ಈ ಮನುಷ್ಯನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ? ಅನೇಕಾನೇಕ ದಾಖಲೆಗಳು ಈತನ ಬುಟ್ಟಿಯಲ್ಲಿ ಸೇರಿಕೊಂಡಿವೆ. ಈತ ಆಡದ ಆಟಗಳಿಲ್ಲ ಮಾಡದ ದಾಖಲೆಗಳಲ್ಲಿಲ್ಲ. ಕ್ರೀಡಾ ಕ್ಷೇತ್ರವೊಂದೇ ಅಲ್ಲ ಸಂಗೀತದಲ್ಲೂ ಈತ ಪಂಟರ್ ಎಂದೇ ಹೇಳಬಹುದು. ನಾವು ಹೇಳುತ್ತಿರುವುದು ದಕ್ಷಿಣ ಆಫ್ರಿಕಾದ ಮಿಸ್ಟರ್ 360 ಎ ಬಿ ಡಿವಿಲಿಯರ್ಸ್ ಬಗ್ಗೆ, ಅಬ್ರಾಹಿಂ ಬೆಂಜಮಿನ್ ಡಿವಿಲಿಯರ್ಸ್ ಬಗ್ಗೆ. ಎ ಬಿ ಡಿ ಮಾಡಿದ ಪ್ರಮುಖ ಸಾಧನೆಗಳ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ.
ಒಬ್ಬನೇ ಮನುಷ್ಯ ಇಷ್ಟೊಂದು ಆಟಗಳಲ್ಲಿ ಮಹತ್ ಸಾಧನೆ ಮಾಡಲು ಸಾಧ್ಯವೇ? ಎಂಬುದಕ್ಕೆ ಎಬಿಡಿ ಜೀವಂತ ಉದಾಹರಣೆ. ಅಂತಿಮವಾಗಿ ಎಬಿಡಿ ಅಪ್ಪಿಕೊಂಡಿದ್ದು ಕ್ರಿಕೆಟ್ ಅನ್ನು. ಅಬ್ರಾಹಿಂ ಬೆಂಜಮಿನ್ ಡಿವಿಲಿಯರ್ಸ್ ಹುಟ್ಟಿದ್ದು ದಕ್ಷಿಣ ಆಫ್ರಿಕಾದ ಪ್ರೆಟೋರಿಯಾದಲ್ಲಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಎಬಿಡಿ ಅಲ್ಲೇ ಮುಗಿಸಿದರು. ಇಂದು ಜಗತ್ತಿನ ಕ್ರಿಕೆಟ್ ದಿಗ್ಗಜರ ಸಾಲಲ್ಲಿ ಎಬಿಡಿಗೆ ಅಗ್ರಸ್ಥಾನ. 31 ವರ್ಷಗಳಲ್ಲಿ ಮೂರು ಜನ್ಮದ ಸಾಧನೆ ಮಾಡಿರುವುದು ಡಿವಿಲಿಯರ್ಸ್ ಹೆಗ್ಗಳಿಕೆ. ಎಬಿಡಿ ಒಬ್ಬ ಕ್ರಿಕೆಟರ್ ಆಗಿ ಎಲ್ಲರಿಗೂ ಗೊತ್ತು ಅದನ್ನು ಬಿಟ್ಟು ಅವರೊಬ್ಬ ಸೂಪರ್ ಮ್ಯಾನ್. ವೇಗದ ಶತಕ. ಎಬಿಡಿ ಅವರ ಮೊದಲ ಸಾಧನೆ ನೋಡುವುದಾದರೆ ಅದು ವೇಗದ ಶತಕ. ಏಕದಿನ ಕ್ರಿಕೆಟ್ ನಲ್ಲಿ ಕೇವಲ 31 ಚೆಂಡುಗಳಲ್ಲಿ ಶತಕ ಗಳಿಸಿದ ಎಬಿಡಿ ಕಳೆದ ವರ್ಷ ಜನವರಿಯಲ್ಲಿ ದಾಖಲೆ ಬರೆದರು. ಬರೋಬ್ಬರಿ 16 ಭರ್ಜರಿ ಸಿಕ್ಸರ್ ಮತ್ತು 9 ಬೌಂಡರಿ ಬ್ಯಾಟಿಂಗ್ ಹೈಲೈಟ್ಸ್. ಅಂದು ಎಬಿಡಿ ಗಳಿಸಿದ್ದು 44 ಎಸೆತಗಳಲ್ಲಿ ಬರೋಬ್ಬರಿ 149 ರನ್ ಗಳಿಸಿ ದಾಖಲೆ ಬರೆದಿದ್ದಾರೆ.
ಎರಡನೆಯದಾಗಿ ಸೆಂಚುರಿ ಪಟ್ಟಿ. ಏಕದಿನ ಖಾತೆಯಲ್ಲಿ ಎಬಿಡಿ 24 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಎಬಿಡಿ ಬಳಿ 21 ಶತಕಗಳಿವೆ. ಇವುಗಳಲ್ಲಿ ಗೆಲವಿನ ಸರಾಸರಿಯೇ ಹೆಚ್ಚಿರುವುದು ವಿಶೇಷ. ಮೂರನೆಯದಾಗಿ ಏಕದಿನ ಸಾಧನೆ. ಸದ್ಯ 200 ಏಕದಿನ ಆಡಿರುವ ಡಿವಿಲಿಯರ್ಸ್ ಸ್ಟ್ರೈಕ್ ರೇಟ್ 100.3 ಸರಾಸರಿ 54.56. ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿಯೂ 50.46 ಸರಾಸರಿ ಕಾಪಾಡಿಕೊಂಡು ಬಂದಿದ್ದಾರೆ. ಎಬಿಡಿ ಬಲಗೈ ಬ್ಯಾಟ್ಸಮನ್ ಬ್ಯಾಟ್ಸ್ಮನ್. ಆದರೆ ಚೆಂಡು ಎಸೆದ ಮೇಲೆ ಅವರು ಹೇಗೂ ನಿಂತುಕೊಳ್ಳುತ್ತಾರೆ. ಮಧ್ಯಮ ವೇಗಿ, ವಿಕೆಟ್ ಕೀಪರ್ ಆಗಿಯೂ ನಿರ್ವಹಣೆ ತೋರಿದ್ದಾರೆ. ಕ್ರಿಕೆಟ್ ಬಿಟ್ಟರೆ ದಕ್ಷಿಣ ಆಫ್ರಿಕಾದ ಜೂನಿಯರ್ ಹಾಕಿ ತಂಡಕ್ಕೆ ಆಯ್ಕೆ, ಶಾಲಾದಿನಗಳಲ್ಲಿ ಈಜುಕೋಳದಲ್ಲಿ ದಾಖಲೆ, ದಕ್ಷಿಣ ಆಫ್ರಿಕಾವನ್ನು ಬ್ಯಾಡ್ಮಿಂಟನ್ ತಂಡದಲ್ಲಿ ಪ್ರತಿನಿಧಿಸಿದ್ದು.
ಡೆವಿಸ್ ಕಪ್ ಟೆನಿಸ್ ಟೀಂ ಪ್ರತಿನಿಧಿತ್ವ ಎಬಿಡಿ ಹೆಸರಲ್ಲಿದೆ. ದಾಖಲೆ ಪಟ್ಟಿ ನೋಡುವುದಾದರೆ ಏಕದಿನದ ಅತಿ ವೇಗದ ಅರ್ಧ ಶತಕ, ಅತಿ ವೇಗದ ಶತಕ, ಅತಿ ವೇಗದ 150 ಎಲ್ಲವೂ ಎಬಿಡಿ ಹೆಸರಿನಲ್ಲೇ ಇದೆ. ದಕ್ಷಿಣ ಆಫ್ರಿಕ ಪರ ದೇಶಿಕ ಕ್ರಿಕೆಟ್ ನದಾಖಲೆಗಳಿಗೆ ಎಬಿಡಿಯೇ ವಾರಸುದಾರ. 2105ರ ಕ್ಯಾಲೆಂಡರ್ ವರ್ಷದಲ್ಲಿ ಎಬಿಡಿ 50 ಸಿಕ್ಸರ್ ಸಿಡಿಸಿದ ದಾಖಲೆಯನ್ನು ಮಾಡಿದರು. ಪಾಕ್ ನ ಅಫ್ರಿದಿ ಹೆಸರಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.