ಬಿಸಿನೆಸ್ ಮಾಡುವುದು ಸುಲಭವಲ್ಲ, ಕಡಿಮೆ ಬಂಡವಾಳದಲ್ಲಿ ಕೆಲವು ಬಿಸಿನೆಸ್ ಪ್ರಾರಂಭಿಸಬಹುದು. ಅವುಗಳಲ್ಲಿ ಪ್ರಮುಖ ಬಿಸಿನೆಸ್ ಎಂದರೆ ಟಿ ಮತ್ತು ಕಾಫಿ ಬಿಸಿನೆಸ್. ಬೆಳಗ್ಗೆ ಮತ್ತು ಸಂಜೆ ಟಿ ಅಥವಾ ಕಾಫಿ ಕುಡಿಯುವವರು ಇದ್ದೆ ಇರುತ್ತಾರೆ. ಹಾಗಾದರೆ ಟಿ ಮತ್ತು ಕಾಫಿ ಬಿಸಿನೆಸ್ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಟಿ ಮತ್ತು ಕಾಫಿ ಬಿಸಿನೆಸ್ ಪ್ರಾರಂಭಿಸಿದರೆ ಯಾವಾಗಲೂ ಲಾಸ್ ಆಗುವುದಿಲ್ಲ, ಇದನ್ನು ಎವ್ವರ್ ಗ್ರೀನ್ ಬಿಸಿನೆಸ್ ಎಂದರೆ ತಪ್ಪಾಗುವುದಿಲ್ಲ. ಪ್ರತಿಯೊಬ್ಬರೂ ಬೆಳಗ್ಗೆ ಎದ್ದಾಗಿನಿಂದ ಸಂಜೆಯೊಳಗೆ ಟಿ ಅಥವಾ ಕಾಫಿಯನ್ನು ಕುಡಿಯುತ್ತಾರೆ. ಈ ಬಿಸಿನೆಸ್ ನಲ್ಲಿ ಮುಖ್ಯವಾಗಿ ಬೇಕಾಗಿರುವುದು ಟೇಸ್ಟ. ಟಿ ಮತ್ತು ಕಾಫಿ ವಿಭಿನ್ನವಾದ ಟೇಸ್ಟ್ ಇದ್ದರೆ ಜನರು ಎಲ್ಲಿಂದ ಬೇಕಾದರೂ ಬರುತ್ತಾರೆ. ಟೇಸ್ಟಿ ಟಿ ಅಥವಾ ಕಾಫಿ ಮಾಡಲು ಟಿ ಮಾಸ್ಟರ್ ಇಲ್ಲದೆ ಮಷೀನ್ ಮೂಲಕ ತಯಾರಿಸಬಹುದು. ಈ ಮಷೀನ್ ಮೂಲಕ ಯಾರು ಬೇಕಾದರೂ ಟೇಸ್ಟಿ ಕಾಫಿ,ಟಿ ತಯಾರಿಸಬಹುದು. ಒಂದು ಲೀಟರ್ ಕೆಪ್ಯಾಸಿಟಿ ಇರುವ ಮಷೀನ್ 12,000 ರೂಪಾಯಿಗೆ ಸಿಗುತ್ತದೆ. ಎರಡು ಲೀಟರ್ ಕೆಪ್ಯಾಸಿಟಿ ಇರುವ ಮಷೀನ್ 16,500 ರೂಪಾಯಿಗೆ ಸಿಗುತ್ತದೆ. ಬಂಡವಾಳ ಹೆಚ್ಚಿದ್ದರೆ ಹೆಚ್ಚು ಕೆಪ್ಯಾಸಿಟಿ ಇರುವ ಮಷೀನ್ ಅನ್ನು ಖರೀದಿಸಬಹುದು. ಮೊದಲು ಮಷೀನಿನ ಒಳಗೆ ನೀರನ್ನು ತುಂಬಬೇಕು ನಂತರ ಕ್ಯಾಪ್ ಮುಚ್ಚಬೇಕು. ನಂತರ ಪವರ್ ಬಟ್ಟನ್ ಇರುತ್ತದೆ ಅದನ್ನು ಆನ್ ಮಾಡಬೇಕು ಇದರಿಂದ ನೀರು ಬಿಸಿಯಾಗಲು ಪ್ರಾರಂಭವಾಗುತ್ತದೆ ಬಿಸಿಯಾದ ನಂತರ ಹೀಟರ್ ಲೈಟ್ ಆಫ್ ಆಗುತ್ತದೆ ಆಗ ಪವರ್ ಬಟ್ಟನ್ ಅನ್ನು ಆಫ್ ಮಾಡಬೇಕು.
ಪಕ್ಕದಲ್ಲಿರುವ ಸ್ಟೋರೇಜ್ ಕ್ಯಾಪ್ ತೆಗೆದು ಟಿ ಅಥವಾ ಕಾಫಿ ಪೌಡರ್ ಮತ್ತು ಶುಗರ್ ಹಾಕಬೇಕು ಇದರಲ್ಲಿ ಎರಡು ಲೇಯರ್ ಇರುತ್ತದೆ ಒಂದರಲ್ಲಿ ಹಾಲು ಇರುತ್ತದೆ ನಂತರ ಮುಚ್ಚಳ ಮುಚ್ಚಬೇಕು ನಂತರ ಮೇಲೆ ನೀರನ್ನು ಹಾಕಿ ಕ್ಯಾಪ್ ಕ್ಲೋಸ್ ಮಾಡಿದ ನಂತರ ಪುನಃ ಪವರ್ ಬಟನ್ ಅನ್ನು ಆನ್ ಮಾಡಬೇಕು ಟಿ ಮತ್ತು ಕಾಫಿ ರೆಡಿಯಾಗುತ್ತದೆ, ರೆಡಿ ಆದ ನಂತರ ಹೀಟರ್ ಲೈಟ್ ಆಫ್ ಆಗುತ್ತದೆ ಆಗ ಪವರ್ ಬಟನ್ ಅನ್ನು ಆಫ್ ಮಾಡಬೇಕು. ಸೆಕೆಂಡ್ ಲೇಯರ್ ನಲ್ಲಿರುವ ಹಾಲನ್ನು ಸೆಟ್ ಮಾಡಿದ ನಂತರ ಟಿ ಅಥವಾ ಕಾಫಿ ಬರುತ್ತದೆ. ಒಂದೇ ಮಷೀನ್ ನಲ್ಲಿ ಅದೇ ಸಮಯದಲ್ಲಿ ಎರಡು ಸ್ಟೋರೇಜ್ ನಲ್ಲಿ ಟಿ ಮತ್ತು ಕಾಫಿ ತಯಾರಿಸಿಕೊಳ್ಳಬಹುದು. ಬ್ರೆಡ್, ಟೋಸ್ಟ್ ಜೊತೆಗೆ ಟಿ ಅಥವಾ ಕಾಫಿಯನ್ನು ಕೊಡುವುದರಿಂದ ಹೆಚ್ಚು ಲಾಭ ಗಳಿಸಬಹುದು. ಈ ಬಿಸನೆಸ್ ಗೆ ಹೆಚ್ಚು ಬಂಡವಾಳ ಅವಶ್ಯಕತೆ ಇಲ್ಲ, ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಗಳಿಸಬಹುದು. ಈ ಬಿಸಿನೆಸ್ ಮಾಡಲು ಯಾವುದೇ ಶಿಕ್ಷಣ ಪಡೆದಿರಬೇಕು ಎಂಬುದಿಲ್ಲ, ಸಾಮಾನ್ಯ ಜ್ಞಾನವಿದ್ದರೆ ಸಾಕು. ಈ ಬಿಸಿನೆಸ್ ಅನ್ನು ಬೇರೆ ಊರಿಗೆ ಹೋಗಿ ಮಾಡಬೇಕೆಂದಿಲ್ಲ ಅವರವರ ಊರಿನಲ್ಲಿ ಮಾಡಬಹುದು ಏಕೆಂದರೆ ಎಲ್ಲರೂ ಟೀ ಅಥವಾ ಕಾಫಿಯನ್ನು ಕುಡಿಯುತ್ತಾರೆ ಇದರಿಂದ ಬಿಸಿನೆಸ್ ಖಂಡಿತವಾಗಿಯೂ ನಡೆಯುತ್ತದೆ. ಈ ಮಾಹಿತಿಯನ್ನು ತಪ್ಪದೇ ನಿರುದ್ಯೋಗಿಗಳಿಗೆ ತಿಳಿಸಿ.