ಚಲನಚಿತ್ರ ಜನರ ಮನೋರಂಜನೆಯ ಒಂದು ಭಾಗವಾಗಿದೆ. ಚಲನಚಿತ್ರವು ನಿರ್ದೇಶಕನ ಒಂದು ಕಲ್ಪನೆಯ ಆಧಾರದ ಮೇಲೆ ನಿರ್ಮಾಣವಾಗುತ್ತದೆ. ಇಲ್ಲದ ವಿಚಾರಗಳನ್ನು ನಡೆಯದ ಘಟನೆಗಳನ್ನು ಚಲನಚಿತ್ರಗಳ ಮೂಲಕ ಪ್ರದರ್ಶನ ಮಾಡಿ ಜನರನ್ನು ರಂಜಿಸುವ ಕೆಲಸ ಮಾಡುತ್ತದೆ. ಕೆಲವೊಂದು ಚಲನಚಿತ್ರಗಳಲ್ಲಿ ನಡೆದ ಘಟನೆಯ ಆಧಾರದ ಮೇಲೆಯೂ ನಿರ್ಮಾಣಗಳು ನಡೆಯುತ್ತವೆ. ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಹಾಸ್ಯ, ದುಃಖ, ನೋವು-ನಲಿವು, ಎಲ್ಲವನ್ನು ಒಳಗೊಂಡಿರುವಂತೆ ನಿರ್ಮಾಣ ಮಾಡುತ್ತಾರೆ. ಇದನ್ನು ಜನರು ಬರೀ ಮನೋರಂಜನೆಗಾಗಿ ಮಾತ್ರ ಸ್ವೀಕರಿಸುವುದು ಉತ್ತಮ. ಆದ್ದರಿಂದ ನಾವು ಇಲ್ಲಿ ಒಂದು ಇಂಗ್ಲೀಷ್ ಸಿನೆಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಇಂಗ್ಲಿಷ್ ಚಿತ್ರಗಳಲ್ಲಿ ಹೆಚ್ಚಾಗಿ ಅವರ ಕಲ್ಪನೆಯ ಆಧಾರಿತ ಚಿತ್ರಗಳನ್ನು ನಿರ್ಮಾಣ ಮಾಡುತ್ತಾರೆ. ಇದರಲ್ಲಿ ನಡೆದ ಘಟನೆಗಳ ಆಧಾರಗಳು ಕಡಿಮೆಯಾಗಿರುತ್ತವೆ. ನಿರ್ಮಾಪಕನ ಕಲ್ಪನೆಯ ಮೇರೆಗೆ ಚಲನಚಿತ್ರಗಳು ನಿರ್ಮಾಣವಾಗುತ್ತದೆ. ಹೀಗೊಂದು ಚಿತ್ರ ಒಂದು ಕಾಡು ಜನಾಂಗದ ವಿಚಾರವನ್ನು ಒಳಗೊಂಡಿದೆ. ಆ ಚಿತ್ರ 2006ರಲ್ಲಿ ತೆರೆಕಂಡ ಅಪೋಕ್ಯಾಲಿಪ್ಟೋ ಎಂಬ ಕಾಡು ಜನಾಂಗದ ಕಥೆಯನ್ನಾಧರಿಸಿದ ಚಿತ್ರವಾಗಿದೆ. ಈ ಚಿತ್ರ ಉಹಾದಿಕ್ ಮಾಯೋ ಎಂಬ ಎಂಬ ಭಾಷೆಯಲ್ಲಿ ನಿರ್ಮಾಣ ಮಾಡಿರುತ್ತಾರೆ. ಅಂತರ ಈ ಸಿನೆಮಾ ಹಲವಾರು ಭಾಷೆಗಳಲ್ಲಿ ತೆರೆಕಂಡಿದೆ.
ಈ ಸಿನಿಮಾದ ಕಥೆ ಏನೆಂದರೆ ಒಂದು ಕಾಡು ಸಮೂಹದ ಜೀವನದಲ್ಲಿ ನಡೆಯುವಂತಹ ಒಂದು ಪರಿಕಲ್ಪನಾ ಘಟನೆಯನ್ನು ಹೊಂದಿದೆ. ಕಥೆಯ ಪ್ರಾರಂಭದಲ್ಲಿ ಹಂದಿಯನ್ನು ಬೇಟೆಯಾಡುವ ಕಾಡು ಮನುಷ್ಯರು ಅದರ ಒಂದೊಂದು ಭಾಗವನ್ನು ಹಂಚಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಬೇಟೆಯಾಡಿದ ಗಂಡು ಹಂದಿಯ ಶೀಷ್ಣವನ್ನು ಆ ಸಿನಿಮಾದ ಕಾಮಿಡಿಯನ್ ಗೆ ನಿಡಿ ಇದನ್ನು ತಿಂದರೆ ನಿನಗೆ ಮಕ್ಕಳಾಗುತ್ತಾರೆ ಎಂಬ ಒಂದು ಹಾಸ್ಯ ಸನ್ನಿವೇಶವನ್ನು ತೆಗೆದುಕೊಂಡಿದ್ದಾರೆ. ನಂತರ ಈ ಸಿನಿಮಾದ ನಾಯಕ ತನ್ನ ಹೆಂಡತಿ ಮಗುವಿನ ಜೊತೆಗೆ ಮಲಗಿರುವಾಗ ಕನಸು ಬಿದ್ದು ಎಚ್ಚರಗೊಳ್ಳುತ್ತಾನೆ.
ಆ ಸಂದರ್ಭದಲ್ಲಿ ಇನ್ನೊಂದು ಕಾಡು ಜನಾಂಗದ ಸಮೂಹ ಅವರನ್ನು ಸುತ್ತುವರೆದು ಆಕ್ರಮಿಸಿ ಅವರನ್ನು ಬಂಧಿಸಿ ಅವರನ್ನು ತಮ್ಮ ಪ್ರದೇಶಕ್ಕೆ ಕೊಂಡೊಯ್ಯುತ್ತಾರೆ. ಆ ಸಮೂಹ ಸ್ವಲ್ಪ ತಿಳುವಳಿಕೆ ಹೊಂದಿದ ಮತ್ತು ತಮ್ಮ ಕೆಲಸಕ್ಕೆ ಜೀತದಾಳಾಗಿ ಇನ್ನೊಂದು ಕಾಡು ಜನಾಂಗದ ಸಮೂಹವನ್ನು ಬಳಸುತ್ತಾರೆ. ಈ ಮಧ್ಯೆ ಈ ಸಿನಿಮಾದ ನಾಯಕ ತನ್ನ ಹೆಂಡತಿ ಮತ್ತು ಮಗುವನ್ನು ಒಂದು ಬಾವಿಯೊಳಗೆ ತಿಳಿಸಿ ಅವರನ್ನು ರಕ್ಷಿಸುತ್ತಾನೆ. ನಾಯಕ ಅವರ ಬಂಧನದಿಂದ ತಪ್ಪಿಸಿಕೊಂಡು ತನ್ನ ಹೆಂಡತಿ ಮತ್ತು ಮಗುವಿನ ಬಳಿಗೆ ಬರಲು ಅನೇಕ ಸಾಹಸಗಳನ್ನು ಮಾಡುತ್ತಾನೆ.
ಸಿನಿಮಾದ ನಾಯಕನನ್ನು ಇನ್ನೊಂದು ಪಂಗಡದ ನಾಯಕ ಹಾಗೂ ಅವನ ಸಹಚರರು ಅವನನ್ನು ಹಿಡಿಯಲು ಹಿಂಬಾಲಿಸುತ್ತಾರೆ. ಈ ಸಂದರ್ಭದಲ್ಲಿ ಸಿನಿಮಾದ ನಾಯಕ ಅವರೆಲ್ಲರನ್ನೂ ಕುಂದುತ್ತಾ ಬರುತ್ತಾನೆ. ಕೊನೆಯಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದ ಇನ್ನೊಂದು ತಂಡದ ನಾಯಕನನ್ನು ಕೊಲ್ಲುತ್ತಾನೆ. ಇದೇ ಸಂದರ್ಭದಲ್ಲಿ ಮಳೆ ಬಂದು ನಾಯಕನ ಹೆಂಡತಿ ಮತ್ತು ಮಗುವಿರುವ ಬಾವಿಯಲ್ಲಿ ನೀರು ತುಂಬಿ ಕೊಳ್ಳುತ್ತಾ ಹೋಗುತ್ತದೆ.ಇದೆ ಸಂದರ್ಭದಲ್ಲಿ ನಾಯಕನ ಹೆಂಡತಿ ತುಂಬು ಗರ್ಭಿಣಿಯಾಗಿದ್ದು ಬಾವಿಯಲ್ಲೇ ಮತ್ತೊಂದು ಮಗುವಿಗೆ ಜನ್ಮ ನೀಡಿ ಇಬ್ಬರು ಮಕ್ಕಳನ್ನು ನೀರಿನ ಮೇಲೆ ಹಿಡಿದು ತನ್ನನ್ನು ಕಾಪಾಡಲು ಬಂದ ನಾಯಕನನ್ನು ನೋಡಿ ಭಾವುಕರಾಗುತ್ತಾರೆ. ಹೀಗೆ ಈ ಸಿನಿಮಾ ಅಂತ್ಯಗೊಳ್ಳುತ್ತದೆ.