ಮನೆ ನಿರ್ಮಾಣ ಮಾಡುವಾಗ ವಾಸ್ತು ಶಾಸ್ತ್ರ ನೋಡಲೇಬೇಕು. ವಾಸ್ತು ಶಾಸ್ತ್ರದ ಪ್ರಕಾರ ಯಾವ ಯಾವ ವಸ್ತುಗಳನ್ನು ಮನೆಯಲ್ಲಿ ಹೇಗೆ ಇಡಬೇಕೋ ಹಾಗೆ ಇಟ್ಟರೆ ಮನೆಗೆ ಶುಭ. ಹಾಗಾದರೆ ಮನೆಯಲ್ಲಿ ಯಾವ ವಸ್ತು ಹೇಗಿರಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ವಾಸ್ತು ಪ್ರಕಾರ ಮನೆಯ ವಸ್ತುಗಳಲ್ಲಿ ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ ಇದೆ. ವಸ್ತುಗಳನ್ನು ಸರಿಯಾದ ದಿಕ್ಕು, ಸ್ಥಳದಲ್ಲಿ ಇಡದೆ ಇದ್ದರೆ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಸರಿಯಾದ ದಿಕ್ಕು, ಸ್ಥಳದಲ್ಲಿ ಇಟ್ಟರೆ ಸಕಾರಾತ್ಮಕ ಶಕ್ತಿಯನ್ನು ಮನೆ ತುಂಬುತ್ತದೆ. ಈ ಮಾತನ್ನು ವಿಜ್ಞಾನಿಗಳು ಸಹ ಒಪ್ಪಿಕೊಳ್ಳುತ್ತಾರೆ. ಎಲ್ಲರ ಜೀವನದಲ್ಲಿ ಒಳ್ಳೆಯ ಹಾಗೂ ಕೆಟ್ಟ ಸಮಯ ಬರುತ್ತದೆ. ಸಮಯ ಯಾರಿಗೂ ಕಾಯುವುದಿಲ್ಲ ಮನೆಯಲ್ಲಿರುವ ಗಡಿಯಾರ ನಮಗೆ ಒಳ್ಳೆಯ ಸಮಯವನ್ನು ತೆಗೆದುಕೊಂಡು ಬರಬಹುದು. ವಾಸ್ತು ಶಾಸ್ತ್ರದ ಪ್ರಕಾರ ಗಡಿಯಾರ ಗೋಲಾಕಾರದಲ್ಲಿ ಇದ್ದರೆ ಮನೆಗೆ ಶುಭ ಅದು ಭೂಮಿಯ ರೂಪವನ್ನು ತೋರಿಸುತ್ತದೆ. ಗಡಿಯಾರದಲ್ಲಿ ಚಿತ್ರಗಳನ್ನು ಅಳವಡಿಸುತ್ತಾರೆ ಅದು ಮನೆಗೆ ಒಳ್ಳೆಯದಲ್ಲ ಅದರಲ್ಲೂ ದೇವರ ಚಿತ್ರವನ್ನು ಗಡಿಯಾರದಲ್ಲಿ ಅಳವಡಿಸುವುದು ಮನೆಗೆ ಶುಭ ತರುವುದಿಲ್ಲ. ದೇವರಿಗೆ ದಿನವೂ ಪೂಜೆ ಮಾಡುವುದು ಪದ್ಧತಿ ಗಡಿಯಾರವನ್ನು ದಿನವೂ ಪೂಜೆ ಮಾಡುವುದಿಲ್ಲ ಮತ್ತು ಧೂಳಿನಲ್ಲಿ ಇಡಲಾಗುತ್ತದೆ ಅದು ಒಳ್ಳೆಯದಲ್ಲ. ಗಡಿಯಾರ ಚೂಪಾಗಿ ಚೌಕಾಕಾರದಲ್ಲಿ ಇದ್ದರೆ ಅದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗಡಿಯಾರವನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು ಇದರಿಂದ ಮನೆಯಲ್ಲಿ ಭಾಗ್ಯ ಹೆಚ್ಚುತ್ತದೆ.

ಮನೆಯಲ್ಲಿ ಒಡೆದ, ಹಾಳಾದ ಗಡಿಯಾರವನ್ನು ಇಡಬಾರದು ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಗಡಿಯಾರವನ್ನು ಮನೆಯ ದಕ್ಷಿಣ ದಿಕ್ಕಿಗೆ ಇಡಬಾರದು ಪೂರ್ವ, ಉತ್ತರ, ಪಶ್ಚಿಮ ದಿಕ್ಕಿಗೆ ಇಡಬೇಕು ಮತ್ತು ಗಡಿಯಾರವನ್ನು ಮುಖ್ಯದ್ವಾರದ ಬಳಿ ಇಡಬಾರದು, ಮಲಗುವ ಕೋಣೆಯ ಬಾಗಿಲು, ಹೋಗಿ ಬರುವ ದಾರಿಯ ಬಾಗಿಲ ಮೇಲೆ ಇಡಬಾರದು. ಗಡಿಯಾರವನ್ನು ಗೋಡೆಯ ಮೇಲೆ ಇಡಬೇಕು. ಕ್ಯಾಲೆಂಡರ್ ಅನ್ನು ಉತ್ತರ ಮತ್ತು ಪೂರ್ವ ದಿಕ್ಕಿಗೆ ಇಡಬಾರದು. ಹಳೆಯ ಕ್ಯಾಲೆಂಡರ್ ಮತ್ತು ಹೊಸ ಕ್ಯಾಲೆಂಡರ್ ಒಟ್ಟಿಗೆ ಇರಬಾರದು. ಕ್ಯಾಲೆಂಡರ್ ಹಾಗೂ ಗಡಿಯಾರ ನಮಗೆ ಸಮಯದ ಸೂಚಕವಾಗಿದೆ. ಗಡಿಯಾರದ ಸಮಯವನ್ನು ಹಿಂದೆ ಇಟ್ಟುಕೊಳ್ಳಬಾರದು 10 ನಿಮಿಷ ಮುಂದೆ ಇಟ್ಟುಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ವಾಸ್ತು ಶಾಸ್ತ್ರವನ್ನು ಪಾಲಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!