ಪೊಗರು ಚಿತ್ರದ ಹೆಸರು ಕೇಳಿದರೆ ಪ್ರತಿಯೊಬ್ಬ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತಹ ಚಿತ್ರವಾಗಿದೆ. ಅಂತಹ ಅದ್ಭುತವಾದ ತಾರಾಗಣವನ್ನು ಜೊತೆಗೆ ಅದ್ಭುತವಾದ ನಿರ್ದೇಶನವನ್ನು ಈ ಚಿತ್ರ ಹೊಂದಿದೆ. ನಂದಕಿಶೋರ್ ನಿರ್ಮಾಣದ ಈ ಚಿತ್ರಕ್ಕೆ ಬಿ.ಕೆ. ಗಂಗಾಧರ ಅವರು ಹಣ ಹೂಡಿಕೆಯನ್ನು ಮಾಡಿದ್ದಾರೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ದ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದಾರೆ. ಪೊಗರು ಚಿತ್ರ ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು ಪ್ರೇಕ್ಷಕರ  ಮನರಂಜಿಸುವಲ್ಲಿ ಯಶಸ್ಸನ್ನು ಕಂಡಿದೆ. ಇದರಲ್ಲಿ ಅನೇಕ ವಿದೇಶಿ ನಟರು ಸಹ ಅಭಿನಯಿಸಿದ್ದಾರೆ. ಆದ್ದರಿಂದ ನಾವು ಇಲ್ಲಿ ಒಂದು ವ್ಯಕ್ತಿಯ ಬಾಡಿ ನೋಡಿ ಅನುಶ್ರೀ ಅವರ ಪ್ರತಿಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಪೊಗರು ಚಿತ್ರದಲ್ಲಿ ಚಿಕ್ಕಣ್ಣ, ರವಿಶಂಕರ್, ಪವಿತ್ರ ಲೋಕೇಶ್, ರಾಘವೇಂದ್ರ ರಾಜಕುಮಾರ್, ಸಂಪತ್ ರಾಜ್, ಧನಂಜಯ್, ಮುಂತಾದ ಮೇರು ನಟರುಗಳು ಅಭಿನಯಿಸಿದ್ದಾರೆ. ಹಾಗೆಯೇ ವಿದೇಶಿ ನಟರುಗಳಾದ ಕೈಗ್ರೀನಿ, ಮಾರ್ಗನ್ ಅಷ್ಟಿ ಜಾನ್ ಲುಕಾಸ್ ಮತ್ತು ಧರ್ಮ ಅವರುಗಳು ನಟಿಸಿದ್ದಾರೆ. ಈ ಚಿತ್ರಕ್ಕೆ ಚಂದನ್ ಶೆಟ್ಟಿ ಅವರು ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಕರಾಬು ಎನ್ನುವ ಸಂಗೀತಕ್ಕೆ ಅತಿ ಹೆಚ್ಚು ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಟಗರು ಚಿತ್ರ ಏಕಕಾಲದಲ್ಲಿಯೇ ಕನ್ನಡ ಮತ್ತು ತೆಲುಗು ಎರಡರಲ್ಲಿಯೂ ತೆರೆಕಾಣಲಿದೆ. ಈ ಚಿತ್ರದ ನಾಯಕನಟರಾಗಿ ದೃವಸರ್ಜಾ ಅವರು ಅದ್ಭುತವಾಗಿ ನಟಿಸಿದ್ದಾರೆ.

ಧ್ರುವ ಸರ್ಜಾ ರವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನಟ. ಅವರು ನಟ ಚಿರಂಜೀವಿ ಸರ್ಜಾರವರ ಸಹೋದರ ಹಾಗೂ ನಟ ಮತ್ತು ನಿರ್ದೇಶಕ ಅರ್ಜುನ್ ಸರ್ಜಾರವರ ಸೋದರಳಿಯ. ಧ್ರುವ ಸರ್ಜಾರವರು ೧೯೮೮ ರ ಅಕ್ಟೋಬರ್ ೬ ರಂದು ಬೆಂಗಳೂರಿನಲ್ಲಿ ಜನಿಸಿದರು. ಧ್ರುವರವರ ಸಹೋದರ ಚಿರಂಜೀವಿ ಸರ್ಜಾರವರು ಕೂಡ ಕನ್ನಡ ಚಲನಚಿತ್ರದ ನಟರಾಗಿದ್ದಾರೆ. ಅವರ ಚಿಕ್ಕಪ್ಪ ಅರ್ಜುನ್ ಸರ್ಜಾರವರು ದಕ್ಷಿಣ ಭಾರತೀಯ ನಟ ಮತ್ತು ಅವರ ಅಜ್ಜ ಶಕ್ತಿ ಪ್ರಸಾದ್ ಸಹ ಕನ್ನಡ ಚಿತ್ರಗಳಲ್ಲಿ ಒಬ್ಬ ನಟರಾಗಿದ್ದಾರೆ.

ಪೊಗರು ಚಿತ್ರದ ಆಡಿಯೋ ಲಾಂಚ್ ಫೆಬ್ರುವರಿ 14ರಂದು ದಾವಣಗೆರೆಯಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಅನುಶ್ರೀ ಅವರು ಈ ಕಾರ್ಯಕ್ರಮದ  ನಿರ್ವಹಣೆಯ ಪಾತ್ರವನ್ನು ವಹಿಸಿದ್ದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ವಿದೇಶಿ ನಟರೊಬ್ಬರ ಆದ ಜಾನ್ ಲೂಕಸ್ ಅವರನ್ನು ವೇದಿಕೆಗೆ ಕರೆಯುತ್ತಾರೆ. ಆ ಸಂದರ್ಭದಲ್ಲಿ ಜಾನ್ ಲೂಕಸ್ ಅವರ ಬಾಡಿಯನ್ನು ನೋಡಿ ಅದರ ಬಗ್ಗೆ ವಿಚಾರಿಸುತ್ತಾರೆ. ಅದಕ್ಕೆ ಜಾನ್ ಲೂಕಸ್ ಅವರು ತಾಳ್ಮೆ ಮತ್ತು ಶ್ರಮ ಇದ್ದರೆ ಪ್ರತಿಯೊಬ್ಬರು ನನ್ನಂತಹ ಬಾಡಿಯನ್ನು ಮಾಡಬಹುದು ಎಂದು ಹೇಳುತ್ತಾರೆ. ಜೊತೆಗೆ ಬಾಡಿಯನ್ನು ಪ್ರದರ್ಶನ ಮಾಡುತ್ತಾರೆ. ಅನುಶ್ರೀ ಅವರು ಒಮ್ಮೆ ದಿಗ್ಬ್ರಾಂತರಾಗುತ್ತಾರೆ. ಜಾನ್ ಲೂಕಸ್ ಅವರು ಅಂತಹ ಒಂದು ಬಾಡಿಯನ್ನು ಪಡೆದಿರುತ್ತಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!