ಒಂದು ಸಿನಿಮಾ ಯಶಸ್ಸು ಪಡೆಯಬೇಕಾದರೆ ಅದರ ಹಾಡುಗಳು ಮುಖ್ಯವಾಗಿದೆ. ರಾಬರ್ಟ್ ಸಿನಿಮಾದ ಎಲ್ಲ ಹಾಡುಗಳು ಪ್ರಶಂಸೆ ಪಡೆಯುತ್ತಿದೆ. ಜೊತೆಗೆ ಹಾಡಿದವರು ಪ್ರಶಂಸೆ ಪಡೆಯುತ್ತಿದ್ದಾರೆ ಅದು ಯಾವ ಹಾಡು, ಹಾಡಿದವರು ಯಾರು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಹಾಡು ಕೇಳುವುದು ಎಂದರೆ ಬಹಳಷ್ಟು ಜನರಿಗೆ ಇಷ್ಟವಾಗುತ್ತದೆ. ಕೊರೋನ ಹಾವಳಿಯಿಂದ ಸಿನಿಮಾ ಶೂಟಿಂಗ್ ನಿಂತು ಸಿನಿಮಾಗಳು ಬಿಡುಗಡೆಯಾಗದೆ ಹೊಸ ಸಿನಿಮಾ ಹಾಡುಗಳಿಗೆ ಒಮ್ಮೆ ಬ್ರೇಕ್ ಬಿದ್ದಿತ್ತು. ಇದೀಗ ಮತ್ತೆ ಸಿನಿಮಾ ಬಿಡುಗಡೆಯಾಗುತ್ತಿದೆ ಹೊಸ ಹೊಸ ಹಾಡುಗಳು ಕಿವಿಗೆ ಕೇಳುತ್ತಿದೆ. ಯಾವ ಹಾಡು ಯಾರ ಧ್ವನಿಯಲ್ಲಿ ಅದ್ಭುತವಾಗಿ ಕೇಳುತ್ತದೆ ಎಂದು ಹೇಳುವುದು ಕಷ್ಟ. ಎಲ್ಲರಿಗೂ ಒಂದು ಧ್ವನಿ ಇಷ್ಟ ಆಗುತ್ತದೆ ಅನ್ನೋದಾದ್ರೆ ಆ ಧ್ವನಿಯಲ್ಲಿ ಏನೋ ಒಂದು ಮೋಡಿ ಇದೆ ಎಂದು ಅರ್ಥ. ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಎಲ್ಲ ಹಾಡುಗಳು ಕೇಳುಗರ ದಿಲ್ಕಿ ಫೇವರೆಟ್ ಆಗಿವೆ, ಅದರಲ್ಲೂ ಈ ಸಿನಿಮಾದ ಕಣ್ಣು ಹೊಡಿಯಾಕ, ಮೊನ್ನಿ ಕಲತಾನಿ ಅನ್ನೋ ಜವಾರಿ ಸಾಹಿತ್ಯದ ಈ ಹಾಡು ಈಗ ಕೇಳುಗರ ದಿಲ್ ಕಿ ಧಡಕನ್ ಆಗುತ್ತಿದೆ. ತೆಲುಗು ಮತ್ತು ಕನ್ನಡ ಜನತೆಗೆ ತೆಲುಗು ಗಾಯಕಿಯ ಧ್ವನಿ ಇಷ್ಟವಾಗಿದೆ. ಇನ್ಸ್ಟಾಗ್ರಾಮ್, ಫೇಸ್ಬುಕ್ ಗಳಲ್ಲಿ ಅವರ ವಿಡಿಯೋ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಲಕ್ಷ ಲಕ್ಷ ವೀಕ್ಷಣೆಯನ್ನು ರಾಬರ್ಟ್ ಸಿನಿಮಾದ ಸಾಂಗ್ಸ್ ಪಡೆದು ಮುನ್ನುಗುತ್ತಿವೆ. ಈಗ ರಾಬರ್ಟ್ ಸಿನಿಮಾದ ತೆಲುಗು ಹಾಡಿನ ಬಗ್ಗೆ ಉತ್ತಮ ಅಭಿಪ್ರಾಯ ಬಂದಿದೆ. ಕನ್ನಡದಲ್ಲಿ ‘‘ಕಣ್ಣು ಹೊಡಿಯಾಕ’’ ಅನ್ನೋ ಸಾಲಿನಿಂದ ಶುರವಾಗಿದೆ, ಅದೇ ಹಾಡು ತೆಲುಗಿನಲ್ಲಿ ‘‘ಕಣ್ಣೇ ಅಧಿರುಂಧಿ’’ ಅನ್ನೋ ಸಾಲಿನಿಂದ ಈ ಹಾಡು ಶುರುವಾಗುತ್ತದೆ. ಕನ್ನಡದ ಹಾಡಿಗೆ ಗಾನ ಕೋಗಿಲೆ ಶ್ರೇಯಾ ಘೋಷಾಲ್ ಧ್ವನಿಯಾದರೆ. ತೆಲುಗಿನಲ್ಲಿ ಸತ್ಯವತಿ ಮಂಗ್ಲಿ ಈ ಹಾಡಿನ ಧ್ವನಿಯಾಗಿದ್ದಾರೆ, ಅವರ ಧ್ವನಿಯೇ ಎಲ್ಲರ ಮನೆಮಾತಾಗಿದೆ. ಈ ಎರಡು ಹಾಡನ್ನು ಕನ್ನಡದ ಜೊತೆಗೆ ತೆಲುಗು ಫ್ಯಾನ್ಸ್ ಕೇಳಿ ಎಂಜಾಯ್ ಮಾಡ್ತಿದ್ದಾರೆ.
ಕನ್ನಡಕ್ಕಿಂತ ತೆಲುಗು ರಾಬರ್ಟ್ ಹಾಡಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ತಿದೆ, ಗಾಯಕಿ ಮಂಗ್ಲಿಯವರ ಕಂಠಸಿರಿಗೆ ತೆಲುಗು ಪ್ರೇಕ್ಷಕರ ಜೊತೆಗೆ ಕನ್ನಡ ಪ್ರೇಕ್ಷಕರು ಮೆಚ್ಚಿಕೊಂಡಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡಕ್ಕಿಂತ ತೆಲುಗು ಹಾಡೇ ಪಸಂದಾಗೈತೆ, ಮಂಗ್ಲಿ ವಾಯ್ಸ್ ಸೂಪರ್ ಆಗೈತೆ ಅಂತ ಕಾಮೆಂಟ್ ಹಾಕುತ್ತಿದ್ದಾರೆ. ಗಾಯಕಿ ಸತ್ಯವತಿ ಮಂಗ್ಲಿ ತೆಲುಗಿನ ಫೋಕ್ ಸಿಂಗರ್, ತೆಲುಗು ಸೊಗಡಿನ ಗಟ್ಟಿ ಗಾಯಕಿ. ನಮ್ಮ ಕನ್ನಡದ ಜಯಶ್ರೀ ಅಮ್ಮ ಇದ್ದ ಹಾಗೆ ಇವರ ವಾಯ್ಸ್ ಇದೆ ಎಂದು ಕೊಂಡಾಡಿದ್ದಾರೆ, ರಾಮುಲೋ ರಾಮುಲೋ ಹಾಡನ್ನು ಹಾಡಿದ್ದು ಇದೇ ಸಿಂಗಿಂಗ್ ಸಿಂಗಾರಮ್ಮ. ಸತ್ಯವತಿ ಮಂಗ್ಲಿ ತೆಲುಗಿನಲ್ಲಿ ಅನೇಕ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಈಗ ರಾಬರ್ಟ್ ಸಿನಿಮಾದ ಹಾಡೊಂದಕ್ಕೆ ಧ್ವನಿಯಾಗಿ ಮಂಗ್ಲಿ ಮತ್ತೆ ಫೇಮಸ್ ಆಗುತ್ತಿದ್ದಾರೆ. ಅವರ ಹಾಡು ಇನ್ನು ಹೆಚ್ಚಿನ ಪ್ರಶಂಸೆಯನ್ನು ಪಡೆಯಲಿ, ಹೆಚ್ಚಿನ ಹಾಡುಗಳನ್ನು ಹಾಡಲಿ ಎಂದು ಆಶಿಸೋಣ.