ಸುದೀಪ್ ಇವರನ್ನು ಅಭಿನಯ ಚಕ್ರವರ್ತಿ ಎಂದು ಕರೆಯಲಾಗುತ್ತದೆ. ಇವರು ಕನ್ನಡ ಸಿನಿಮಾಕ್ಕೆ ಬಂದ ಮೇಲೆ ಒಳ್ಳೆಯ ಯಶಸ್ಸನ್ನು ಕಂಡಿದ್ದಾರೆ. ಹಾಗೆಯೇ ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇವರು ತುಂಬಾ ಪ್ರತಿಭಾನ್ವಿತ ನಟ ಎಂದು ಗುರುತಿಸಿಕೊಂಡಿದ್ದಾರೆ ಎಂದು ಹೇಳಬಹುದು. ತಮ್ಮ ಹಲವಾರು ಬೇರೆ ಬೇರೆ ಪಾತ್ರಗಳ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಕುಳಿತಿದ್ದಾರೆ. ಆದರೆ ನಾವು ಇಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಸೆಪ್ಟೆಂಬರ್ 2 1973ರಲ್ಲಿ ಜನಿಸಿದ್ದಾರೆ. ಸುದೀಪ್ ಅವರು ಜನಿಸಿದರು.ಇವರ ತಂದೆಯ ಹೆಸರು ಸಂಜೀವ್ ಸರೋವರ್ ಆಗಿದೆ. ಹಾಗೆಯೇ ಇವರ ತಾಯಿಯ ಹೆಸರು ಸರೋಜ ಸಂಜೀವ್ ಆಗಿದೆ. ಇವರು ಪ್ರಿಯಾ ರಾಧಾಕೃಷ್ಣನ್ ಅವರನ್ನು ವಿವಾಹವಾಗಿದ್ದಾರೆ. ಈಗ ಅವರಿಗೆ ಒಂದು ಮಗಳು ಸಹ ಇದ್ದಾಳೆ. ಅವಳ ಹೆಸರು ಸಾನ್ವಿ. ಸುದೀಪ್ ಅವರಿಗೆ ಅಭಿನಯ ಚಕ್ರವರ್ತಿ, ಕಿಚ್ಚ, ಅನ್ನದಾತರ ಅನ್ನದಾತ, ಕಲಾ ಭೂಷಣ, ಕಲಾ ಕೇಸರಿ, ಸ್ಟೈಲಿಶ್ ಸ್ಟಾರ್, ಅಗ್ರಿ ಯಂಗ್ ಮಾನ್, ಕನ್ನಡ ಸೂಪರ್ ಸ್ಟಾರ್, ಕರುನಾಡ ಕಿಂಗ್, ಬಿಗ್ಬಾಸ್ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಇವರು ನಟ, ಚಲನಚಿತ್ರ, ನಿರ್ಮಾಪಕ, ವಿತರಕ, ಹಿನ್ನೆಲೆ ಗಾಯಕ, ಕಥೆಗಾರ, ನಿರ್ದೇಶಕ ಎಲ್ಲವೂ ಆಗಿದ್ದಾರೆ. ಇವರು ಮುಖ್ಯವಾಗಿ ಕನ್ನಡ ಭಾಷೆಯ ಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ
ಕನ್ನಡ ಚಿತ್ರಗಳಾದ ಸ್ಪರ್ಶ, ಹುಚ್ಚಾ, ನಂದಿ, ಕಿಚ್ಚಾ ಸ್ವಾತಿಮುತ್ತು, ಮೈ ಆಟೋಗ್ರಾಫ್, ನಂ.73 ಶಾಂತಿ ನಿವಾಸ, ಮುಸ್ಸಂಜೆ ಮಾತು, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ, ಈಗ ಇದು ತೆಲುಗು ಮತ್ತು ತಮಿಳು ಎರಡು ಭಾಷೆಯಲ್ಲಿ ಇದ್ದು ಇವೆಲ್ಲಾ ಸಿನೆಮಾಗಳನ್ನು ಸುದೀಪ್ ಅವರು ಮಾಡಿದ್ದಾರೆ.
ಜನವರಿ 7ರಂದು ಸುದೀಪ್ ಅವರ ಪತ್ನಿಯಾದ ಪ್ರಿಯಾ ಅವರ ಜನ್ಮದಿನವಾಗಿತ್ತು. ಸುದೀಪ್ ಅವರು ಇವರನ್ನು ಮದುವೆಯಾಗಿ 19ವರ್ಷಗಳು ಕಳೆಯಿತು. 2001ರಲ್ಲಿ ಪ್ರಿಯಾ ಅವರನ್ನು ವಿವಾಹವಾದರು. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪತ್ನಿಗೆ ಹುಟ್ಟುಹಬ್ಬದ ಶುಭವನ್ನು ಕೋರಿದ್ದಾರೆ. ಹಾಗೆಯೇ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ಕೋರಿದ್ದಾರೆ. ಇವರ ಜೀವನ ನೂರು ವರ್ಷಗಳ ಕಾಲ ಸುಖವಾಗಿ ಬಾಳಲಿ ಎಂದು ನಾವೆಲ್ಲರೂ ಹಾರೈಸೋಣ.