ಸಾಮಾನ್ಯವಾಗಿ ರೈತರು ಪ್ರಾಣಿ ಸಾಕಾಣಿಕೆಯನ್ನು ಮಾಡುತ್ತಾರೆ. ಹಸು, ಆಡು, ಕುರಿಗಳನ್ನು ಸಾಕಿರುತ್ತಾರೆ. ಪ್ರಾಣಿಗಳಿಗೆ ಒಣಮೇವನ್ನು ಸಾಮಾನ್ಯವಾಗಿ ಕೊಡಲಾಗುತ್ತದೆ ಆದರೆ ಒಣಮೇವು ಪೌಷ್ಟೀಕರಣ ಮಾಡಿ ಸೇವಿಸುವುದರಿಂದ ಮೇವು ವೇಸ್ಟ್ ಆಗದೆ ಪ್ರಾಣಿಗಳ ಆರೋಗ್ಯವನ್ನು ಹೆಚ್ಚಿಸುತ್ತದೆ ಹಾಗಾದರೆ ಒಣಮೇವು ಪೌಷ್ಟೀಕರಣ ಮಾಡುವ ವಿಧಾನವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ದನಗಳಿಗೆ, ಕುರಿ, ಆಡುಗಳಿಗೆ ಒಣಮೇವನ್ನು ಕೊಡಲಾಗುತ್ತದೆ. ಒಣ ಮೇವಿನಲ್ಲಿ ಅರ್ಧದಷ್ಟು ಹಾಳಾಗಿ ಹೋಗುತ್ತದೆ ಇದನ್ನು ತಪ್ಪಿಸಲು ಒಣ ಮೇವನ್ನು ಪೌಷ್ಟೀಕರಣ ಮಾಡಿ ದನಗಳಿಗೆ, ಕುರಿಗಳಿಗೆ ಕೊಡುವುದರಿಂದ ಮೇವು ಹಾಳಾಗುವುದಿಲ್ಲ, ಮೇವಿನ ಸೇವನೆ ಹೆಚ್ಚಾಗುತ್ತದೆ, ಹಾಲಿನ ಇಳುವರಿ ಹೆಚ್ಚುತ್ತದೆ ಅಲ್ಲದೇ ಇದರಿಂದ ಹಸುಗಳ ಗರ್ಭಕೋಶದ ಸಮಸ್ಯೆ ನಿವಾರಣೆಯಾಗುತ್ತದೆ. ಸುಲಭವಾಗಿ ಸಿಗುವ ಪದಾರ್ಥಗಳನ್ನು ಬಳಸಿ ಒಣಮೇವು ಪೌಷ್ಟೀಕರಣ ಮಾಡಬಹುದು. ಮೊದಲು ಒಣಮೇವನ್ನು ಮೇವು ಕಟ್ ಮಾಡುವ ಯಂತ್ರದಿಂದ ಸಣ್ಣಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು. ಬೇಕಾಗುವ ಸಾಮಗ್ರಿಗಳು. 100 ಕೆಜಿ ಒಣ ಮೇವಿಗೆ 6-8 ಕೆ.ಜಿ ಬೆಲ್ಲ, 1-2 ಕೆ.ಜಿ ಉಪ್ಪು ಮತ್ತು ಒಂದು ಕೆ.ಜಿ ಖನಿಜ ಮಿಶ್ರಣ ಬೇಕಾಗುತ್ತದೆ. ಇವುಗಳೊಂದಿಗೆ ಯೂರಿಯಾವನ್ನು ಬಳಸಲೂ ಬಹುದು ಬಳಸದೇ ಇರಲೂಬಹುದು. ಯೂರಿಯಾ ಬಳಸುವುದರಿಂದ ಹಸುವಿನಲ್ಲಿ ಪ್ರೊಟೀನ್ ಅಂಶ ಹೆಚ್ಚಾಗುತ್ತದೆ.
ಮೊದಲು ಬೆಲ್ಲವನ್ನು 10ರಿಂದ 12 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಬೇಕು ಅದಕ್ಕೆ ಉಪ್ಪನ್ನು ಸೇರಿಸಬೇಕು ನಂತರ ಅದಕ್ಕೆ ಮಾರ್ಕೆಟಿನಲ್ಲಿ ಸಿಗುವ ಖನಿಜ ಮಿಶ್ರಣವನ್ನು ಸೇರಿಸಬೇಕು ನಂತರ ಇದನ್ನು ಒಣಮೇವಿನ ಮೇಲೆ ಹಾಕಿ ಮಿಶ್ರಣ ಮಾಡಬೇಕು ಇದರಿಂದ ಒಣಮೇವು ಪೌಷ್ಟೀಕರಣ ಆಗುತ್ತದೆ. ಪೌಷ್ಟೀಕರಣಗೊಂಡ ಒಣಮೇವನ್ನು ಪ್ರತಿದಿನ 8-10 ಕೆ.ಜಿ ಹಸುವಿಗೆ ಕೊಡಬೇಕು ಹಾಗೂ ಕುರಿ, ಆಡುಗಳಿಗೆ 2-3 ಕೆ.ಜಿ ಕೊಡಬೇಕು. ಪೌಷ್ಟೀಕರಣಗೊಂಡ ಒಣಮೇವನ್ನು ಸೇವಿಸುವುದರಿಂದ ಹಸುಗಳು ಆರೋಗ್ಯವಾಗಿರುತ್ತವೆ ಮತ್ತು ಅಧಿಕ ಹಾಲನ್ನು ಕೊಡುತ್ತವೆ ಹಾಗೂ ಕುರಿ, ಆಡುಗಳು ಉತ್ತಮ ಬೆಳವಣಿಗೆ ಹೊಂದುತ್ತವೆ. ಪ್ರತಿದಿನ ಕೇವಲ ಒಣಮೇವನ್ನು ಹಸುಗಳಿಗೆ ಹಾಕುವುದರಿಂದ ಯಾವುದೇ ಪ್ರಯೋಜನವಾಗದೇ ಹಾಳಾಗುತ್ತದೆ ಈ ರೀತಿ ಪೌಷ್ಟೀಕರಣ ಮಾಡಿದ ಒಣಮೇವನ್ನು ಹಾಕುವುದರಿಂದ ಲಾಭ ಗಳಿಸಬಹುದು.