ತರಕಾರಿಗಳಲ್ಲಿ ಈರುಳ್ಳಿ ಕೂಡ ಒಂದು. ದಿನ ನಿತ್ಯದ ಅಡುಗೆಯಲ್ಲಿ ಈರುಳ್ಳಿಗೆ ಮಹತ್ತರವಾದ ಸ್ಥಾನವಿದೆ. ಈರುಳ್ಳಿಯಿಲ್ಲದ ಅಡುಗೆಗೆ ರುಚಿಯಿಲ್ಲ ಎಂದರೂ ತಪ್ಪಿಲ್ಲ. ಇದನ್ನು ಬರೀ ರುಚಿಗೆ ಬಳಸುವುದಿಲ್ಲ. ಇದರಲ್ಲಿ ಅನೇಕ ಔಷಧೀಯ ಗುಣಗಳು ಮನುಷ್ಯನ ದೇಹಕ್ಕೆ ಸಿಗುತ್ತವೆ. ಹಾಗೆಯೇ ಹೋಟೆಲ್ಗಳಲ್ಲಿ ಈರುಳ್ಳಿ ಇಲ್ಲದೆ ಯಾವ ಅಡುಗೆಯೂ ರುಚಿಸುವುದಿಲ್ಲ. ಆದ್ದರಿಂದ ನಾವು ಇಲ್ಲಿ ಈರುಳ್ಳಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ನಮ್ಮ ದೇಹದಲ್ಲಿ ಎಲ್ಲಾದರೂ ಗಡ್ಡೆಗಳು ಮೂಡುವ ಸಂಭವವಿದ್ದರೆ ಅವುಗಳ ವಿರುದ್ಧ ಹೋರಾಡಲು ಈರುಳ್ಳಿ ಸಹಕರಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಇದರಲ್ಲಿರುವ ಹಲವು ಪೋಷಕಾಂಶಗಳು ಮತ್ತು ದೇಹದ ಗ್ರಂಥಿಗಳನ್ನು ಪ್ರಚೋದಿಸಿ ಹಾರ್ಮೋನುಗಳನ್ನು ಬಿಡುಗಡೆಗೊಳಿಸುವ ಮೂಲಕ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿತ್ಯದ ಸೇವನೆಯಿಂದ ನರವ್ಯವಸ್ಥೆಯಲ್ಲಿ ಮತ್ತು ರಕ್ತಪರಿಚಲನಾ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

ಶೀತ, ಕೆಮ್ಮು , ನೆಗಡಿಗೆ, ಈರುಳ್ಳಿ ರಸ, ಜೇನು ತುಪ್ಪದೊಂದಿಗೆ ಸೇವಿಸಿದರೆ ಉತ್ತಮ ಪರಿಣಾಮವನ್ನು ಬೀರುವುದು. ತಲೆನೋವು ಇದ್ದಾಗ ಇದನ್ನು ಜಜ್ಜಿ ಮೂಗಿನ ಹತ್ತಿರ ಹಿಡಿದು ಇದರ ವಾಸನೆಯನ್ನು ತೆಗೆದುಕೊಂಡರೆ ಶೀತ ತಲೆನೋವು ಗುಣವಾಗುತ್ತದೆ. ಎದೆಯಲ್ಲಿ ಹೊಟ್ಟೆಯಲ್ಲಿ ಕಫ ಹೆಚ್ಚಾದಾಗ ಈರುಳ್ಳಿ ಜೊತೆ ಬೆಲ್ಲವನ್ನು ಸೇರಿಸಿ ತಿನ್ನಬಹುದು. ಇಲ್ಲವೆ ಈರುಳ್ಳಿ ಜೊತೆ ತುಳಸಿ, ಶುಂಠಿಯನ್ನು ಸೇರಿಸಿ ಜಜ್ಜಿ ರಸ ತೆಗೆದುಕುಡಿಯುವುದರಿಂದ ಕಫ ಹಾಗೂ ಹೊಟ್ಟೆಯ ಸಮಸ್ಯೆಗೆ ಉತ್ತಮ ಪರಿಹಾರವಾಗುವುದು.

ನಿಯಮಿತವಾಗಿ ಈರುಳ್ಳಿ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು  ನಿಯಂತ್ರಣಗೊಳಿಸಿ ಆರೋಗ್ಯವನ್ನು ಕಾಪಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗೂ ಹಸಿ ಈರುಳ್ಳಿಯನ್ನು ಸೇವಿಸಿದರೆ ಉತ್ತಮ . ಕ್ಯಾಲ್ಸಿಯಂ ಖನಿಜಾಂಶ, ಕಬ್ಬಿಣಾಂಶ ಈರುಳ್ಳಿಯಲ್ಲಿ ಹೇರಳವಾಗಿದೆ. ಆದರೆ ಸಾಧುಗಳು ಈರುಳ್ಳಿಯನ್ನು ಸೇವಿಸುವುದಿಲ್ಲ. ಏಕೆಂದರೆ ಈರುಳ್ಳಿಯು ಕಾಮ ಶಕ್ತಿಯನ್ನು ಉತ್ಪಾದಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಸಾಧುಗಳು ಇದನ್ನು ಸೇವನೆ ಮಾಡದೇ ಇದ್ದರೆ ಬಹಳ ಒಳ್ಳೆಯದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!