ಕನ್ನಡ ಚಿತ್ರರಂಗದ ನಟ, ನಟಿಯರು ಕೆಲವು ವಿಶೇಷ ಸಮಯದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಹಾಕುವ ಮೂಲಕ ಅಭಿಮಾನಿಗಳಿಗೆ ತಿಳಿಸುತ್ತಾರೆ. ಅವರಲ್ಲಿ ರಾಕಿಂಗ್ ಸ್ಟಾರ್ ಯಶ್ ದಂಪತಿಗಳು ಕೂಡ ಮುಂದಿದ್ದಾರೆ. ಅವರ ಇಬ್ಬರು ಮುದ್ದು ಮಕ್ಕಳ ಬರ್ತಡೇ ಹೀಗೆ ವಿಶೇಷ ಸಮಯದಲ್ಲಿನ ಫೋಟೋವನ್ನು ಪೋಸ್ಟ್ ಮಾಡುತ್ತಾರೆ. ಅದೇ ರೀತಿ ರಾಧಿಕಾ ಪಂಡಿತ್ ಅವರು ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ ಅದರ ವಿಶೇಷತೆ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮಗನ ತಲೆ ಕೂದಲು ತೆಗೆದಿರುವ ಫೋಟೋವನ್ನು ರಾಧಿಕಾ ಪಂಡಿತ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಶ್ ದಂಪತಿಗಳು ತಮ್ಮ ಮುದ್ದಾದ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ ಆದರೆ ಈ ಬಾರಿ ಯಶ್ ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋ ವಿಭಿನ್ನವಾಗಿದೆ, ವಿಶೇಷವಾಗಿದೆ. ರಾಧಿಕಾ ಪಂಡಿತ್ ಅವರು ಇನ್ಸ್ಟಾಗ್ರಾಂದಲ್ಲಿ ಹಂಚಿಕೊಂಡ ಫೋಟೋದಲ್ಲಿ ಯಶ್ ಅವರು ತಮ್ಮ ಮುದ್ದು ಮಗನನ್ನು ಎತ್ತಿಕೊಂಡು ನಗುತ್ತಾ ಮಗನ ತಲೆಯನ್ನು ನೋಡುತ್ತಿದ್ದಾರೆ. ಮಗನ ಮುಡಿಯನ್ನು ತೆಗೆದಿರುವ ವಿಷಯವನ್ನು ರಾಧಿಕಾ ಪಂಡಿತ್ ಅವರು ಈ ಮೂಲಕ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಅವರು ಯಥರ್ವನ ಮುಡಿಯನ್ನು ಕೊಟ್ಟಿರುವ ಫೋಟೋ ಹಾಕಿ ಮೊದಲು ಮತ್ತು ನಂತರ ಎಂಬ ಕ್ಯಾಪ್ಚರ್ ಹಾಕಿದ್ದಾರೆ.

ಈ ಹಿಂದೆ ಯಶ್ ದಂಪತಿಗಳ ಮುದ್ದು ಮಗಳ ಮುಡಿಯನ್ನು ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಯಲ್ಲಿ ತೆಗೆಸಿ ತಮ್ಮ ಹರಕೆಯನ್ನು ಈಡೇರಿಸಿದ್ದರು. ಆಗ ರಾಧಿಕಾ ಪಂಡಿತ್ ಅವರು ಪೋಸ್ಟ್ ಮಾಡಿದ ಫೋಟೋದಲ್ಲಿ ಯಶ್ ಅವರ ಮಗಳು ಗರಮ್ ಆಗಿ ಯಶ್ ಅವರನ್ನು ನೋಡುತ್ತಿರುವ ಫೋಟೋ ಸಖತ್ ವೈರಲ್ ಆಗಿತ್ತು. ಇದೀಗ ಈ ವರ್ಷದ ಆರಂಭದಲ್ಲಿ ರಾಧಿಕಾ ಪಂಡಿತ್ ಅವರು ತಮ್ಮ ಮಗನ ಫೋಟೋವನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ ಈ ಮೂಲಕ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಹಾಗೂ ಯಶ್ ಅವರದು ಕ್ಯೂಟ್ ಫ್ಯಾಮಿಲಿ, ಅವರು ತಮ್ಮ ಫ್ಯಾಮಿಲಿಯೊಂದಿಗೆ ವಿಶೇಷ ಸಮಯದ ಎಲ್ಲಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಅಭಿಮಾನಿಗಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿರುತ್ತಾರೆ. ಯಶ್ ದಂಪತಿಗಳು ತಮ್ಮ ಮಕ್ಕಳೊಂದಿಗೆ ನಗುನಗುತ್ತಾ ಸಂತೋಷವಾಗಿ ಇರಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!