ದೇಹದ ಮುಖ್ಯವಾದ ಅಂಗಗಳಲ್ಲಿ ಲಿವರ್ ಕೂಡ ಒಂದು. ಇದು ಸರಿಯಾಗಿ ಕೆಲಸ ಮಾಡಿದರೆ ಮಾತ್ರ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ಇಲ್ಲವಾದಲ್ಲಿ ಆರೋಗ್ಯ ತೊಂದರೆಗಳು ಉಂಟಾಗುತ್ತವೆ. ಆದ್ದರಿಂದ ಇದನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಜೀವನದಲ್ಲಿ ಪ್ರತಿಯೊಂದು ಅಂಗವೂ ಪ್ರತಿಯೊಂದು ಭಾಗಗಳು ಆರೋಗ್ಯವಾಗಿದ್ದು ಕೆಲಸವನ್ನು ನಿರ್ವಹಿಸುವುದು ಅವಶ್ಯಕ ಆಗಿದೆ. ಆದ್ದರಿಂದ ನಾವು ಇಲ್ಲಿ ಲಿವರ್ ಶುದ್ಧ ಮಾಡಲು ಮನೆಮದ್ದಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಲಿವರ್ ಇದು ಮನುಷ್ಯನ ದೇಹದ ಬಹುಮುಖ್ಯವಾದ ಅಂಗವಾಗಿದೆ. ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿ ಇಡಲು ಇದು ಸಹಾಯಮಾಡುತ್ತದೆ. ಇದು ನಮ್ಮ ದೇಹದಲ್ಲಿ ಆಗುವ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕುವ ಕೆಲಸವನ್ನು ಮಾಡುತ್ತದೆ. ಆದ್ದರಿಂದ ದೇಹದಲ್ಲಿ ವಿಷಕಾರಿ ಅಂಶಗಳು ಇರುವುದಿಲ್ಲ. ಇದಕ್ಕಾಗಿ ಲಿವರನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಒಳ್ಳೆಯದು. ಇವರನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು ಎಂದರೆ ಕೆಲವು ಆಹಾರಗಳನ್ನು ಸೇವನೆ ಮಾಡಬಾರದು.

ಹಾಗೆಯೇ ಕೆಲವು ಆಹಾರಗಳನ್ನು ಸೇವನೆ ಮಾಡಬೇಕು. ಪ್ರತಿನಿತ್ಯ ಸೇಬು ಹಣ್ಣನ್ನು ತಿನ್ನಬೇಕು. ಹಾಗೆಯೇ ಕ್ಯಾರೆಟನ್ನು ಸೇವನೆ ಮಾಡುವುದು ಒಳ್ಳೆಯದು. ಹಾಗೆಯೇ ಬೆಳ್ಳುಳ್ಳಿಯನ್ನು ಆಹಾರ ಪದಾರ್ಥಗಳಲ್ಲಿ ಬಳಸುವುದು ಉತ್ತಮ. ಇದರ ಜೊತೆಗೆ ಎಲ್ಲಾ ರೀತಿಯ ಸೊಪ್ಪುಗಳನ್ನು ಸೇವನೆ ಮಾಡಬೇಕು. ಇವುಗಳನ್ನು ಸೇವನೆ ಮಾಡುವುದರಿಂದ ಲಿವರ್ ಗೆ ಸಂಬಂಧಿಸಿದ ಎಲ್ಲ ರೋಗಗಳು ದೂರವಾಗುತ್ತವೆ. ಇದರಿಂದ ಲಿವರ್ ಕೂಡ ಗಟ್ಟಿಯಾಗುತ್ತದೆ. ಹಾಗೆಯೇ ಹೂಕೋಸು ಮತ್ತು ಎಲೆಕೋಸುಗಳನ್ನು ಸೇವನೆ ಮಾಡಬೇಕು.

ಇದರಲ್ಲಿ ಗಂಧಕದ ಪ್ರಮಾಣ ಬಹಳ ಇರುತ್ತದೆ. ಆದ್ದರಿಂದ ಇದು ಲಿವರ್ಗೆ ಬಹಳ ಒಳ್ಳೆಯದು. ಹಾಗೆಯೇ ಅರಿಶಿನ ಸೇವನೆ ಮಾಡುವುದರಿಂದ ಲಿವರ್ ನಲ್ಲಿರುವ ಸೋಂಕುಗಳನ್ನು ದೂರವಾಗಿಸಿಕೊಳ್ಳಬಹುದು. ದೇಹದಲ್ಲಿರುವ ಕೆಟ್ಟ ವಿಷಗಳನ್ನು ಹೊರಹಾಕಲು ಜೋಳ ಹಾಗೂ ರಾಗಿಯ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಹಾಗೆಯೇ ನಿಯಮಿತವಾಗಿ ನಿಂಬೆಹಣ್ಣಿನ ಬಳಕೆ ಇದ್ದರೆ ಒಳ್ಳೆಯದು. ಹಾಗೆಯೆ ಡ್ರೈಫ್ರೂಟ್ಸ್ ಗಳನ್ನು ಸೇವನೆ ಮಾಡಬೇಕು. ಅದರಲ್ಲೂ ವಾಲ್ನಟ್ ಅತಿಹೆಚ್ಚಿನ ಅಂಶಗಳನ್ನು ಹೊಂದಿದ್ದು ಲಿವರ್ಗೆ ಆರೋಗ್ಯವನ್ನು ನೀಡುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!