ಸೈಟ್ ಅಥವಾ ನಿಮ್ಮ ಜಮೀನಿನಲ್ಲಿ ಬೋರವೆಲ್ ಕೊರೆಸುವ ಮುನ್ನ ಇದು ತಿಳಿದಿರಲಿ

0 16

ರೈತರು ತಮ್ಮ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗಳಿಗೆ ನೀರನ್ನು ಒದಗಿಸಬೇಕಾಗುತ್ತದೆ. ನೀರು ಒದಗಿಸಲು ಜಮೀನಿನಲ್ಲಿ ಬೋರ್ವೆಲ್ ಕೊರೆಸಬೇಕಾಗುತ್ತದೆ. ಬೋರ್ವೆಲ್ ಕೊರೆಸಲು ಅದರ ಬಗ್ಗೆ ಕೆಲವು ಮಾಹಿತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಬೋರ್ವೆಲ್ ಕೊರೆಸುವುದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ರೈತರು ತಮ್ಮ ಜಮೀನಿನಲ್ಲಿ ಬೋರ್ವೆಲ್ ಕೊರೆಸಬೇಕಾದರೆ ಬೋರ್ವೆಲ್ ಬಗ್ಗೆ ಕೆಲವು ಮಾಹಿತಿಯನ್ನು ತಿಳಿದುಕೊಳ್ಳಲೇಬೇಕಾಗುತ್ತದೆ. ಸರಿಯಾಗಿ ತಿಳಿದುಕೊಳ್ಳದೆ ಬೋರ್ವೆಲ್ ಕೊರೆಸಬಾರದು. ಬೋರ್ವೆಲ್ ಕೊರೆಸುವುದಿದ್ದರೆ ಅನುಮತಿ ಪಡೆಯಬೇಕಾಗುತ್ತದೆ, ಫಾರ್ಮ್ ತುಂಬಿ ಐದುನೂರು ರೂಪಾಯಿಯನ್ನು ಬ್ಯಾಂಕಿನಲ್ಲಿ ಕಟ್ಟಬೇಕಾಗುತ್ತದೆ. ಅದರ ಚಲನ್ ಅನ್ನು ಅಪ್ಲಿಕೇಷನ್ ಜೊತೆ ಅಟ್ಯಾಚ್ ಮಾಡಿ ಸಬ್ಬಮಿಟ್ ಮಾಡಬೇಕಾಗುತ್ತದೆ ಸಬ್ಬಮಿಟ್ ಮಾಡಿದ ನಂತರ ಒಂದರಿಂದ ಎರಡು ತಿಂಗಳು ಸಮಯ ಬೇಕಾಗುತ್ತದೆ. ನಂತರ ಜಿಯೋಲೊಜಿಸ್ಟ್ ಅಥವಾ ನೀರಿನ ಬಗ್ಗೆ ಹೇಳುವವರನ್ನು ಕರೆಸಬೇಕು. ಜಿಯೋಲೊಜಿಸ್ಟ್ ಅವರು ಸೈಂಟಿಫಿಕ್ ರೀತಿಯಲ್ಲಿ ನೀರಿರುವ ಜಾಗವನ್ನು ಹುಡುಕಿಕೊಡುತ್ತಾರೆ. ಜಿಯೋಲೊಜಿಸ್ಟ್ ಸಾಮಾನ್ಯವಾಗಿ 1,500- 2,000 ರೂಪಾಯಿ ಚಾರ್ಜ್ ಮಾಡುತ್ತಾರೆ. ಜಿಯೋಲೊಜಿಸ್ಟ್ ಒಂದು ರಿಪೋರ್ಟ ಕೊಡುತ್ತಾರೆ. ಅದರಲ್ಲಿ ಬೋರ್ವೆಲ್ ಎಷ್ಟು ಆಳ ಹೊಡಿಸಬೇಕು, ಕೇಸಿಂಗ್ ಪೈಪ್ ಎಷ್ಟು ಬೇಕಾಗುತ್ತದೆ, ಮಣ್ಣು ಹೇಗಿದೆ, ಕಲ್ಲು ಹೇಗಿದೆ ಎಂಬೆಲ್ಲಾ ಮಾಹಿತಿಯು ಒಳಗೊಂಡಿರುತ್ತದೆ. ರಿಪೋರ್ಟ್ ನ ಹಿಂದುಗಡೆ ಲೇಔಟ್ ಹಾಕಿರುತ್ತಾರೆ.

ಜಿಯೋಲೊಜಿಸ್ಟ ಹೇಳಿದ ಜಾಗದಲ್ಲಿ ಮರದ ಕೋಲು ಅಥವಾ ಪಿವಿಸಿ ಪೈಪ್ ಅನ್ನು ಹುಗಿಯಬೇಕು. ಇದರಿಂದ ಬೋರ್ವೆಲ್ ಕೊರೆಯುವ ಮಷೀನ್ ಬಂದಾಗ ಸುಲಭವಾಗಿ ಗುರುತಿಸಬಹುದು. ನಂತರ ಬೋರ್ವೆಲ್ ವೆಂಡರ್ ಇರುತ್ತಾರೆ ಅವರನ್ನು ಕರೆಸಬೇಕು ಅವರು ಒಂದು ಕೊಟೇಶನ್ ಕೊಡುತ್ತಾರೆ. ಅದು ಫೀಟ್ ಲೆಕ್ಕದ ಒಂದು ಚಾರ್ಟ್ ಅದರಲ್ಲಿ ಎಷ್ಟು ಫೀಟ್ ಗೆ ಎಷ್ಟು ಅಮೌಂಟ್ ಆಗುತ್ತದೆ ಎಂಬ ಮಾಹಿತಿ ಇರುತ್ತದೆ. ಹೆಚ್ಚು ಆಳ ಮಾಡಿದ ಹಾಗೆ ಅಮೌಂಟ್ ಕೂಡ ಹೆಚ್ಚಾಗುತ್ತದೆ. ಇದರೊಂದಿಗೆ ಮಟೀರಿಯಲ್ಸ್ ಗೆ ಖರ್ಚಾಗುತ್ತದೆ ವೆಲ್ಡಿಂಗ್ ಚಾರ್ಜ್, ಕೇಸಿಂಗ್ ಪೈಪ್ ಚಾರ್ಜ್, ಕೊನೆಯದಾಗಿ ಕ್ಯಾಪ್ ಹಾಕುತ್ತಾರೆ ಅದರ ಚಾರ್ಜ್ ಹೀಗೆ ಕೆಲವು ಮಟೀರಿಯಲ್ಸ್ ಬೇಕಾಗುತ್ತದೆ ಅವುಗಳಿಗೆ ಹಣ ಕೊಡಬೇಕಾಗುತ್ತದೆ. ಈ ಎಲ್ಲಾ ಮಾಹಿತಿಯನ್ನು ಸರಿಯಾಗಿ ಅನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಬೋರ್ವೆಲ್ ಕೊರೆಸಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ರೈತರಿಗೂ ತಿಳಿಸಿ, ಸರಿಯಾದ ರೀತಿಯಲ್ಲಿ ಬೋರ್ವೆಲ್ ಕೊರೆಸಿ, ನಿಮ್ಮ ಜಮೀನನ್ನು ಅಭಿವೃದ್ಧಿ ಪಡಿಸಿಕೊಳ್ಳಿ.

Leave A Reply

Your email address will not be published.