ಊರಿಂದ ಊರಿಗೆ ಅಥವಾ ಬೇರೆ ದೇಶಗಳಿಗೆ ಸಂಪರ್ಕವನ್ನು ಮಾಡಲು ಏರ್ಲೈನ್ಸ್ ಸಂಸ್ಥೆಗಳು ಅದ್ಭುತವಾಗಿ ಕೆಲಸ ಮಾಡುತ್ತವೆ. ಏರ್ಲೈನ್ಸ್ ಮೂಲಕ ಯಾವುದೇ ದೇಶಗಳಿಗೆ ಆದರೂ ಅತ್ಯಂತ ವೇಗವಾಗಿ ತಲುಪಲು ಸಾಧ್ಯವಾಗುತ್ತದೆ. ಅನೇಕ ಏಲೈನ್ಸ್ ಸಂಸ್ಥೆಗಳು ಭಾರತದಲ್ಲಿ ಕೆಲಸ ಮಾಡುತ್ತಿದೆ. ಜೆಟ್ ಏರ್ವೇ,ಏರ್ ಇಂಡಿಯಾ,ಸ್ಪೈಸ್ ಜೆಟ್, ವಿಸ್ತಾರ, ಇಂಡಿಗೋ ಹೀಗೆ ಅನೇಕ ಸಂಸ್ಥೆಗಳು ಈ ಸೇವೆಯನ್ನು ನೀಡುತ್ತಿದೆ. ಇದರಲ್ಲಿ ಇಂಡಿಗೋ ಸಂಸ್ಥೆಯು ಕೂಡ ಅದ್ಭುತವಾದ ಏರ್ಲೈನ್ಸ್ ಸಂಸ್ಥೆಯಾಗಿದೆ. ಆದ್ದರಿಂದ ನಾವು ಇಲ್ಲಿ ಏರ್ಲೈನ್ಸ್ ನೇಮಕಾತಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕಳೆದ ಮೂರು ತಿಂಗಳಿನಲ್ಲಿ ನಡೆದ ಷೇರು ವಹಿವಾಟಿನಲ್ಲಿ ಚೀನಾಗೆ ಸೇರಿದ 9 ಕಂಪನಿಗಳು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿವೆ. ಭಾರತದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿರುವ ಇಂಡಿಗೋ ಸಂಸ್ಥೆಯ ಷೇರುಗಳು 6ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇಂಡಿಗೋ ಸಂಸ್ಥೆ ಷೇರುಗಳಲ್ಲಿ ಶೇ.13ರಷ್ಟು ಏರಿಕೆ ಕಂಡು ಬಂದಿದ್ದು ಅಗ್ರಸ್ಥಾನದಲ್ಲಿರುವ ಚೀನಾದ ಸ್ಪ್ರಿಂಗ್ ಏರ್ ಲೈನ್ಸ್ ಸಂಸ್ಥೆ ಷೇರುಗಳಲ್ಲಿ ಶೇ.22ರಷ್ಟು ಏರಿಕೆ ಕಂಡುಬಂದಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಜಾಗತಿಕ ವಿಮಾನಯಾನಕ್ಕೆ ಆರ್ಥಿಕ ಹೊಡೆತ ಬಿದ್ದಿದೆ. ಇಂಡಿಗೋ ಏರ್ಲೈನ್ಸ್ ರಿಕ್ರೂಟ್ಮೆಂಟ್ ಅನ್ನು ಕರೆದಿದ್ದಾರೆ. ಅದರಲ್ಲಿ ಇರುವಂತಹ ಆಫೀಸ್ ಎಕ್ಸಿಕ್ಯೂಟಿವ್, ಆಫೀಸರ್, ಮತ್ತು ಇನ್ನೂ ಹಲವು ಹುದ್ದೆಗಳಿಗೆ ಕರೆದಿದ್ದಾರೆ.
ಇದರ ಅರ್ಜಿಗಳನ್ನು ಆನ್ ಲೈನ್ ಮುಖಾಂತರವೇ ತುಂಬಬೇಕಾಗುತ್ತದೆ. ಅವರ ಆಫೀಸ್ ವೆಬ್ಸೈಟ್ ಮುಖಾಂತರವೇ ಅರ್ಜಿಯನ್ನು ತುಂಬಬೇಕಾಗುತ್ತದೆ. ಇದನ್ನು ತುಂಬ ಬಯಸುವ ಅಭ್ಯರ್ಥಿಗಳು ಹತ್ತನೇ ತರಗತಿ ಅಥವಾ ಪಿಯುಸಿ ಆಧಾರದ ಮೇಲು ಅರ್ಜಿಯನ್ನು ತುಂಬ ಬಹುದಾಗಿದೆ. ಇದರ ಉದ್ಯೋಗವು ಭಾರತದ ಯಾವುದೇ ಶಾಖೆಯಲ್ಲಿ ಆದರೂ ಕೆಲಸ ಮಾಡಬೇಕಾಗುತ್ತದೆ. ಇದಕ್ಕೆ ಹೆಣ್ಣು ಅಥವಾ ಗಂಡು ಯಾರಾದರೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇಂಡಿಗೋ ಏರ್ಲೈನ್ಸ್ ಅಪ್ಲಿಕೇಶನನ್ನು ತುಂಬಲು ಯಾವುದೇ ಅಪ್ಲಿಕೇಶನ್ ಪೀಸ್ ಇರುವುದಿಲ್ಲ. ಇದರಲ್ಲಿ ನೇರವಾಗಿ ನೇಮಕಾತಿ ಅಥವಾ ಇಂಟರ್ವ್ಯೂ ಬೇಸ್ ಮೇಲೆ ಕೂಡ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತವೆ. ಬೇರೆ ಯಾವುದೇ ತರಹದ ಪರೀಕ್ಷೆಗಳು ಇರುವುದಿಲ್ಲ.
ಇಂಡಿಗೋ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಅರ್ಜಿ ನೀಡುವವರಿಗೆ 18 ರಿಂದ 40 ವರ್ಷದ ವಯೋಮಿತಿ ಇರುತ್ತದೆ. ಈ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವವರಿಗೆ 25000ರೂಪಾಯಿದಿಂದ 45000ಸಾವಿರವರೆಗೆ ಪ್ರತಿ ತಿಂಗಳ ಸಂಬಳ ಇರುತ್ತದೆ. ಇದರ ಅಪ್ಲಿಕೇಶನ್ ಮಾರ್ಚ್ 1 ರಿಂದ ಆರಂಭವಾಗಿದೆ. ಇದನ್ನು ತುಂಬಲು ಬೇಕಾಗಿರುವ ಡಾಕ್ಯುಮೆಂಟ್ಸ್ ಅಂದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಜುಕೇಶನ್ ಸರ್ಟಿಫಿಕೇಟ್, ಫೋಟೋ ಹಾಗೂ ಸಿಗ್ನೇಚರ್ ಗಳು ಬೇಕಾಗುತ್ತದೆ. ಇಂತಹ ಸಂಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.