ಒಟ್ಟಾಗಿ ಸೇರಿ ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಬಡವರು, ಅಸಹಾಯಕರಿಗೆ ಸಹಾಯ ಮಾಡುವುದು ಮಾನವ ಧರ್ಮ. ಆದ್ದರಿಂದ ಎಲ್ಲರೂ ಸೇರಿ ಸಮಾಜದ ಏಳ್ಗೆಗೆ ಶ್ರಮಿಸಿದಾಗ ಸಮಾಜ ಏಳ್ಗೆ ಕಾಣುವುದು. ಇದೇ ರೀತಿ ಹೈದ್ರಾಬಾದ್ ನಲ್ಲಿ ಒಬ್ಬ ಅಧಿಕಾರಿ ವೃದ್ಧೆಗೆ ಮನೆ ನಿರ್ಮಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಪೊಲೀಸರೆಂದರೆ ಮಾನವೀಯತೆ ಇರಲ್ಲ, ಸಣ್ಣ-ಪುಟ್ಟದಕ್ಕೂ ಹಣ ಸುಲಿಯುತ್ತಾರೆ, ಬೆದರಿಸುತ್ತಾರೆ, ಕನಿಕರವೇ ಇಲ್ಲದರು ಎಂಬ ಮಾತಿಗೆ ಇವರು ಅಪವಾದ ಎನ್ನಬಹುದು. ಎಸ್‍ಐ ಅಧಿಕಾರಿಯೊಬ್ಬರು ನಿರ್ಗತಿಕ ವೃದ್ಧೆಗೆ ಹೊಸ ಮನೆಯನ್ನು ನಿರ್ಮಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. ಪೊಲೀಸ್‍ರಲ್ಲಿ ಮಾನವೀಯತೆ ಇದೆ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿದೆ ಎಂಬುದುನ್ನು ಎಸ್‍ಐ ಗುಂದ್ರಥಿ ಸತೀಶ್ ಅವರು ಸಾಬೀತು ಮಾಡಿದ್ದಾರೆ. ಪ್ರವಾಹದಲ್ಲಿ ಮನೆ ಕಳೆದುಕೊಂಡು ನಿರ್ಗತಿಕಳಾಗಿದ್ದ ವಾರಾಂಗಲ್ ಜಿಲ್ಲೆಯ ಲಕ್ಷ್ಮಿನಾರಾಯಣಪುರಂ ಗ್ರಾಮದ ವೃದ್ಧ ಮಹಿಳೆಯೊಬ್ಬರಿಗೆ, ಎಸ್‍ಐ ಸತೀಶ್ ತಮ್ಮದೇ ಹಣದಲ್ಲಿ ಪುಟ್ಟದೊಂದು ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ರಾಜಮ್ಮ ಎಂಬ ಹೆಸರಿನ ಎಪ್ಪತ್ತು ವರ್ಷದ ವೃದ್ಧೆಯನ್ನು ನೋಡಿಕೊಳ್ಳಲು ಯಾರು ಇರಲಿಲ್ಲ. ಮಗ ಅಂಗವಿಕಲರಾಗಿದ್ದರು ತಾಯಿಯನ್ನು ನೋಡಿಕೊಳ್ಳದೆ ಆಕೆಯನ್ನು ತೊರೆದಿದ್ದಾನೆ. ಹೀಗಿರುವಾಗ ರಾಜಮ್ಮ ಒಬ್ಬಳೇ ಪುಟ್ಟ ಮನೆಯಲ್ಲಿ ವಾಸವಾಗಿದ್ದಳು. ಇದು ಎಸ್‍ಐ ಸತೀಶ್ ಅವರ ಗಮನಕ್ಕೆ ಬಂದಿದೆ.
ರಾಜಮ್ಮಳನ್ನು ಭೇಟಿ ಮಾಡಿ ಹೊಸ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಅದರಂತೆ ದಾನಿಗಳ ಸಹಾಯದಿಂದ ಹಾಗೂ ಅರ್ಧ ತಮ್ಮ ಹಣದಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಸುಮಾರು 1,60,000 ರೂಪಾಯಿ ಹಣದಲ್ಲಿ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ . ರಾಜಮ್ಮ ಅವರ ಪರಿಸ್ಥಿತಿ ಕಂಡು ನನಗೆ ನೋವಾಯಿತು. ಅವರಿಗೆ ಎನನ್ನಾದರೂ ಸಹಾಯ ಮಾಡಬೇಕು ಯೋಚಿಸಿದೆ. ನನ್ನಿಂದ ಸಾಧ್ಯವಾಗಿರುವ ಪುಟ್ಟ ಸಹಾಯವನ್ನು ನಾನು ಮಾಡಿದ್ದೇನೆ. ದಾನಿಗಳ ಸಹಾಯ ಮತ್ತು ನನ್ನ ಹಣವನ್ನು ಸೇರಿಸಿ ಒಂದು ಮನೆ ನಿರ್ಮಿಸಿಕೊಟ್ಟಿದ್ದೇನೆ ಎಂದು ಎಸ್‍ಐ ಸತೀಶ್ ಅವರು ಹೇಳಿದ್ದಾರೆ. ಎಸ್‍ಐ ಸತೀಶ್ ಅವರು ಅನೇಕ ವರ್ಷಗಳಿಂದ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ಬಂದಿದ್ದು, ಇವರು ಮಾಡಿರುವ ಸಹಾಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.