ಬಾಲಿವುಡ್ ನಟನೊಬ್ಬ ಮಾರ್ಚ್ 14ರಂದು ತನ್ನ 56ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮಾರನೇ ದಿನವೇ ತನ್ನೆಲ್ಲ ಸಾಮಾಜಿಕ ಜಾಲತಾಣಗಳನ್ನು ತೊರೆದಿದ್ದಾರೆ. ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಎಂದೇ ಹೆಸರುವಾಸಿಯಾದ ಆಮಿರ್ ಖಾನ್ ಸೋಶಿಯಲ್ ಮೀಡಿಯಾ ತೊರೆಯುತ್ತಿರುವುದಾಗಿ ಪೋಸ್ಟ್ ಮಾಡಿದ್ದಾರೆ. ಇನ್‍ಸ್ಟಾಗ್ರಾಂ, ಟ್ವಿಟ್ಟರ್ ಮತ್ತು ಫೇಸ್‍ಬುಕ್ ನಲ್ಲಿ ಇದೇ ನನ್ನ ಕೊನೆಯ ಪೋಸ್ಟ್ ಎಂದು ಬರೆದುಕೊಂಡಿದ್ದಾರೆ. ಯಾತಕ್ಕಾಗಿ ಅಮೀರ್ ಖಾನ್ ಈ ರೀತಿಯಾಗಿ ಬರೆದು ಸಾಮಾಜಿಕ ಜಾಲತಾಣ ತೊರೆದಿರಬಹುದು ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಇದೆ. ಇದರ ಬಗ್ಗೆ ನಾವು ಇಲ್ಲಿ ನೋಡೋಣ.

ಭಾನುವಾರ ಬರ್ತ್ ಡೇ ಆಚರಿಸಿಕೊಂಡಿದ್ದ ದಂಗಲ್ ಹೀರೋಗೆ ಶುಭಾಶಯದ ಮಹಾಪೂರವೇ ಹರಿದು ಬಂದಿತ್ತು. ಇಂದು ತಮಗೆ ಶುಭಕೋರಿದ ಎಲ್ಲ ಸಹದ್ಯೋಗಿ, ಆಪ್ತ ಮತ್ತು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಿಮ್ಮ ಹಾರೈಕೆ ಮತ್ತು ಪ್ರೀತಿಯ ಸಂದೇಶಗಳಿಂದ ಹೃದಯ ತುಂಬಿ ಬಂತು. ಸೋಶಿಯಲ್ ಮೀಡಿಯಾದಲ್ಲಿ ಇದು ನನ್ನ ಕೊನೆಯ ಪೋಸ್ಟ್ ಆಗಿರಲಿದೆ. ನಾವು ಮೊದಲಿನಂತೆ ಭೇಟಿಯಾಗೋಣ. ಆಮಿರ್ ಖಾನ್ ಪ್ರೊಡಕ್ಷನ್ ಹೊಸ ಚಾನೆಲ್ ಆರಂಭಿಸಲಿದ್ದು, ಮುಂದಿನ ದಿನಗಳಲ್ಲಿ ಈ ವಾಹಿನಿ ಮೂಲಕ ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತೇನೆ ಎಂದು ಹೇಳಿದ್ದಾರೆ. ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ ಅಮೀರ್ ಖಾನ್ , ಸೋಶಿಯಲ್ ಮೀಡಿಯಾ ಗಳಲ್ಲಿ ಇದು ನನ್ನ ಕೊನೆಯ ಪೋಸ್ಟ್ ಆಗಿದ್ದು ಮುಂದಿನ ದಿನಗಳಲ್ಲಿ ನನ್ನ ವೈಯಕ್ತಿಕ ವಿಚಾರ ಹಾಗೂ ಸಿನಿಮಾಗೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಳನ್ನು ಅಭಿಮಾನಿಗಳು ನಮ್ಮ ಪ್ರೋಡಕ್ಷನ್ ಕಂಪನಿ ನೋಡಿಕೊಳ್ಳುವ ಸಾಮಾಜಿಕ ಜಾಲತಾಣದಲ್ಲಿ ಗಮನಿಸಬಹುದು ಎಂದು ಹೇಳಿದ್ದಾರೆ.

ಸಿನಿಮಾ ಕೆಲಸದ ಸಂದರ್ಭದಲ್ಲಿ ಸೋಷಿಯಲ್‌ ಮೀಡಿಯಾದಿಂದ ಉಂಟಾಗುವ ವ್ಯಾಕುಲತೆಯನ್ನು ತಪ್ಪಿಸಲು ಈ ನಿರ್ಧಾರಕ್ಕೆ ಬಂದಿರುವುದಾಗಿ ಆಮಿರ್‌ ಹೇಳಿದ್ದಾರೆ. ಇದರ ಬದಲು ತಮ್ಮ ಪ್ರೊಡಕ್ಷನ್‌ ಹೌಸ್‌ನ ಯೂಸರ್‌ ಐಡಿಯೊಂದನ್ನು ಅವರು ಶೇರ್‌ ಮಾಡಿಕೊಂಡಿದ್ದು, ಅವರ ಕುರಿತಾದ ಎಲ್ಲಾ ಅಪ್‌ಡೇಟ್‌ಗಳನ್ನು ಇದರಲ್ಲಿ ತಿಳಿದುಕೊಳ್ಳಬಹುದು ಎಂದಿದ್ದಾರೆ. ಆಮಿರ್ ಖಾನ್ ಸಿನಿಮಾ ಹೊರತಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲ್ಲ. ಪ್ರಶಸ್ತಿ ಸಮಾರಂಭಗಳಿಂದಲೂ ಆಮಿರ್ ದೂರ ಇರಲು ಇಷ್ಟಪಡುತ್ತಾರೆ. ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾ ಖಾತೆ ಹೊಂದಿದ್ದರೂ ಆಮಿರ್ ಸಕ್ರಿಯವಾಗಿರಲಿಲ್ಲ. ಅಪರೂಪಕ್ಕೆ ಎಂಬಂತೆ ತಮ್ಮ ಸಿನಿಮಾದ ಮಾಹಿತಿ, ವೈಯಕ್ತಿಕ ಬದುಕು, ತೆರೆ ಹಿಂದಿನ ಮಸ್ತಿ ವೀಡಿಯೋ ಮತ್ತು ಹಳೆಯ ನೆನಪುಗಳನ್ನ ಹಂಚಿಕೊಳ್ಳುತ್ತಿದ್ದರು. ಸೋಷಿಯಲ್‌ ಮೀಡಿಯಾದ ನೆಪದಲ್ಲಿ ತೋರಿಕೆಯ ಪ್ರದರ್ಶನವೂ ನನ್ನಿಂದ ಸಾಧ್ಯವಿಲ್ಲ. ಅದಕ್ಕೆ ಈ ಹಿಂದಿನಂತೆಯೇ ಸಂವಹನ ನಡೆಸಲು ನಿರ್ಧರಿಸಿದ್ದೇನೆ. ಇದು ನನ್ನ ಕೊನೆಯ ಪೋಸ್ಟ್‌. ನಾನು ಎಂದೆಂದಿಗೂ ಸೋಷಿಯಲ್‌ ಮೀಡಿಯಾವನ್ನು ತ್ಯಜಿಸುತ್ತಿದ್ದೇನೆ ಎಂದು ಅವರು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಕರೀನಾ ಕಪೂರ್ ಜೊತೆಗೆ ಆಮೀರ್ ಖಾನ್ ಲಾಲ್ ಸಿಂಗ್ ಛಡ್ಡಾ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ರಿಲೀಸ್‌ಗೆ ರೆಡಿಯಾಗುತ್ತಿದೆ. ಇದೀಗ ಸೋಶಿಯಲ್ ಮೀಡಿಯಾದಿಂದ ದೂರವಾಗಿರುವ ವಿಷಯ ತಿಳಿಸಿದ್ದು, ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!