ಗ್ರಾಮ ಪಂಚಾಯತ್ ಹಲವು ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಊರಿನ ಅಭಿವೃದ್ದಿ ಮಾಡುತ್ತದೆ. ಗ್ರಾಮ ಪಂಚಾಯತ್ ಕೈಗೊಳ್ಳುವ ಯೋಜನೆಗಳು ಯಾವುದು ಹಾಗೂ ಗ್ರಾಮ ಪಂಚಾಯತದ ಯೋಜನೆಗಳ ದಾಖಲೆಗಳನ್ನು ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಗ್ರಾಮಪಂಚಾಯಿತಿಯಲ್ಲಿ ನಡೆಯುವ ಪ್ರತಿಯೊಂದು ಕೆಲಸದ ದಾಖಲೆಗಳ ನಕಲು ಪ್ರತಿಯನ್ನು ಪಡೆಯಲು ಆರ್ ಟಿಐನಲ್ಲಿ ಅರ್ಜಿ ಸಲ್ಲಿಸಬಹುದು. ಗ್ರಾಮ ಪಂಚಾಯತಿಯ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದ ದಾಖಲೆ ಪ್ರತಿ, ಆಶ್ರಯ ಯೋಜನೆಗೆ ಸಂಬಂಧಿಸಿದ ಮಾಹಿತಿ, ಉಚಿತ ಶೌಚಾಲಯ ಯೋಜನೆಯ ಮಾಹಿತಿ, ಕುಡಿಯುವ ನೀರು ಸೌಲಭ್ಯದ ಬಗ್ಗೆ, ಚರಂಡಿ ಮತ್ತು ರಸ್ತೆ ನಿರ್ಮಾಣ ಯೋಜನೆಗಳಿಗೆ ಸರ್ಕಾರದಿಂದ ಎಷ್ಟು ಅನುದಾನ ಬಂದಿದೆ ಎಷ್ಟು ಖರ್ಚಾಗಿದೆ ಎಲ್ಲಾ ಮಾಹಿತಿಯನ್ನು ಆರ್ಟಿಐ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ನಕಲು ಪ್ರತಿಯನ್ನು ಪಡೆಯಬಹುದು. ಮೊಬೈಲ್ ಅಥವಾ ಲ್ಯಾಪ್ ಟಾಪಿನಲ್ಲಿ ಬ್ರೌಸರ್ ಓಪನ್ ಮಾಡಿಕೊಂಡು www.rtionline.karnataka.Gove.in ಈ ವೆಬ್ಸೈಟ್ ಓಪನ್ ಮಾಡಿ ಇಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿ ಪಡೆಯಲು ವಿನಂತಿ ಸಲ್ಲಿಸಬಹುದು ನಂತರ ವಿನಂತಿ ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿ. ನಂತರದ ಪೇಜಿನಲ್ಲಿ ಆನ್ಲೈನ್ ಮಾಹಿತಿ ಪಡೆಯಲು ಯಾವ ಯಾವ ಮಾರ್ಗದರ್ಶಿಯನ್ನು ಅನುಸರಿಸಬೇಕು ಎಂದು ಕೊಟ್ಟಿದ್ದಾರೆ ಅದನ್ನು ಕಂಪ್ಲೀಟ್ ಆಗಿ ಓದಿ ಹಾಗೂ ಇದರಲ್ಲಿ ಯಾವ ಯಾವ ಇಲಾಖೆ ಬಗ್ಗೆ ಮಾಹಿತಿ ಪಡೆಯಬಹುದು ಇಲಾಖೆಗಳ ಲಿಸ್ಟ್ ಅನ್ನು ನೋಡಬಹುದು.
ನಂತರ ಟಿಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಸಲ್ಲಿಸಲು ಕ್ಲಿಕ್ ಮಾಡಿದರೆ ಒಂದು ಫಾರ್ಮ್ ಓಪನ್ ಆಗುತ್ತದೆ ಅಲ್ಲಿ ಇಮೇಲ್ ಐಡಿ, ಮೊಬೈಲ್ ನಂಬರ್ ಅನ್ನು ಹಾಕಬೇಕು ನಂತರ ಕ್ಯಾಪ್ಚರ್ ಕೋಡ್ ಟೈಪ್ ಮಾಡಬೇಕು. ಸಲ್ಲಿಸಲು ಎಂಬುದರ ಮೇಲೆ ಕ್ಲಿಕ್ ಮಾಡಿ ಆಗ ಮತ್ತೆ 1 ಫಾರ್ಮ್ ಓಪನ್ ಆಗುತ್ತದೆ ಅಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಬೇಕು ಮೊದಲು ಸಾರ್ವಜನಿಕ ಪ್ರಾಧಿಕಾರ ಆಯ್ಕೆಮಾಡಿ ನಾವು ಯಾವ ಜಿಲ್ಲೆಗೆ ಸೇರಿದ್ದೇವೆ ಆ ಜಿಲ್ಲೆ ಅದರ ಮುಂದೆ ಗ್ರಾಮ ಪಂಚಾಯತ್ ಇಲಾಖೆ ಇರುತ್ತದೆ ಅದನ್ನು ನೋಡಿ ಸೆಲೆಕ್ಟ್ ಮಾಡಬೇಕು. ಅರ್ಜಿದಾರರ ವೈಯಕ್ತಿಕ ಮಾಹಿತಿ ಹೆಸರು, ಲಿಂಗ, ವಿಳಾಸ, ಪಿನ್ ಕೋಡ್, ರಾಜ್ಯ, ಜಿಲ್ಲೆ, ತಾಲೂಕನ್ನು ಸೆಲೆಕ್ಟ್ ಮಾಡಬೇಕು. ಅರ್ಜಿದಾರರು ಗ್ರಾಮೀಣ ಭಾಗದವರಾಗಿದ್ದರೆ ಗ್ರಾಮೀಣ ಎಂಬುದನ್ನು ಸೆಲೆಕ್ಟ್ ಮಾಡಬೇಕು ನಂತರ ನಗರ ಭಾಗದವರಾಗಿದ್ದರೆ ನಗರ ಎಂದು ಸೆಲೆಕ್ಟ್ ಮಾಡಬೇಕು.
ಅರ್ಜಿದಾರನ ಶಿಕ್ಷಣ, ಮೊಬೈಲ್ ನಂಬರ್, ಇಮೇಲ್ ಐಡಿ ಹಾಕಿದ ನಂತರ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರು ಹೌದು ಇಂದು ಸೆಲೆಕ್ಟ್ ಮಾಡಬೇಕು, ಹೌದು ಎಂದಾದರೆ ಬಿಪಿಎಲ್ ಕಾರ್ಡ್ ನಂಬರ್ ಹಾಕಬೇಕು ನಂತರ ಸಂಚಿಕೆಯಾದ ವರ್ಷ, ಆಹಾರ ನಾಗರಿಕ ಸರಬರಾಜು ಎಂದು ಟೈಪ್ ಮಾಡಿಕೊಳ್ಳಬೇಕು. ಬಿಪಿಎಲ್ ರೇಷನ್ ಕಾರ್ಡ್ ಇಲ್ಲದಿದ್ದರೆ ಇಲ್ಲ ಎಂದು ಸೆಲೆಕ್ಟ್ ಮಾಡಬೇಕು ನಂತರ ಆರ್ ಟಿಐ ವಿನಂತಿಗಾಗಿ ಮೂರು ಸಾವಿರ ಪದಗಳ ಪಠ್ಯವನ್ನು ನಮೂದಿಸಬೇಕು. ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮ 2005 ನಿಯಮ 6(1) ಮತ್ತು 7(1) ರ ಪ್ರಕಾರ ಮಾಹಿತಿ ಪಡೆಯಲು ಅರ್ಜಿ ಇದು ಎಂಬ ವಿಷಯವಾಗಿರಬೇಕು. ಅರ್ಜಿದಾರನ ಹೆಸರು, ಅರ್ಜಿದಾರರ ಅಡ್ರೆಸ್ ಬರೆಯಬೇಕು. ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪಿಡಿಓ ಎಂದು ಟೈಪ್ ಮಾಡಿ ತಾಲೂಕು, ಜಿಲ್ಲೆ, ಹೆಸರನ್ನು ಬರೆಯಬೇಕು ನಂತರ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಇರುವ ದಾಖಲೆಗಳ ನಕಲು ಪ್ರತಿಯನ್ನು ಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಬರೆದನಂತರ ಬೇಕಾದ ಮಾಹಿತಿ ಯಾವ ವರ್ಷಕ್ಕೆ ಸಂಬಂಧಪಟ್ಟಿದೆ ಎಂದು ಬರೆಯಬೇಕು ಇದು ಬಹಳ ಮುಖ್ಯವಾಗುತ್ತದೆ ಹಾಗೂ ನಿಮಗೆ ಯಾವ ಮಾಹಿತಿ ಬೇಕು ಅದರ ಬಗ್ಗೆ ಸಾಕ್ಷಿ ತೋರಿಸಬೇಕಾಗುತ್ತದೆ ಅದು ಪಿಡಿಎಫ್ ರೂಪದಲ್ಲಿರಬೇಕು. ನಂತರ ಕ್ಯಾಪ್ಚರ್ ಕೋಡ್ ಹಾಕಿ ಸಲ್ಲಿಸಲು ಮೇಲೆ ಕ್ಲಿಕ್ ಮಾಡಬೇಕು. ನಂತರ ಆರ್ಟಿಐ ಶುಲ್ಕ ರೂ10 ಆನ್ಲೈನ್ ಮೂಲಕ ಪೇ ಮಾಡಬಹುದು ಶುಲ್ಕ ಪಾವತಿಸಿದ ನಂತರ ನೋಂದಣಿ ಸಂಖ್ಯೆ ಕ್ರಿಯೇಟ್ ಆಗುತ್ತದೆ ಅದನ್ನು ಪ್ರಿಂಟ್ ತೆಗೆದುಕೊಳ್ಳಬಹುದು ಹೀಗೆ ಮಾಹಿತಿ ಹಕ್ಕು ಅಧಿನಿಯಮದಲ್ಲಿ ಅರ್ಜಿ ಸಲ್ಲಿಸಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ಬದಲಾದ ಆನ್ಲೈನ್ ಜೀವನಕ್ಕೆ ಹೊಂದಿಕೊಳ್ಳಿ.