ಸೌಂದರ್ಯ ಪ್ರಿಯರಾದ ಮಹಿಳೆಯರಿಗೆ ಬ್ಯೂಟಿಪಾರ್ಲರ್ ಇರುವುದು ಸರ್ವೇಸಾಮಾನ್ಯ. ಬ್ಯೂಟಿ ಪಾರ್ಲರ್ ಗೆ ಹೋಗುವುದೆಂದರೆ ಮಹಿಳೆಯರಿಗೆ ಬಹಳ ಇಷ್ಟ. ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ಪಾರ್ಲರ್ ಇರುವುದಲ್ಲದೆ, ಎಮ್ಮೆಗಳಿಗೂ ಪಾರ್ಲರ್ ಸೇವೆಯನ್ನು ಒದಗಿಸಲಾಗುತ್ತಿದೆ. ಹಾಗಾದರೆ ಎಮ್ಮೆಗಳಿಗೆ ಪಾರ್ಲರ್ ಸೇವೆಯನ್ನು ಪ್ರಾರಂಭಿಸಿದವರು ಯಾರು, ಯಾವ ಉದ್ದೇಶಕ್ಕಾಗಿ ಈ ಕಾರ್ಯವನ್ನು ಪ್ರಾರಂಭಿಸಿದರು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಮುಖ ಸುಂದರವಾಗಿ ಕಾಣಲು ಗೃಹಿಣಿಯರು, ಕಾಲೇಜು ಹುಡುಗಿಯರು ಬ್ಯೂಟಿ ಪಾರ್ಲರ್ ಗೆ ಹೋಗುವುದು ಸರ್ವೇ ಸಾಮಾನ್ಯ. ಮಹಾರಾಷ್ಟ್ರದ ಕೊಲ್ಲಾಪುರದ ನಿವಾಸಿ ವಿಜಯ್ ಸೂರ್ಯವಂಶಿ ಅವರು ಎಮ್ಮೆಗಳಿಗೆ ಪಾರ್ಲರ್ ವ್ಯವಸ್ಥೆ ಮಾಡಿದ್ದಾರೆ. ಎಮ್ಮೆಗಳಿಗೆ ಒಂದು ಪಾರ್ಲರ್ ಪ್ರಾರಂಭಿಸಿ, ಎಮ್ಮೆಗಳಿಗೆ ಹೇರ್ ಕಟ್ ಮಾಡಿ ಸ್ನಾನ ಮಾಡಿಸಿ ಎಣ್ಣೆ ಮಸಾಜ್ ಮಾಡಲಾಗುತ್ತದೆ. ದಿನಕ್ಕೆ 25-30 ಎಮ್ಮೆಗಳಿಗೆ ಪಾರ್ಲರ್ ನಿಂದ ಸೇವೆ ಮಾಡಲಾಗುತ್ತದೆ. ಕೊಲ್ಲಾಪುರ ನಗರ ಕೃಷಿ ಪ್ರಧಾನ ನಗರ, ಕೃಷಿ ಜೊತೆಗೆ ಜಾನುವಾರು ಸಾಕಾಣಿಕೆ ಪ್ರಮುಖವಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ನದಿ ನೀರಿನಲ್ಲಿ ಎಮ್ಮೆಗಳನ್ನು ಸ್ನಾನ ಮಾಡಿಸಿದರೆ ನದಿ ನೀರು ಕಲುಷಿತವಾಗುತ್ತದೆ ಇದರಿಂದ ಆರೋಗ್ಯಕ್ಕೆ ಅಪಾಯಕಾರಿ ಹೀಗಾಗಿ ವಿಜಯ್ ಅವರು ಸರ್ಕಾರದಿಂದ 15 ಲಕ್ಷ ಅನುದಾನ ಪಡೆದು ಪಾರ್ಲರ್ ಪ್ರಾರಂಭಿಸಿದ್ದಾರೆ.
ಅವರು ಎಮ್ಮೆ ತೊಳೆದ ನೀರನ್ನು ಹಾಗೂ ಎಮ್ಮೆಯ ಸಗಣಿಯನ್ನು ಗದ್ದೆಗೆ ಬಳಸುತ್ತಾರೆ. ಕೊಲ್ಲಾಪುರದಲ್ಲಿ ಪಂಚಗಂಗಾ ನದಿ ಹರಿಯುತ್ತದೆ ಈಗಾಗಲೇ ಕಾರ್ಖಾನೆಯ ತ್ಯಾಜ್ಯ ನದಿಗೆ ಸೇರಿ ನದಿ ನೀರು ಕಲುಷಿತವಾಗುತ್ತಿದೆ. ಹೀಗಿರುವಾಗ ಕೊಲ್ಲಾಪುರದ ಹೈನ್ಯೋದ್ಯಮಿಗಳು ಎಮ್ಮೆಗಳನ್ನು ನೀರಿನಲ್ಲಿ ಸ್ನಾನ ಮಾಡಿಸುತ್ತಾರೆ ಇದರಿಂದ ನೀರು ಕಲುಷಿತವಾಗಿ ಆರೋಗ್ಯ ಹಾಳಾಗುತ್ತದೆ, ಹಾಗಾಗಬಾರದು ಎಂದು ವಿಜಯ್ ಸೂರ್ಯವಂಶಿ ಅವರು ಈ ಪಾರ್ಲರ್ ವ್ಯವಸ್ಥೆ ಮಾಡಿದರು.
ನಮ್ಮ ಕರ್ನಾಟಕ ಸಹ ಪಶು ಸಾಕಾಣಿಕೆಯಲ್ಲಿ ಮುಂದಿದೆ ಆದ್ದರಿಂದ ಕೊಲ್ಲಾಪುರದಲ್ಲಿ ಎಮ್ಮೆಗಳಿಗೆ ಮಾಡಿದ ಬ್ಯೂಟಿ ಪಾರ್ಲರ್ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಮಾಡಬೇಕೆಂದು ಕನ್ನಡಿಗರ ಅಭಿಪ್ರಾಯವಾಗಿದೆ. ಎಮ್ಮೆಗಳಿಗೆ ಪಾರ್ಲರ್ ಸೇವೆ ಒದಗಿಸಿ ವಿಜಯ್ ಅವರು ರೈತರಿಂದ ಯಾವುದೇ ಹಣ ತೆಗೆದುಕೊಳ್ಳುವುದಿಲ್ಲ ಉಚಿತ ಸೇವೆ ಮಾಡುತಿದ್ದಾರೆ. ಎಮ್ಮೆ ಸ್ನಾನಕ್ಕೆ ಬಳಸುವ ನೀರು ಮತ್ತು ಸಗಣಿಯನ್ನು ಹೊಲಕ್ಕೆ ಬಳಸುವುದರಿಂದ ಸಾಕಷ್ಟು ಲಾಭ ಗಳಿಸಬಹುದು. ಎಮ್ಮೆ ಬ್ಯೂಟಿ ಪಾರ್ಲರ್ ಪ್ರಾರಂಭಿಸಿ ಕೊಲ್ಲಾಪುರ ನಗರದಲ್ಲಿ ಲಾಭ ಗಳಿಸುತ್ತಿದ್ದಾರೆ. ವಿಜಯ್ ಸೂರ್ಯವಂಶಿ ಅವರು ಪ್ರಾರಂಭಿಸಿದ ವಿಭಿನ್ನವಾದ, ವಿಶೇಷವಾದ ಕಾರ್ಯವನ್ನು ಎಲ್ಲರೂ ಮೆಚ್ಚಲೇಬೇಕು. ಹೀಗೆ ಮಾಡುವ ಮೂಲಕ ವ್ಯವಸಾಯವನ್ನು ಅಭಿವೃದ್ಧಿಗೊಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಎಮ್ಮೆಗಳಿಗೆ ಪಾರ್ಲರ್ ಸೇವೆ ಕರ್ನಾಟಕದಲ್ಲಿ ಯಾವಾಗ ಬರುತ್ತದೆ ಎಂದು ಕಾದುನೋಡಬೇಕಾಗಿದೆ.