ಭಾರತದ ಸಂವಿಧಾನದ ಪ್ರಕಾರ ಶಿಕ್ಷಣ ಮುಖ್ಯವಾಗಿ ರಾಜ್ಯ ಸರ್ಕಾರಗಳಿಗೆ ಸೇರಿದ ವಿಷಯ. ವಿವಿಧ ರಾಜ್ಯಗಳಲ್ಲಿಯ ಉಚ್ಚ ಶಿಕ್ಷಣ ಮತ್ತು ಸಂಶೋಧನೆಗಳ ಮಟ್ಟವನ್ನು ನಿರ್ಧರಿಸುವುದೂ ಅವನ್ನು ಕ್ರೋಡೀಕರಿಸುವುದೂ ಕೇಂದ್ರ ಸರ್ಕಾರದ ಹೊಣೆ. ೧೯ನೆಯ ಶತಮಾನದಲ್ಲಿ ಇಂಗ್ಲೆಂಡಿನ ಶಿಕ್ಷಣ ವ್ಯವಸ್ಥೆಯ ಮಾದರಿಯಲ್ಲೆ ಭಾರತದಲ್ಲಿ ಕೂಡಾ ಅಂತದ್ದೆ ಶಿಕ್ಷಣ ವ್ಯವಸ್ಥೆ ಆರಂಭ ಆಯಿತು ಎನ್ನಬಹುದು. ರಾಷ್ಟ್ರದ ಅನೇಕ ಪ್ರದೇಶಗಳಲ್ಲಿ ಇಂದಿಗೂ ಹೆಣ್ಣುಮಕ್ಕಳಿಗೆ ಶಿಕ್ಷಣ ಗಗನ ಕುಸುಮವೇ ಆಗಿದೆ. ಗಂಡು ಮತ್ತು ಹೆಣ್ಣುಮಕ್ಕಳ ನಡುವೆ ಪೋಷಣೆ, ವಿದ್ಯಾಭ್ಯಾಸದ ವಿಷಯದಲ್ಲಿ ತಾರತಮ್ಯ ಮಾಡುವಂಥ ಪೋಷಕರೂ ಇದ್ದಾರೆ. ಹೆಣ್ಣುಮಕ್ಕಳಿಗೇಕೆ ಓದು ಎಂದು ತಾತ್ಸಾರವಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದರಿಂದ ಇಂಥ ಪ್ರದೇಶಗಳಲ್ಲಿ ಸ್ತ್ರೀ ಸಮಾನತೆ ಎನ್ನುವುದು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಶಿಕ್ಷಣ ಎನ್ನುವುದು ಬಹುದೊಡ್ಡ ಅಸ್ತ್ರ. ಅವರ ಸಬಲತೆಗೂ ಇದು ಸಹಾಯಕ. ಆದರೆ ಈ ಒಂದು ರಾಜ್ಯದಲ್ಲಿ ಯುವತಿಯರಿಗೆ ಸರ್ಕಾರದಿಂದ ಉಚಿತವಾಗಿ ಸ್ಕೂಟರ್ ಸಿಗಲಿದೆ. ಬಾಲಕಿಯರಿಗೆ ರಾಜ್ಯ ಸರ್ಕಾರ ಸ್ಕೂಟರ್ ಮತ್ತು ಆರ್ಥಿಕ ಪ್ರೋತ್ಸಾಹ ನೀಡಲಿದೆ ಎಂದು ಅಸ್ಸಾಂ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಬಾಲಕಿಯರ ಶಿಕ್ಷಣಕ್ಕೆ ಮಹತ್ವ ನೀಡಿರುವ ಅಸ್ಸಾಂ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಭರವಸೆಯ ಬಾಲಕಿಯರನ್ನು ಪ್ರೋತ್ಸಾಹಿಸುವುದು, ಯಾವುದೇ ಮಗು ವಿದ್ಯೆಯಿಂದ ವಂಚಿತರಾಗುವುದನ್ನು ತಪ್ಪಿಸಲು ಆರ್ಥಿಕ ಸಹಾಯ ನೀಡುವುದು ಮತ್ತು ಅರ್ಹ ಯುವತಿಯರಿಗೆ ಸ್ಕೂಟರ್ ನೀಡುವುದು ಮುಂತಾದ ಯೋಜನೆಗಳು ಇದರಲ್ಲಿ ಸೇರಿವೆ. 12ನೇ ತರಗತಿಯಲ್ಲಿ ಪ್ರಥಮ ವಿಭಾಗದಲ್ಲಿ ಉತ್ತೀರ್ಣರಾದ ಯುವತಿಯರಿಗೆ ರಾಜ್ಯ ಸರ್ಕಾರ ಉಚಿತ ಸ್ಕೂಟರ್ ನೀಡುತ್ತಿದೆ. ಅಷ್ಟೇ ಅಲ್ಲ ಪ್ರತಿದಿನ ಶಾಲೆಗೆ ಹೋಗಲು ಹುಡುಗಿಯರನ್ನು ಉತ್ತೇಜಿಸಲು ಆರ್ಥಿಕ ಸಹಾಯವನ್ನೂ ನೀಡಲಾಗುತ್ತಿದೆ. ಬಾಲಕಿಯರು ನಿಯಮಿತವಾಗಿ ತರಗತಿಗಳಿಗೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಸ್ಕೂಟರ್ ಮತ್ತು ಆರ್ಥಿಕ ಪ್ರೋತ್ಸಾಹ ನೀಡಲಿದೆ ಎಂದು ಅಸ್ಸಾಂ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದರು.
12ನೇ ತರಗತಿಯ ಪ್ರಥಮ ವಿಭಾಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಪ್ರಜ್ಞಾನ್ ಭಾರತಿ ಸ್ಕೂಟಿ ಯೋಜನೆಯಡಿ 22,000 ದ್ವಿಚಕ್ರ ವಾಹನಗಳನ್ನು ವಿತರಿಸುತ್ತಿದೆ ಎಂದು ಹಿಮಂತ್ ಬಿಸ್ವಾ ಶರ್ಮಾ ಹೇಳಿದರು. ರಾಜ್ಯ ಸರ್ಕಾರದ ಈ ಯೋಜನೆಗೆ 144.30 ಕೋಟಿ ರೂಪಯಿ ವೆಚ್ಚವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ಸಂಖ್ಯೆ ಒಂದು ಲಕ್ಷ ದಾಟಿದರೂ ರಾಜ್ಯ ಮಂಡಳಿಯಿಂದ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸ್ಕೂಟರ್ ನೀಡಲಿದೆ ಎಂದು ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ. 2018 ಮತ್ತು 2019ರಲ್ಲಿ 12ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಎಲ್ಲ ಬಾಲಕಿಯರಿಗೂ ಸ್ಕೂಟರ್ ನೀಡಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಶಾಲೆಯಿಂದ ಸ್ನಾತಕೋತ್ತರ ಹಂತದವರೆಗಿನ ಎಲ್ಲ ಬಾಲಕಿಯರಿಗೆ ಆರ್ಥಿಕ ಪ್ರೋತ್ಸಾಹ ಧನ ನೀಡಲಾಗುವುದು ಮತ್ತು ಈ ತಿಂಗಳ ಅಂತ್ಯದ ವೇಳೆಗೆ ಈ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದರು.
ಶಾಲೆಗೆ ಹೋಗುವ ಎಲ್ಲ ಬಾಲಕಿಯರಿಗೆ ಅಸ್ಸಾಂ ಸರ್ಕಾರ ಪುಸ್ತಕಗಳು, ಸಮವಸ್ತ್ರ ಮತ್ತು ಇತರ ಪಠ್ಯ ಸಾಮಗ್ರಿಗಳನ್ನು ಒದಗಿಸುತ್ತಿದೆ. ಪುಸ್ತಕಗಳಿಗೆ 1000 ರೂಪಾಯಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪುಸ್ತಕಗಳಿಗೆ 1,500 ರೂಪಾಯಿ ಮತ್ತು 2,000 ರೂಪಾಯಿ ನೀಡಲಾಗುವುದು ಎಂದು ಅವರು ಹೇಳಿದರು. ಹಾಸ್ಟೆಲ್‌ಗಳಲ್ಲಿ ವಾಸಿಸುವ ಬಾಲಕಿಯರಿಗೆ ಪ್ರತಿ ತಿಂಗಳು ಕ್ಯಾಂಟೀನ್ ವೆಚ್ಚಕ್ಕಾಗಿ 1000 ರೂಪಾಯಿ ನೀಡಲಾಗುವುದು. ಈ ಯೋಜನೆಯನ್ನು ಕಳೆದ ವರ್ಷವೇ ಪ್ರಾರಂಭಿಸಬೇಕಾಗಿತ್ತು. ಆದರೆ ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಇದು ವಿಳಂಬವಾಗಿದೆ ಎಂದು ಹೇಳಿದರು. ಇನ್ನು ಈ ಯೋಜನೆಯ ಲಾಭ ಯಾರಿಗೆ ಸಿಗಲಿದೆ? ಎಂದು ನೋಡುವುದಾದರೆ, ಈ ಯೋಜನೆ ಅಸ್ಸಾಂನಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹುಡುಗಿಯರಿಗೆ ಮಾತ್ರ. ಈ ಯೋಜನೆ ಹುಡುಗಿಯರಿಗೆ ಮಾತ್ರ. ಈ ಯೋಜನೆಯನ್ನು ಪಡೆದುಕೊಳ್ಳುವ ವ್ಯಕ್ತಿ ಅಸ್ಸಾಂನ ನಿವಾಸಿಯಾಗಿರಬೇಕು. ಅಸ್ಸಾಂ ಮಂಡಳಿಯ 12 ನೇ ತರಗತಿಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಉತ್ತೀರ್ಣರಾಗುವುದು ಅಗತ್ಯ. ಫಲಾನುಭವಿಯು ಅಸ್ಸಾಂ ಸರ್ಕಾರಿ ಶಾಲೆಯ ವಿದ್ಯಾರ್ಥಿ ಆಗಿರಬೇಕು.