ಸ್ಯಾಂಡಲ್‌ವುಡ್‌ನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್‌ ಪುತ್ರ ಮನೋರಂಜನ್ ಈಗಾಗಲೇ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಮೊದಲ ಸಿನಿಮಾ ಸಾಹೇಬ ಚಿತ್ರದ ಮೂಲಕ ಗಮನಸೆಳೆದ ಅವರು ಆನಂತರ ಬೃಹಸ್ಪತಿ ಚಿತ್ರದಲ್ಲಿ ಅಭಿನಯ ಮಾಡಿದರು. ಇದೀಗ ಅವರ ಕೈಯಲ್ಲಿ 2 ಸಿನಿಮಾಗಳಿವೆ. ಒಂದು ಶೂಟಿಂಗ್ ಮುಕ್ತಾಯಗೊಂಡಿದ್ದರೆ, ಮತ್ತೊಂದಕ್ಕೆ ಕೊನೇ ಹಂತದ ಶೂಟಿಂಗ್ ಬಾಕಿ ಇದೆ. ಈ ಮಧ್ಯೆ 2021ರಲ್ಲೇ ಮದುವೆ ಆಗಲು ಅವರು ಸಜ್ಜಾಗಿದ್ಧಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು 2019 ರಲ್ಲಿ ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು. ಇದೀಗ ಅವರ ಪುತ್ರ ಮನೋರಂಜನ್ ಅವರ ಮದುವೆಯ ಬಗ್ಗೆ ಗಾಂಧಿ ನಗರದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ನಿಜಕ್ಕೂ ಮನೋರಂಜನ್ ಮದುವೆ ಪಿಕ್ಸ್ ಆಯ್ತಾ ಹುಡುಗಿ ಯಾರು? ಇದರೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಈ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಮನಿರಂಜನ್ ನಾನು 2021ರಲ್ಲೇ ಮದುವೆ ಆಗಲಿದ್ದೇನೆ. ಅಪ್ಪ-ಅಮ್ಮ ತೋರಿಸಿದ ಹುಡುಗಿಯನ್ನೇ ಮದುವೆ ಆಗಲಿದ್ದೇನೆ. ನನ್ನದು ಸಂಪೂರ್ಣ ಅರೇಂಜ್ ಮ್ಯಾರೇಜ್ ಆಗಿರಲಿದೆ. ನನಗೂ ಈಗ 32 ವರ್ಷ ತುಂಬಿದೆ. ಮನೆಯಲ್ಲಿ ಹುಡುಗಿ ಹುಡುಕುವ ಪ್ರಕ್ರಿಯೆ ಆರಂಭಗೊಂಡಿದೆ ಎನ್ನುತ್ತಾರೆ. ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರು ಸಾಹೇಬ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದರು. ಇನ್ನು ಸಿನಿಮಾ ವಿಷಯಕ್ಕೆ ಬರುವುದಾದರೆ, ಮನು ನಟಿಸಿರುವ ಪ್ರಾರಂಭ ಸಿನಿಮಾ ತೆರೆಗೆ ಸಿದ್ಧವಾಗಿದೆ. ಕಳೆದ ಮಾರ್ಚ್ 27ರಂದೇ ಈ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಲಾಕ್‌ಡೌನ್‌ ನಿಂದಾಗಿ ಅದು ಸಾಧ್ಯವಾಗಲಿಲ್ಲ. ಇದೀಗ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ತೆರೆಗೆ ತರಲು ಸಿದ್ಧತೆ ನಡೆಸಲಾಗಿದೆ. ಪ್ರಾರಂಭ ಸಿನಿಮಾದ ಟ್ರೇಲರ್ ನೋಡಿದ ಬಹುತೇಕರು ಇದು ಅರ್ಜುನ್‌ ರೆಡ್ಡಿ ರಿಮೇಕ್‌ ಎಂದೆಲ್ಲ ಕಾಮೆಂಟ್ ಮಾಡಿದ್ದರು. ಆದರೆ, ಇದಕ್ಕೂ ಅದಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಸಂಪೂರ್ಣ ಬೇರೆಯದೇ ಕಥೆ ಇರುವ ಸಿನಿಮಾ. ಪ್ರೀತಿ ಬಗ್ಗೆ ಒಂದು ಅದ್ಭುತ ಸಂದೇಶ ಇಲ್ಲಿದೆ ಎನ್ನುತ್ತಾರೆ ಮನೋರಂಜನ್.

ಈಗ ಪ್ರಾರಂಭ ಹಾಗೂ ಮುಗಿಲ್ ಪೇಟೆ ಸಿನಿಮಾದ‌ ಮೂಲಕ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಇದಕ್ಕೂ ಹೊಸ ವಿಷಯ ಏನೆಂದರೆ ದುನಿಯಾ ಸೂರಿ, ಬ್ಯಾಡ್ ಮ್ಯಾನರ್ಸ್ ಸಿನಿಮಾದ ನಂತರ ಕನಸುಗಾರನ ಪುತ್ರ ಮನೋರಂಜನ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಸೂರಿ ಸಿನಿಮಾದಲ್ಲಿ ಮನೋರಂಜನ್ ನಟಿಸಲಿರುವ ಬಗ್ಗೆ ಸ್ವತಃ ಮನೋರಂಜನ್ ಅವರೇ ಹೇಳಿಕೊಂಡಿದ್ದು ಈ ವರ್ಷದ ಮಧ್ಯ ಭಾಗದಲ್ಲಿ ಸೂರಿ, ಮನೋರಂಜನ್ ಚಿತ್ರ ಶುರುವಾಗುವ ಸಾಧ್ಯತೆ ಇದೆ. ಮನು ನಟಿಸುತ್ತಿರುವ ಮತ್ತೊಂದು ಸಿನಿಮಾ ಮುಗಿಲ್‌ಪೇಟೆ ಈ ಸಿನಿಮಾ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಅದಕ್ಕೆ ಪ್ರಮುಖ ಕಾರಣ, ಅವರ ಆಪ್ತ ಸ್ನೇಹಿತರೇ ಇದಕ್ಕೆ ನಿರ್ಮಾಪಕರು ಎಂಬುದು. ಇನ್ನೊಂದು ಚಿತ್ರದ ಕಥೆ. ಹಾಗೆಯೇ, ಮನು ಸಹೋದರ ವಿಕ್ರಮ್‌ ರವಿಚಂದ್ರನ್ ಕೂಡ ಈ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

ಒಂದೊಳ್ಳೆಯ ಪ್ರಾಡಕ್ಟ್ ಹೊರಬರಲಿ ಎಂದು ಶ್ರಮ ಹಾಕುತ್ತಿದ್ದಾರಂತೆ. ಆ ಸಿನಿಮಾಗೆ ಶೇಕಡಾ60 ಭಾಗ ಚಿತ್ರೀಕರಣ ಮುಗಿದಿದೆ. ಫೆಬ್ರವರಿ 3ರಿಂದ ಮತ್ತೆ ಶೂಟಿಂಗ್ ಆರಂಭವಾಗಲಿದೆ. ಲಾಕ್‌ಡೌನ್‌ನಲ್ಲಿ ಸ್ಕ್ರಿಪ್ಟ್‌ನಲ್ಲಿ ಇನ್ನಷ್ಟು ತಿದ್ದುಪಡಿ ಮಾಡಿಕೊಂಡಿದ್ದೇವೆ. ಮಾಸ್ ಮತ್ತು ಸೆಂಟಿಮೆಂಟ್ ಅಂಶಗಳನ್ನು ಸೇರಿಸಿಕೊಂಡಿದ್ದೇವೆ ಎನ್ನುತ್ತಾರೆ ಮನೋರಂಜನ್. 2021 ರಲ್ಲಿ ಖಂಡಿತ ಮದುವೆಯಾಗುತ್ತೇನೆ. ಮನೆಯಲ್ಲಿ ಸಿದ್ಧತೆಗಳು ನಡೆಯುತ್ತಿದೆ. ಆದರೆ ಹುಡುಗಿ ಮಾತ್ರ ತಂದೆ ತಾಯಿ ಒಪ್ಪಿದವರೇ ಆಗಿರುತ್ತಾರೆ ಎಂದು ಹೇಳಿದ್ದಾರೆ. ಈ ಮೂಲಕ ಲೌವ್ ಮ್ಯಾರೇಜ್ ಎನ್ನುವ ಊಹ ಪೋಹಕ್ಕೆ ತೆರೆ ಎಳೆದಿದ್ದಾರೆ‌. ಇನ್ನೂ ನಿರಂಜನ್ ಅವರ ನಟನೆ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಿಳಿಸಿ.

Leave a Reply

Your email address will not be published. Required fields are marked *