ನುಗ್ಗೆಸೊಪ್ಪು ಇದು ಸೊಪ್ಪುಗಳಲ್ಲಿ ಒಂದು. ನುಗ್ಗೆಕಾಯಿಯನ್ನು ಪದಾರ್ಥಗಳಿಗೆ ಹಾಕಿದರೆ ಬಹಳ ರುಚಿಯಾಗಿರುತ್ತದೆ. ಹಾಗೆಯೇ ಇದನ್ನು ಎಲ್ಲರೂ ಇಷ್ಟಪಡುತ್ತಾರೆ. ಇದನ್ನು ಊಟದ ಸಾಂಬಾರುಗಳಲ್ಲಿ ಬಳಸಿದರೆ ಅದರ ರುಚಿಯೇ ಬೇರೆ ಎಂದು ಹೇಳಬಹುದು. ಆದರೆ ನಾವು ಇಲ್ಲಿ ನುಗ್ಗೆಸೊಪ್ಪಿನ ಬಳಕೆಯಿಂದ ಉಂಟಾಗುವ ಒಳ್ಳೆಯ ಪರಿಣಾಮಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಹಳ್ಳಿಯ ಜನರು ಹೆಚ್ಚಾಗಿ ನುಗ್ಗೆ ಸೊಪ್ಪನ್ನು ಬಳಸಿ ತಂಬುಳಿಯನ್ನೂ ಮಾಡುತ್ತಾರೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗೆಯೇ ನುಗ್ಗೆಸೊಪ್ಪನ್ನು ಆಯುರ್ವೇದದಲ್ಲಿ ಸಹಿತ ಬಳಸಲಾಗುತ್ತದೆ. ನುಗ್ಗೆಸೊಪ್ಪನ್ನು ಸೇವನೆ ಮಾಡುವುದರಿಂದ ಅನೇಕ ದೈಹಿಕ ಸಮಸ್ಯೆಗಳನ್ನು ದೂರವಾಗಿಸಿಕೊಳ್ಳಬಹುದು. ಅದರಲ್ಲೂ ನುಗ್ಗೆಸೊಪ್ಪು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಆದ್ದರಿಂದ ಬೆಳಗ್ಗೆ ಎದ್ದ ಕೂಡಲೇ ಹಸಿದ ಹೊಟ್ಟೆಯಲ್ಲಿ ಇದರ ರಸವನ್ನು ಸೇವನೆ ಮಾಡಬೇಕು.
ಕೆಲವು ಪುರುಷರಲ್ಲಿ ಗುಪ್ತ ಸಮಸ್ಯೆಗಳು ಇರುತ್ತವೆ. ಅಂತಹವರು ನುಗ್ಗೆಸೊಪ್ಪಿನ ರಸವನ್ನು ಕುಡಿಯಬೇಕು. ಇಲ್ಲವಾದಲ್ಲಿ ವೈದ್ಯರ ಹತ್ತಿರ ಕೂಡ ಹೋಗಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕರಿಂದ ಐದು ಚಮಚ ರಸವನ್ನು ಕುಡಿಯುವುದರಿಂದ ಪುರುಷರರಲ್ಲಿ ಪುರುಷತ್ವ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ನುಗ್ಗಿಹೂವನ್ನು ಕೂಡ ಸೇವನೆ ಮಾಡಬಹುದು. ಹಾಗೆಯೇ ನುಗ್ಗೆಗಿಡದ ತೊಗಟೆಯಿಂದ ಹಲ್ಲುಜ್ಜುವುದರಿಂದ ಹಲ್ಲನ್ನು ಗಟ್ಟಿಯಾಗಿಸುತ್ತದೆ.
ಮಧುಮೇಹಿಗಳಿಗೆ ನುಗ್ಗೆಸೊಪ್ಪು ಬಹಳ ಒಳ್ಳೆಯದು. ಏಕೆಂದರೆ ಇದು ಯಾವುದೇ ರೀತಿಯ ಸಕ್ಕರೆಯಂಶವನ್ನು ಹೊಂದಿರುವುದಿಲ್ಲ. ಹಾಗೆಯೇ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಇದನ್ನು ದಿನನಿತ್ಯ ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡ ಕೂಡ ಕಡಿಮೆಯಾಗುತ್ತದೆ. ಇದರಿಂದ ಇನ್ನು ಹಲವಾರು ಪ್ರಯೋಜನಗಳಿವೆ. ಇದರಿಂದ ವಾರಕ್ಕೆ ಮೂರು ಬಾರಿಯಾದರೂ ಇದನ್ನು ಯಾವುದಾದರೂ ರೀತಿಯಲ್ಲಿ ಸೇವನೆ ಮಾಡುವುದು ಒಳ್ಳೆಯದು.