ಹಲ್ಲು ನಮಗೆ ಆಹಾರವನ್ನು ಸೇವನೆ ಮಾಡಬೇಕು ಎಂದಾದರೆ ಬೇಕೇ ಬೇಕು. ಇಲ್ಲವಾದಲ್ಲಿ ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ನಾವು ಸೇವನೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಹಲ್ಲನ್ನು ಬಹಳ ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ. ಈಗಿನ ಜನಗಳ ಆಹಾರ ಸೇವನೆ ಮತ್ತು ಈಗಿನ ಆಹಾರ ಶೈಲಿ ಹಲ್ಲುಗಳನ್ನು ಬಹಳ ಮೃದುವಾಗಿ ಮಾಡಿದೆ. ಅಂದರೆ ಹೆಚ್ಚಿನ ಜನರು ಹಲ್ಲಿನ ನೋವಿನ ಬಾಧೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ನಾವು ಇಲ್ಲಿ ಹಲ್ಲಿನ ಸಂವೇದನಾಶೀಲತೆ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ದಿನಕ್ಕೆ ಎರಡು ಬಾರಿ ಹಲ್ಲುಜ್ಜಬೇಕು ಎಂದು ಎಲ್ಲಾ ವೈದ್ಯರು ಸಲಹೆ ನೀಡುತ್ತಾರೆ. ಆದರೆ ದೇಶದಲ್ಲಿ ಸುಮಾರು ಶೇಕಡ 80ರಷ್ಟು ಜನರು ದಿನಕ್ಕೆ ಒಂದು ಬಾರಿ ಮಾತ್ರ ಹಲ್ಲುಜ್ಜುತ್ತಾರೆ. ಆದರೆ ಎಷ್ಟೋ ಮಂದಿ 60 ವರ್ಷ ಆದಮೇಲೆ ಕೂಡ ದಿನಕ್ಕೆ ಒಂದು ಬಾರಿ ಹಲ್ಲುಜ್ಜಿದ್ದರೂ ಕೂಡ ಬಹಳ ಗಟ್ಟಿಯಾದ ಹಲ್ಲನ್ನು ಹೊಂದಿದ್ದಾರೆ. ಹಲ್ಲುಜ್ಜುವುದರಲ್ಲೂ ಒಂದು ಸರಿಯಾದ ಕ್ರಮವಿದೆ. ಸರಿಯಾದ ಕ್ರಮದಲ್ಲಿ ಹಲ್ಲುಜ್ಜಿದರೆ ಮಾತ್ರ ಹಲ್ಲು ಸರಿಯಾಗಿರುತ್ತದೆ. ಅಂದರೆ ಹಲ್ಲುಗಳು ಹುಳುಕಾಗುವುದು ಇಲ್ಲ.
ಬೆಳಿಗ್ಗೆ ಯಾವುದಾದರೂ ಪೇಸ್ಟ್ ಅನ್ನು ಬಳಸಿ ಬ್ರಷ್ ನಿಂದ ಸರಿಯಾದ ಕ್ರಮದಲ್ಲಿ ಹಲ್ಲನ್ನು ಹಲ್ಲುಜ್ಜಬೇಕು. ಅದೇ ರೀತಿ ರಾತ್ರಿಯಲ್ಲಿ ಆಯುರ್ವೇದಿಕ್ ಇದರ ಒಂದು ಕ್ರಮವನ್ನು ಅನುಸರಿಸಬೇಕು. ಇದಕ್ಕೆ ಮೂರು ವಿಧಾನಗಳಿವೆ. ಮೊದಲು ಕಾಲು ಲೋಟ ನೀರಿಗೆ ಒಂದು ಚಮಚ ಉಪ್ಪನ್ನು ಹಾಕಿ ನೀರನ್ನು ಬಾಯಿಗೆ ಹಾಕಿ ಮುಕ್ಕಳಿಸಬೇಕು. ನಂತರದಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಹತ್ತು ಲವಂಗವನ್ನು ಹಾಕಿ ಅದನ್ನು ಚೆನ್ನಾಗಿ ಕುಟ್ಟಿಕೊಳ್ಳಬೇಕು.
ನಂತರ ಎಣ್ಣೆಯನ್ನು ಒಂದು ಲೋಟಕ್ಕೆ ಹಾಕಿ ಚೆನ್ನಾಗಿ ಸೋಸಿಕೊಳ್ಳಬೇಕು. ಸೋಸಿಕೊಂಡ ಎಣ್ಣೆಯನ್ನು ಒಂದು ಚಮಚ ತೆಗೆದುಕೊಂಡು ಒಂದು ಲೋಟಕ್ಕೆ ಹಾಕಿ ಅದಕ್ಕೆ ಲೋಟ ನೀರು ಹಾಕಿ ಬಾಯಿ ಮುಕ್ಕಳಿಸಬೇಕು. ಇದರಿಂದ ಎಲ್ಲ ರೀತಿಯಲ್ಲಿ ಹಲ್ಲಿನ ತೊಂದರೆಗಳು ಮಾಯವಾಗುತ್ತದೆ. ಕೆಲವರಿಗೆ ಹಲ್ಲಿನಲ್ಲಿ ಸಂವೇದನಾಶೀಲತೆ ಇರುತ್ತದೆ. ಅದು ಸಹ ಕಡಿಮೆಯಾಗುತ್ತದೆ. ಹಾಗೆಯೇ ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾಗಳು ಸತ್ತು ಹೋಗುತ್ತದೆ. ಹಾಗೆಯೇ ಹಲ್ಲುಗಳು ಆರೋಗ್ಯವಾಗಿದ್ದು ಬಿಳಿಯಾಗಿರುತ್ತದೆ.