ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಎನ್ನುವುದು ಎಲ್ಲರಿಗೂ ಕಾಡುವ ಸಮಸ್ಯೆ ಆಗಿದೆ. ಇದನ್ನು ನಿರ್ಲಕ್ಷ್ಯ ಮಾಡಿದರೆ ಇನ್ನೂ ದೊಡ್ಡ ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ನಮ್ಮ ಆಹಾರಪದ್ಧತಿಯನ್ನು ಬೆಳೆಸಿಕೊಂಡು ಇದನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಆದ್ದರಿಂದ ನಾವು ಇಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಗ್ಯಾಸ್ಟ್ರಿಕ್ ಸಮಸ್ಯೆ ಪರಿಹಾರ ಬೇಕು ಎಂದಾದರೆ ಇಂಗ್ಲಿಷ್ ಮಾತ್ರೆಗಳಿಗೆ ಮೊರೆ ಹೋಗಬಾರದು. ಮನೆಯಲ್ಲಿ ಅನೇಕ ವಸ್ತುಗಳನ್ನು ಬಳಸಿ ಮದ್ದುಗಳನ್ನು ತಯಾರಿಸಿಕೊಳ್ಳಬಹುದು. ಮೊದಲು ಒಂದು ಚಮಚ ಜೀರಿಗೆಯನ್ನು ತೆಗೆದುಕೊಳ್ಳಬೇಕು. ನಂತರ ಅದಕ್ಕೆ ಅರ್ಧ ಚಮಚ ಸೋಂಪನ್ನು ತೆಗೆದುಕೊಳ್ಳಬೇಕು. ಹಾಗೆಯೇ ಅದಕ್ಕೆ ಅರ್ಧ ಪಲಾವ್ ಎಲೆಯನ್ನು ತೆಗೆದುಕೊಳ್ಳಬೇಕು. ಕೊನೆಯದಾಗಿ ಅದಕ್ಕೆ ನಾಲ್ಕು ಕಾಳುಮೆಣಸನ್ನು ತೆಗೆದುಕೊಳ್ಳಬೇಕು.
ಇವೆಲ್ಲವುಗಳನ್ನು ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಸ್ವಲ್ಪ ತಣ್ಣಗಾದ ನಂತರ ಅದನ್ನು ಕುಟ್ಟಾಣಿಯಲ್ಲಿ ಕುಟ್ಟಿಕೊಳ್ಳಬೇಕು. ಆದಷ್ಟು ಪುಡಿ ಆಗುವಷ್ಟು ಕುಟ್ಟಿಕೊಂಡರೆ ಬಹಳ ಒಳ್ಳೆಯದು. ನಂತರ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಕುದಿಸಬೇಕು. ಅದಕ್ಕೆ ಚೆನ್ನಾಗಿ ಕುಟ್ಟಿಕೊಂಡು ಪುಡಿಯನ್ನು ಹಾಕಬೇಕು. ಅದು ಚೆನ್ನಾಗಿ ಕುದಿಯಬೇಕು. ಐದರಿಂದ ಆರು ನಿಮಿಷಗಳ ಕಾಲ ಇದನ್ನು ಕುದಿಸಿದ ನಂತರ ಸೋಸಿಕೊಳ್ಳಬಹುದು.
ಇದನ್ನು ಒಂದು ಲೋಟಕ್ಕೆ ಹಾಕಿಕೊಳ್ಳಬೇಕು. ಹೀಗೆ ಮಾಡಿ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಗ್ಯಾಸ್ಟ್ರಿಕ್, ಹೊಟ್ಟೆನೋವು ಮತ್ತು ಹೊಟ್ಟೆಉರಿ ಇಂತಹ ಯಾವುದೇ ಸಮಸ್ಯೆಗಳು ಇದ್ದರು ದೂರವಾಗುತ್ತದೆ. ಗ್ಯಾಸ್ಟ್ರಿಕ್ ಉಂಟಾದಾಗ ಇಂಗ್ಲಿಷ್ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಇಂತಹ ಮನೆಮದ್ದನ್ನು ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಒಳ್ಳೆಯದು. ಹೀಗೆ ಆದಲ್ಲಿ ಕಷಾಯವನ್ನು ಮಾಡಿ ಪ್ರಯೋಜನವನ್ನು ಪಡೆದುಕೊಳ್ಳಿ.