ಕನ್ನಡದಲ್ಲಿ ಡ್ರೈವಿಂಗ್ ಕಲಿಯೋದು ಹೇಗೆ ನೋಡಿ

0 8

ಕಾರಿನ ಒಳಗಡೆ ಕೂತು ಕೀಲಿಕೈ ಹಾಕಿ ಎರಡು ಸ್ಟೆಪ್ ಮೇಲಕ್ಕೆ ಮಾಡಿ ಸ್ಟಾರ್ಟ್ ಮಾಡಿ. ನಿಮ್ಮ ಕಾಲು ಕ್ಲಚ್ ಪೂರ್ತಿ ಅದುಮಿರಲಿ. ಗೇರ್ ನ್ಯೋಟ್ರೊಲ್ ನಲ್ಲಿರಲಿ. ಯಾವುದೇ ಗೇರ್ ಹಾಕುವಾಗ ಮ್ಯಾನುಯಲ್ ಗೇರ್ ಕಾರುಗಳಲ್ಲಿ ಕ್ಲಚ್ ಪೂರ್ತಿಯಾಗಿ ಅದುಮಿಟ್ಟುಕೊಳ್ಳಬೇಕು. ಬ್ರೇಕ್ ಗಟ್ಟಿಯಾಗಿ ಅದುಮಿಟ್ಟುಕೊಳ್ಳಿ. ನಿಮ್ಮ ಸೀಟು ಪಕ್ಕದಲ್ಲಿ ಒಂದು ಪಾರ್ಕಿಂಗ್ ಬ್ರೇಕ್ ಅಥವಾ ಹ್ಯಾಂಡ್ ಬ್ರೇಕ್ ಇದೆ. ಅದರ ಮೇಲಿರುವ ಬಟನ್ ಕ್ಲಿಕ್ ಮಾಡಿ ಅದನ್ನು ಕೆಳಕ್ಕೆ ಮಾಡಿ. ಎಡಗಾಲಿನಲ್ಲಿರುವ ಕ್ಲಚ್ ಪೂರ್ತಿ ತುಳಿದುಬಿಡಿ. ತಪ್ಪಿಯೂ ಆಕ್ಸಿಲರೇಟರ್ ಅದುಮದಿರಿ. ಈಗ ಗೇರನ್ನು ನ್ಯೂಟ್ರೊಲಿಗೆ ತನ್ನಿ. ನಿಮ್ಮ ಎರಡು ಕಾಲು ಕ್ಲಚ್ ಮತ್ತು ಬ್ರೇಕ್ ಮೇಲಿದೆಯಲ್ವ. ಬ್ರೇಕ್ ಮೇಲಿಂದ ಕಾಲು ತೆಗೆದುಬಿಡಿ(ಕಾರು ನ್ಯೂಟ್ರೊಲ್ ನಲ್ಲಿರೊದನ್ನು ಖಚಿತಪಡಿಸಿಕೊಳ್ಳಿ). ಬ್ರೇಕ್ ಮೇಲಿನಿಂದ ಕಾಲು ತೆಗೆದು ಆಕ್ಸಿಲರೇಟರ್ ಮೇಲೆ ಇಟ್ಟುಬಿಡಿ(ನಿಲ್ಲಿ, ಈಗ್ಲೇ ಒತ್ತಬೇಡಿ). ಫಸ್ಟ್ ಗೇರ್ ಹಾಕಿ. ಮೆಲ್ಲಗೆ ಕ್ಲಚ್ ರಿಲೀಸ್ ಮಾಡುತ್ತ ಬನ್ನಿ(ಒಮ್ಮೆಗೆ ಬಿಡಬೇಡಿ). ಎಡಗಾಲಿನಲ್ಲಿ ನಿಧಾನವಾಗಿ ಕ್ಲಚ್ ಬಿಡುತ್ತ, ಬಲಗಾಲಿನಲ್ಲಿ ನಿಧಾನವಾಗಿ ಆಕ್ಸಿಲರೇಟರ್ ಒತ್ತುತ್ತ ಬನ್ನಿ.

ಕಾರು ಎಂಜಿನ್ ಆಫ್ ಆಯ್ತಾ? ಇನ್ನೊಮ್ಮೆ ಮೊದಲು ಹೇಳಿಕೊಟ್ಟ ಹಾಗೆ ಮಾಡುತ್ತ ಬನ್ನಿ. ಕ್ಲಚ್ ನಿಧಾನವಾಗಿ ಬಿಡುತ್ತ, ಆಕ್ಸಿಲರೇಟರ್ ನಿಧಾನವಾಗಿ ಅದುಮುವ ಕಲೆ ನಿಮಗೆ ಅರಿವಾಗುವರೆಗೆ ಕಾರು ಆಫ್ ಆಗುತ್ತ ಇರುತ್ತದೆ. ಅರೇ ಕಾರು ಹೋಗ್ತಾ ಇದೆ. ಈಗ ಫಸ್ಟ್ ಗೇರ್ ನಲ್ಲಿ ಇದ್ದಿರಲ್ವ? ಕಾರು ಸ್ಲೋ ಆಗಿ ಹೋಗ್ತಾ ಇದೆ. ಸೆಕೆಂಡ್ ಗೇರ್ ಗೆ ಶಿಫ್ಟ್ ಮಾಡಿ. ಆಕ್ಸಿಲರೇಟರ್ ಸ್ವಲ್ಪಸ್ವಲ್ಪವೇ ಹೆಚ್ಚು ಅದುಮುತ್ತ ಬನ್ನಿ. ವೇಗದಲ್ಲಿ ಹೋಗಲು ಥರ್ಡ್ ಗೇರಿಗೆ ಬನ್ನಿ. ಇವತ್ತು ಫೋರ್ಥ್ ಗೇರ್ ಬೇಡ. ಏನಾದರೂ ಜಂಪ್/ಹಂಪ್ ಕಂಡರೆ ಎರಡನೇ ಗೇರಿಗೆ ಬಂದು ಹಂಪ್ ಮೇಲೆ ಚಲಾಯಿಸಿ. ಎದುರಲ್ಲಿ ಏನಾದರೂ ಅಡ್ಡಬರೋದು ದೂರದಲ್ಲಿ ಕಂಡಾಕ್ಷಣ, ಆಕ್ಸಿಲರೇಟರಿನಿಂದ ಕಾಲು ತೆಗೆದು ನಿಧಾನವಾಗಿ ಬ್ರೇಕ್ ಹಾಕಿ. ಆದಷ್ಟು ಸಮತಟ್ಟಿರುವ ರಸ್ತೆ ಬದಿಗೆ ಬನ್ನಿ. ಕ್ಲಚ್ ಪೂರ್ತಿಯಾಗಿ ತುಳಿದಿರಿ. ಬ್ರೇಕ್ ಕೂಡ ಹಾಕಿ. ಯಾವ ಗೇರಿನಲ್ಲಿದ್ದೀರೋ ಅಲ್ಲಿಂದ ಹಿಂದಕ್ಕೆ ಬಂದು ನೀಟ್ರೋಲಿಗೆ ತನ್ನಿ. ಕೀಲಿಕೈ ತೆಗೆದು ಎಂಜಿನ್ ಆಫ್ ಮಾಡಿ. ಹ್ಯಾಂಡ್ ಬ್ರೇಕ್ ಹಾಕಿ. ಹ್ಯಾಂಡ್ ಬ್ರೇಕ್ ಮೇಲೆ ಇರೋ ಬಟನ್ ಕ್ಲಿಕ್ ಮಾಡಿ ಮೇಲಕ್ಕೆ ಮಾಡಿದರೆ ಆಯ್ತು. ಕ್ಲಚ್ ಬಿಡಿ. ಮೆಲ್ಲಗೆ ಬ್ರೇಕ್ ಕೂಡ ಬಿಡಿ. ಕಾರು ಮೂವ್ ಆಗ್ತಾ ಇಲ್ಲ ಅನ್ನೋದು ಖಚಿತವಾಗಿದೆ ತಾನೇ. ಸರಿ ಸೀಟ್ ಹಿಂದಕ್ಕೆ ಸರಿಸಿ. ಕಿಟಕಿ ಗಾಜು ಮೇಲಕ್ಕೆ ಏರಿಸಿ. ಸೀಟ್ ಬೆಲ್ಟ್ ತೆಗೆದು ಕೆಳಗಿಳಿದುಬಿಡಿ.

ಹೆಚ್ಚು ಹೆಚ್ಚು ಡ್ರೈವ್ ಮಾಡಿದಷ್ಟು ಡ್ರೈವಿಂಗ್ ಕಲೆ ನಿಮಗೆ ಸಂಪೂರ್ಣವಾಗಿ ನಿಮಗೆ ಒಲಿಯಬಹುದು. ವಾಹನ ಚಾಲನೆ ನೀತಿನಿಯಮಗಳು, ಸಂಚಾರಿ ನಿಯಮಗಳು ಇತ್ಯಾದಿಗಳನ್ನು ಪಾಲಿಸಿ ಅತ್ಯುತ್ತಮ ಚಾಲಕ ನೀವಾಗಿ. ಸರಿ ಕಲ್ಪನೆ ಮೂಲಕ ಕಾರು ಕಲಿತದ್ದು ಸಾಕು. ಇನ್ನು ಪರಿಣತ ಚಾಲಕರನ್ನು ಪಕ್ಕದಲ್ಲಿಟ್ಟುಕೊಂಡು ಡ್ರೈವ್ ಮಾಡಿ. ಅಥವಾ ಡ್ರೈವಿಂಗ್ ಸ್ಕೂಲಿಗೆ ಸೇರಿಬಿಡಿ.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave A Reply

Your email address will not be published.