ಕೃಷಿ ಎಂಬುದು ಬೇಸಾಯ. ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಕೃಷಿಯು ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ ಪಳಗಿಸಿದ ಪ್ರಾಣಿಗಳು ಮತ್ತು ಸಸ್ಯಗಳ ಅಂದರೆ, ಬೆಳೆಗಳ ಸಂಗೋಪನೆಯಿಂದಾಗಿ ಆಹಾರದ ಸೃಷ್ಟಿಯಾಗುವುದರಿಂದ ಅದು ಹೆಚ್ಚು ಜನಭರಿತವಾದ ಮತ್ತು ಶ್ರೇಣೀಕೃತವಾದ ಸಮಾಜಗಳ ಬೆಳವಣಿಗೆಗೆ ಕಾರಣವಾಯಿತು. ಕೃಷಿಯ ಅಧ್ಯಯನಕ್ಕೆ ಕೃಷಿ ವಿಜ್ಞಾನ ಎಂದು ಹೆಸರು. ವೈಶಿಷ್ಟ್ಯಗಳು ಮತ್ತು ಕೌಶಲಗಳ ವಿಸ್ತೃತ ವೈವಿಧ್ಯತೆಯನ್ನು ಕೃಷಿಯು ಒಳಗೊಳ್ಳುತ್ತದೆ. ಕೃಷಿಗೆ ಮುಖ್ಯವಾಗಿ ನೀರು ಅವಶ್ಯವಾಗಿರುತ್ತದೆ. ಆದ್ದರಿಂದ ನಾವು ಇಲ್ಲಿ ಒಬ್ಬ ಕೃಷಿಕನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮಳೆಯಾಗುವ ಪ್ರದೇಶಗಳಲ್ಲಿ ವ್ಯವಸಾಯ ಕೃಷಿ ಮಾಡುವುದು ಬೆಳೆಯನ್ನು ತೆಗೆದು ಆದಾಯವನ್ನು ಪಡೆಯುವುದು ಸಹಜ ಕೆಲಸವಾಗಿದೆ. ಆದರೆ ಬರ ಪ್ರದೇಶದಲ್ಲಿ ಕೃಷಿಯಿಂದ ಬೆಳೆ ಪಡೆಯುವುದು ಮತ್ತು ಆದಾಯವನ್ನು ಪಡೆಯುವುದು ಕಷ್ಟಕರ ಸಂಗತಿಯಾಗಿದೆ. ಕೋಲಾರದ ಸುರೇಶ್ ಎನ್ನುವವರು ತಮ್ಮ ವಿಭಿನ್ನ ಕೃಷಿಯಿಂದ ಪಶುಸಂಗೋಪನೆ, ಕೋಳಿ ಸಾಕಣಿಕೆ ಹೀಗೆ ಅನೇಕ ವಿಭಿನ್ನ ಕೃಷಿಯನ್ನು ನಡೆಸುತ್ತಿದ್ದಾರೆ. ನೀರಿನ ಯಾವುದೇ ಪರಿಕರವಿಲ್ಲದೆ ವರ್ಷಕ್ಕೆ 12 ಲಕ್ಷ ಆದಾಯವನ್ನು ಗಳಿಸುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಜಿಲ್ಲೆಗಳಲ್ಲಿ ಕೋಲಾರ ಕೂಡ ಒಂದಾಗಿದೆ.

ಸುರೇಶ್ ಎನ್ನುವವರು ಹೊಸ ಹೊಸ ತಂತ್ರಜ್ಞಾನದ ಅಳವಡಿಕೆಯ ಜೊತೆಗೆ ವೈಜ್ಞಾನಿಕ ಪದ್ಧತಿಯಲ್ಲಿ ಮೂರುವರೆ ಎಕರೆಯಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಈ ಕೃಷಿಯಲ್ಲಿ ಕೊಳವೆಬಾವಿಯ ಸಹಾಯವಿಲ್ಲದೆ ಕೋಳಿ ಸಾಗಾಣಿಕೆ, ಮೀನು ಸಾಕಾಣಿಕೆ, ಪಾರಿವಾಳ ಸಾಕಾಣಿಕೆ, ಕೈತೋಟ, ಹಣ್ಣಿನ ಗಿಡಗಳು ಹೀಗೆ ಹಲವಾರು ಕೃಷಿಯನ್ನು ನಡೆಸುತ್ತಿದ್ದಾರೆ. ಬಿದ್ದ ಅಲ್ಪ ಪ್ರಮಾಣದ ಮಳೆ ನೀರನ್ನು ಸಂಗ್ರಹ ಮಾಡಿಕೊಂಡು ಈ ಕೃಷಿಗೆ ಅಳವಡಿಸಿಕೊಂಡಿದ್ದಾರೆ. ಸಂಗ್ರಹ ಮಾಡಿದ ನೀರಿನಲ್ಲಿ ಮೀನು ಸಾಗಾಣಿಕೆ ಮಾಡಿ ಅದೇ ನೀರನ್ನು ಕುರಿಗಳಿಗೂ ಕೂಡ ಬಳಸುತ್ತಾರೆ. ಕುರಿಯಲ್ಲಿ ವಾರ್ಷಿಕವಾಗಿ ಎರಡು ಬೆಳೆಯನ್ನು ತೆಗೆದುಕೊಳ್ಳುತ್ತಾರೆ.

ಇದರಿಂದ ವಾರ್ಷಿಕವಾಗಿ ಒಂದು ಬೆಳೆಯಲ್ಲಿ 4 ಲಕ್ಷ ರೂ ಆದಾಯ ದೊರಕುತ್ತದೆ. ಅಂದರೆ ವಾರ್ಷಿಕದ ಎರಡು ಬೆಳೆಯಲ್ಲಿ 8 ಲಕ್ಷ ಆದಾಯ ದೊರಕುತ್ತದೆ. ಜೊತೆಗೆ ಜೇನು ಸಾಕಾಣಿಕೆಯಲ್ಲಿ ವಾರ್ಷಿಕವಾಗಿ ಎರಡು ಬಾರಿ ತುಪ್ಪ ತೆಗೆದಲ್ಲಿ 4 ಲೀಟರ್ ವರೆಗೆ ದೊರಕುತ್ತದೆ. ಜೊತೆಗೆ 60ರಿಂದ 70 ಪಂದ್ಯದ ಹುಂಜವನ್ನು ಹಾಕಿ ಅದನ್ನು ಪಂದ್ಯಕ್ಕೋಸ್ಕರ ಮಾರಾಟ ಮಾಡುತ್ತಾರೆ. ಜೊತೆಗೆ ಮೊಟ್ಟೆಕೋಳಿಯನ್ನು ಕೂಡ ಇವರು ಸಾಕಿದ್ದಾರೆ. ಇದರಿಂದ ಪ್ರತಿದಿನ 40 ರಿಂದ 50 ಮೊಟ್ಟೆ ದೊರೆತು ದಿನದ ಆದಾಯ ಐದುನೂರುವರೆಗೆ ದೊರಕುತ್ತದೆ. ಹೀಗೆ ಇವರು ಸಮಗ್ರ ಕೃಷಿ ಪದ್ಧತಿಯಿಂದ ವಾರ್ಷಿಕವಾಗಿ 12 ಲಕ್ಷ ರೂಪಾಯಿ ಆದಾಯವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!