ಖ್ಯಾತ ನಟ ಸರವಣನ್ ಶಿವಕುಮಾರ್ ಅಂದರೆ ಖಂಡಿತವಾಗಿಯೂ ಯಾರಿಗೂ ಗೊತ್ತಿಲ್ಲ. ಆದ್ರೆ ತಮಿಳು ನಟ ಸೂರ್ಯ ಅಂದರೆ ಕೇವಲ ಕಾಲಿವುಡ್ ಮಾತ್ರವಲ್ಲ, ದಕ್ಷಿಣ ಭಾರತೀಯ ಚಿತ್ರರಂಗದವರಿಗೆ ಈ ಹೆಸರು ಚಿರಪರಿಚಿತ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟ ಸೂರ್ಯ. ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ಸೂರ್ಯ, ಸಿನಿಮಾ ಹೊರತಾಗಿ ಸರಳತೆ ಮತ್ತು ಸೌಮ್ಯ ಸ್ವಭಾವದ ಮೂಲಕ, ಚಿತ್ರಪ್ರಿಯರ ಹೃದಯಗೆದ್ದಿದ್ದಾರೆ. ತಮಿಳಿನ ಖ್ಯಾತ ನಟ ಶಿವಕುಮರ್ ಪುತ್ರ ಸೂರ್ಯ. 1997ರಿಂದ ಬಣ್ಣದ ಲೋಕದ ಪಯಣ ಪ್ರಾರಂಭಿಸಿರುವ ಸೂರ್ಯ ಇಂದು ಸ್ಟಾರ್ ನಟನಾಗಿ ಖ್ಯಾತಿಗಳಿಸಿದ್ದಾರೆ.

ಕಾಲಿವುಡ್ ನಲ್ಲಿ ಸ್ಟಾರ್ ನಟನಾಗಿ ಬೆಳೆದುನಿಂತಿರುವ ಸೂರ್ಯ ಮೊದಲು ಬಣ್ಣ ಹಚ್ಚಿದ್ದು, 22ನೇ ವಯಸ್ಸಿನಲ್ಲಿ. ನೆರಕ್ಕು ನೆರ್ ಸಿನಿಮಾ ಮೂಲಕ 1997ರಲ್ಲಿ ಸಿನಿಮಾರಂಗದ ಪಯಣ ಪ್ರಾರಂಭಿಸುತ್ತಾರೆ. ಮಣಿ ರತ್ನಂ ನಿರ್ಮಾಣದ ಸಿನಿಮಾ. ಮಣಿರತ್ನಂ, ಸರವಣನ್ ಶಿವಕುಮಾರ್ ಗೆ ಸೂರ್ಯ ಎಂದು ಹೆಸರಿಡುತ್ತಾರೆ. ಕೊನೆಗೆ ಸೂರ್ಯ ಹೆಸರಿನ ಮೂಲಕವೇ ದೊಡ್ಡ ಮಟ್ಟಕ್ಕೆ ಖ್ಯಾತಿಗೊಳಿಸುತ್ತಾರೆ. ಇನ್ನು ಆಂಧ್ರ ಮತ್ತು ಹೈದ್ರಾಬಾದ್ ಗಳಲ್ಲಿ ಸೂರ್ಯ ಅವರಿಗೆ ಬಹಳಷ್ಟು ಅಭಿಮಾನಿಗಳಿದ್ದು ಅದು ಬಿಡುಗಡೆಯಾದ ಸೂರ್ಯ ಅವರ ಸಿಂಗಂ ಹಾಗೂ 7 th ಸೆನ್ಸ್ ಚಿತ್ರಗಳ ತೆಲುಗು ಬಾಕ್ಸ್ ಆಫೀಸ್ ಗಳಿಕೆ ಮೂಲಕ ಸಾಬೀತಾಗಿದೆ.

ಸೂರ್ಯ ಸದ್ಯ ಸೂರರೈ ಪೊಟ್ರು ಸಿನಿಮಾದ ಸಕ್ಸಸ್ ನಲ್ಲಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗಿದ್ದಲ್ಲದೆ, ಆಸ್ಕರ್ ಅಂಗಳಕ್ಕೂ ಕಾಲಿಟ್ಟಿದೆ ಎನ್ನುವುದೇ ವಿಶೇಷ. ಈ ಸಂತಸದಲ್ಲಿರುವ ಸೂರ್ಯ 40ನೇ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಸೂರ್ಯ ಮುಂದಿನ ಸಿನಿಮಾಗೆ ಯಾರು ನಿರ್ದಶನ ಮಾಡುತ್ತಾರೆ? ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಈ ಕುತೂಹಲಕ್ಕೀಗ ತೆರೆ ಬಿದ್ದಿದೆ. ನಟ ಸೂರ್ಯ ಮುಂದಿನ ಸಿನಿಮಾಗೆ ಪಾಂಡಿರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆದರೆ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಚಿತ್ರದಲ್ಲಿ ನಟ ಸೂರ್ಯಗೆ ನಾಯಕಿಯಾಗಿ ಯುವ ನಟಿ ಪ್ರಿಯಾಂಕಾ ಮೋಹನ್ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಈಗಾಗಲೇ ತೆಲುಗಿನಲ್ಲಿ ಸಿನಿಮಾ ಮಾಡಿದ್ದಾರೆ. ತಮಿಳಿನಲ್ಲಿ ಸದ್ಯ ಶಿವಕಾರ್ತಿಕೇಯನ್ ಜೊತೆ ನಟಿಸಿರುವ ಡಾಕ್ಟರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸೂರ್ಯ 40ನೇ ಸಿನಿಮಾಗೂ ಮೊದಲು ಸೂರ್ಯ ಅರುವಾ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಚಿತ್ರಕ್ಕೆ ನಿರ್ದೇಶಕ ಹರಿ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಸದ್ಯದಲ್ಲೇ ಸಿನಿಮಾದ ಕೂಡ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಇದಲ್ಲದೆ ಸೂರ್ಯ ಬಳಿ ಇನ್ನೂ ಒಂದು ಸಿನಿಮಾಗಳಿವೆ.

ಬರೀ ಸಿನಿಮಾದಲ್ಲಿ ನಟನೆ ಮಾಡುವುದು ಮಾತ್ರ ಅಲ್ಲದೆ ಅತ್ಯಂತ ಸಾಮಾಜಿಕ ಕಾರ್ಯಗಳಲ್ಲಿ ಕೂಡಾ ತನ್ನನ್ನು ತೊಡಗಿಸಿಕೊಂಡ ಸೂರ್ಯ ಅವರು ಕೊರೋನ ಸಮಯದಲ್ಲಿ ಸಾಕಷ್ಟು ಹಣದ ಸಹಾಯ ಮಾಡಿದ್ದಾರೆ ಹಾಗೂ ಸುಮಾರು ಎಪ್ಪತ್ತು ಕೋಟಿ ಅಷ್ಟು ಬೆಲೆ ಬಾಳುವ ತನ್ನ ಸ್ವಂತ ಮನೆಯನ್ನು ಸಹ ಅಂಧ ಮಕ್ಕಳಿಗೆ ಎಂದು ಬಿಟ್ಟುಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ತನ್ನ ಮನೇ ಕೆಲಸದವರ ಮದುವೆಯಲ್ಲಿ ಸಹ ಕೆಲಸದವರ ಮದುವೆ ಎಂದು ತಿಳಿಯದೆ ತಮ್ಮ ಮನೆಯ ಮದುವೆ ಎಂದೇ ತಿಳಿದು ತಿರುಗಾಡಿಕೊಂಡು ಎಲ್ಲರ ಜೊತೆ ಬೆರೆತು ತಮ್ಮ ಸರಳತೆ ಮೆರೆದಿದ್ದಾರೆ. ಇದೀಗ ಸೂರ್ಯ ತನ್ನ ಮುಂದಿನ ಸಿನಿಮಾಗಾಗಿ ವರ್ಕೌಟ್ ಆರಂಭ ಮಾಡಿದ್ದು ಈ ವಿಡಿಯೋದಲ್ಲಿ ನೋಡಬಹುದು.

By

Leave a Reply

Your email address will not be published. Required fields are marked *