ration card information in mobile phone ರೇಷನ್ ಕಾರ್ಡ್ ಇದ್ದರೆ ಒಳ್ಳೆಯದು. ಏಕೆಂದರೆ ಇದರಿಂದ ಹಲವಾರು ಸೌಲಭ್ಯಗಳನ್ನು ಪಡೆಯಬಹುದು. ಸರ್ಕಾರವು ಜನರ ಆದಾಯ ಮತ್ತು ಜಮೀನಿನ ಆಧಾರದ ಮೇಲೆ ರೇಷನ್ ಕಾರ್ಡ್ ನ್ನು ನೀಡುತ್ತದೆ. ಆದರೆ ಇದು ಎಲ್ಲರಿಗೂ ಪ್ರಯೋಜನ ನೀಡುತ್ತಿಲ್ಲ. ಏಕೆಂದರೆ ಕೆಲವರು ಇದನ್ನು ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ನಾವು ಇಲ್ಲಿ ರೇಷನ್ ಕಾರ್ಡ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ರೇಷನ್ ಕಾರ್ಡ್ ಇದರಲ್ಲಿ ಎರಡು ವಿಧವಿದೆ. ಮೊದಲನೆಯದು ಏ.ಪಿ.ಎಲ್. ಅಂದರೆ ಎಬೋವ್ ಪವರ್ಟಿ ಲೈನ್ . ಇದನ್ನು ಜಮೀನು ಚೆನ್ನಾಗಿ ಇದ್ದವರಿಗೆ ನೀಡಲಾಗುತ್ತದೆ. ಹಾಗೆಯೇ ಎರಡನೆಯದಾಗಿ ಬಿ.ಪಿ.ಎಲ್. ಕಾರ್ಡ್. ಅಂದರೆ ಬಿಲೋ ಪವರ್ಟಿ ಲೈನ್. ಇದನ್ನು ಕಡುಬಡವರಿಗೆ ನೀಡಲಾಗುತ್ತದೆ. ಯಾವುದೇ ರೀತಿಯ ಜಮೀನು ಮತ್ತು ಕಡಿಮೆ ಆದಾಯ ಇದ್ದವರಿಗೆ ಇದನ್ನು ನೀಡಲಾಗುತ್ತದೆ . ರೇಷನ್ ಕಾರ್ಡ್ ನ ಬಗ್ಗೆ ತಿಳಿಯಲು ಒಂದು ವೆಬ್ ಸೈಟ್ ಇದೆ.
ahar.kar.nic ಈ ವೆಬ್ಸೈಟ್ ಅನ್ನು ಓಪನ್ ಮಾಡಬೇಕು. ಕರ್ನಾಟಕದ ಆಹಾರ ನಿಗಮದ ವೆಬ್ ಸೈಟ್ ಆಗಿದೆ. ಈ ವೆಬ್ಸೈಟ್ ಓಪನ್ ಆದಮೇಲೆ ಇ-ಸೇವೆಗಳು ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಹಳ್ಳಿ ಪಟ್ಟಿ ಎಂಬ ಒಪ್ಶನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕು. ನಂತರ ತಾಲೂಕು ಮತ್ತು ಹಳ್ಳಿಯನ್ನು ಸೆಲೆಕ್ಟ್ ಮಾಡಬೇಕು. ನಂತರ ಗೋ ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು.
ಇದರಿಂದ ಊರಿನಲ್ಲಿ ಎಷ್ಟು ರೇಷನ್ ಕಾರ್ಡ್ ಗಳು ಇವೆ ಎಂದು ತಿಳಿಯುತ್ತದೆ. ಹಾಗೆಯೇ ಪ್ರತಿಯೊಬ್ಬರ ಹೆಸರುಗಳು ತಿಳಿಯುತ್ತವೆ. ಇಲ್ಲಿ ರೇಷನ್ ಕಾರ್ಡ್ ನಂಬರ್ ಕಾಣುತ್ತದೆ. ಇದರ ಮುಂದೆ ಹೆಸರು ಇರುತ್ತದೆ. ಹಾಗೆಯೇ ಇದರ ಮುಂದೆ ಅಡ್ರೆಸ್ ಇರುತ್ತದೆ. ಅದರ ಮುಂದೆ ಎಷ್ಟು ಜನ ಇದ್ದಾರೆ ಅನ್ನುವುದು ತಿಳಿಯುತ್ತದೆ. ಇಂತಹ ಎಲ್ಲಾ ಮಾಹಿತಿಗಳನ್ನು ಪಡೆಯಬಹುದು. ಅದರಲ್ಲಿ ಬಿ.ಪಿ.ಎಲ್ ಕಾರ್ಡ್ ಇದ್ದರೆ ಬಹಳ ಒಳ್ಳೆಯದು.