಲದೇ ಮೊಡವೆಯ ಕಳೆಗಳೂ ಸಹ ವಾಸಿಯಾಗುತ್ತವೆ