ಜನರು ಬಯಸಿದಂತೆ ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳು ಭಾರತದಲ್ಲಿ ಬಹಳ ಜನಪ್ರಿಯವಾಗಿವೆ. ಖಾತರಿಯ ಆದಾಯದೊಂದಿಗೆ ಸುರಕ್ಷಿತ ಹೂಡಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಯೋಜನೆಗಳು ಇವು. ಹೂಡಿಕೆದಾರರಲ್ಲಿ ಉಳಿತಾಯ ಅಭ್ಯಾಸವನ್ನು ಉತ್ತೇಜಿಸಲು ಈ ಅಂಚೆ ಕಚೇರಿ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಅಪಾಯ-ಮುಕ್ತ ಆದಾಯ ಮತ್ತು ಉತ್ತಮ ಬಡ್ಡಿದರಗಳನ್ನು ನೀಡುವ ಉತ್ಪನ್ನಗಳಾಗಿವೆ. ಬಡ್ಡಿದರಗಳು ಸಣ್ಣ ಉಳಿತಾಯ ಯೋಜನೆಗಳು ಪ್ರತಿ ತ್ರೈಮಾಸಿಕವನ್ನು ಸರ್ಕಾರ ನಿರ್ಧರಿಸುತ್ತದೆ. ಭಾರತ ಸರ್ಕಾರ ನೀಡುವ ಎಲ್ಲಾ ಒಂಬತ್ತು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳನ್ನು ಪರಿಶೀಲಿಸೋಣ. ಪೋಸ್ಟ್ ಆಫೀಸ್ ನ ಈ ಹೊಸ ಯೋಜನೆಯ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ.
ಬಬ್ಲಿಕ್ ಪ್ರೋವೇಡೆಂಟ್ ಫಂಡ್ ಅಕೌಂಟ್ ತೆರೆಯಲು ವ್ಯಕ್ತಿಗೆ ಮೊದಲು ಮುಖ್ಯವಾಗಿ ಹದಿನೆಂಟು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸು ಆಗಿರಬೇಕು. ಇನ್ನು ಈ ಅಕೌಂಟ್ ತೆರೆಯಲು ಒಂದು ಅರ್ಜಿ ಭರ್ತಿ ಮಾಡಬೇಕಾಗುವುದು ಹಾಗೂ ಈ ಅರ್ಜಿ ಭರ್ತಿ ಮಾಡಲು ಕೆಲವು ದಾಖಲೆಗಳು ಬೇಕಾಗುವುದು. ಆ ದಾಖಲೆಗಳು ಏನೂ ಎನ್ನುವುದನ್ನು ನೋಡುವುದಾದರೆ, ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್ ಪೋರ್ಟ್ ಸೈಜ್ ಫೋಟೋ ಮತ್ತು ಪ್ಯಾನ್ ಕಾರ್ಡ್ ಈ ಎಲ್ಲಾ ದಾಖಲೆಗಳು ಬೇಕಾಗುವುದು. ಈ ಯೋಜನೆಯು ಹದಿನೈದು ವರ್ಷಗಳ ಅವಧಿ ಹೊಂದಿದ್ದು ಬೇಕಿದ್ದಲ್ಲಿ ಇನ್ನೂ ಐದು ವರ್ಷಗಳ ಕಾಲ ವಿಸ್ತರಿಸಬಹುದು. ಈ ಯೋಜನೆಯನ್ನು ಭಾರತೀಯ ವ್ಯಕ್ತಿ ಒಬ್ಬ ವ್ಯಕ್ತಿ ಒಂದು ಅಕೌಂಟ್ ಮಾತ್ರ ತೆರೆಯಬಹುದು. ಮುಖ್ಯವಾಗಿ ಖಾತೆ ತೆರೆಯುವಾಗ ಮುಖ್ಯವಾಗಿ ನಾಮಿನಿ ಡೀಟೇಲ್ಸ್ ಸರಿಯಾಗಿ ಭರ್ತಿ ಮಾಡಬೇಕು. ಏಕೆಂದರೆ ಅಕೌಂಟ್ ಹೊಂದಿರುವ ವ್ಯಕ್ತಿಯ ಸಾವಿನ ನಂತರ ನಾಮಿನಿಗೆ ಎಲ್ಲಾ ಹಣ ಹಾಗೂ ಬಡ್ಡಿ ಎಲ್ಲವೂ ಸೇರುತ್ತದೆ.
ಆದಾಯ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ನೀವು ಹೂಡಿಕೆ ಮಾಡಿರುವ ಮೊತ್ತಕ್ಕೆ ವಿನಾಯತಿಯನ್ನು ಪಡೆಯಬಹುದು ಹಾಗೂ ಇಲ್ಲಿ ಒಂದೂವರೆ ಲಕ್ಷದವರೆಗೆ ವಿನಾಯತಿ ಪಡೆಯಲು ಅವಕಾಶ ಇದೆ. ಈ ಯೋಜನೆಯಲ್ಲಿ ನೀವು ವಾರ್ಷಿಕ ಮಿನಿಮಮ್ ಐದುನೂರು ರೂಪಾಯಿ ಹಾಗೂ ಹೆಚ್ಚು ಅಂದರೆ ಒಂದೂವರೆ ಲಕ್ಷದವರೆಗೆ ಕೂಡಾ ಡೆಪಾಸಿಟ್ ಮಾಡಬಹುದು. ಒಂದುವೇಳೆ ಒಂದು ವರ್ಷದಲ್ಲಿ ನೀವು ಐದುನೂರು ರೂಪಾಯಿ ಡೆಪಾಸಿಟ್ ಕಟ್ಟದೇ ಇದ್ದರೆ ಮುಂದಿನ ವರ್ಷದಲ್ಲಿ ಐದುನೂರು ರೂಪಾಯಿ ಜೊತೆ ಸೇರಿ ದಂಡ ಎಂದು ಐವತ್ತು ರೂಪಾಯಿ ಹಣ ಒಟ್ಟು ಸೇರಿ ಐದುನೂರ ಐವತ್ತು ರೂಪಾಯಿ ಹಣವನ್ನು ಕಟ್ಟಬೇಕು. ಇನ್ನು ಬಡ್ಡಿ ಇಲ್ಲಿ 7.1% ಅಷ್ಟು ಇರುವುದು. ಹಾಗೂ ಪ್ರತೀ ಮೂರು ತಿಂಗಳಿಗೆ ಒಮ್ಮೆ ಬಡ್ಡಿ ಬದಲಾಗುವುದು. ಒಂದುವೇಳೆ ನಿಮಗೆ ಅವಧಿಗೂ ಮುನ್ನವೇ ಅಕೌಂಟ್ ಕ್ಲೋಸ್ ಮಾಡಬೇಕು ಎನಿಸಿದರೆ ಕೆಲವು ನಿಯಮಗಳನ್ನು ಅನುಸರಿಸಲೇಬೇಕು. ನಿಯಮಗಳು ಈ ರೀತಿಯಾಗಿದೆ. ಅಕೌಂಟ್ ತೆರೆದ ಐದು ವರ್ಷಗಳ ನಂತರ ಕ್ಲೋಸ್ ಮಾಡಬಹುದೇ ವಿನಃ ಅಷ್ಟರ ಒಳಗೆ ಕ್ಲೋಸ್ ಮಾಡುವ ಹಾಗಿಲ್ಲ. ಖಾತೆದಾರರ ಸಂಗಾತಿ, ಪೋಷಕರು, ಮಕ್ಕಳು ಒಂದುವೇಳೆ ಗಂಭೀರ ಕಾಯಿಲೆಗೆ ಒಳಗಾಗಿದ್ದರೆ, ಉನ್ನತ ಶಿಕ್ಷಣಕ್ಕಾಗಿ ಮಾತ್ರವೇ ಇದನ್ನು ಕ್ಲೋಸ್ ಮಾಡಬಹುದು.
ಯಾವುದೇ ಬ್ರೌಸರ್ ಓಪನ್ ಮಾಡಿಕೊಂಡು ಅಲ್ಲಿ ಪೋಸ್ಟ್ ಆಫೀಸ್ ಪಬ್ಲಿಕ್ ಪ್ರೊವಿಡೆಂಟ್ ಫಂಡ್ ಎಂದು ಟೈಪ್ ಮಾಡಿ ಸರ್ಚ್ ಮಾಡಿ ಅಲ್ಲಿ ಕಾಣುವ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಪೋಸ್ಟ್ ಆಫೀಸ್ ನ PPF ಕ್ಯಾಲ್ಕುಲೇಟರ್ ಮಾಡಬಹುದು. ಉದಾಹರಣೆಗೆ ಒಂದುವೇಳೆ ನೀವು ಒಂದು ವರ್ಷದಲ್ಲಿ ಹನ್ನೆರಡು ಸಾವಿರ ರೂಪಾಯಿ ಡೆಪಾಸಿಟ್ ಮಾಡಿದರೆ ಹದಿನೈದು ವರ್ಷಗಳ ಅವಧಿಯಲ್ಲಿ 7.1% ಬಡ್ಡಿ ದರದಲ್ಲಿ ಕ್ಯಾಲ್ಕುಲೇಟ್ ಮಾಡಿದಾಗ ನಿಮ್ಮ ಹಣ ಒಂದು ಲಕ್ಷದ ಎಂಭತ್ತು ಸಾವಿರ ರೂಪಾಯಿ ಹಾಗೂ ನೀವು ಗಳಿಸಿದ ಬಡ್ಡಿ ಒಂದು ಲಕ್ಷದ ನಲವತ್ತೈದು ಸಾವಿರದ ನಾಲ್ಕುನೂರ ಐವತ್ತೇಳು ರೂಪಾಯಿ ಹಾಗೂ ಒಟ್ಟು ನೀವು ಗಳಿಸುವ / ಪಡೆಯುವ ಹಣ ಮೂರು ಲಕ್ಷದ ಇಪ್ಪತ್ತೈದು ಸಾವಿರದ ನಾಲ್ಕುನೂರ ಐವತ್ತೇಳು ರೂಪಾಯಿ. ಈ ರೀತಿಯಾಗಿ ನೀವು ನಿಮ್ಮ ಹಣವನ್ನು ಕ್ಯಾಲ್ಕುಲೇಟ್ ಮಾಡಿಕೊಳ್ಳಬಹುದು.