ಅಭಿಮಾನಿಗಳೇ ದೇವರು’ ಅಂತ ಅಣ್ಣಾವ್ರು ಹೇಳ್ತಿದ್ರು. ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಕೂಡ ಅದನ್ನೇ ನಂಬಿ, ಪಾಲಿಸಿಕೊಂಡು ಬರುತ್ತಿದ್ದಾರೆ. ಅಭಿಮಾನಿಗಳ ಮನಸ್ಸನ್ನ ದೊಡ್ಮನೆ ಕುಟುಂಬ ಎಂದೂ ನೋಯಿಸಲ್ಲ. ಅಭಿಮಾನಿಗಳನ್ನ ಸದಾ ಆರಾಧಿಸುವ ದೊಡ್ಮನೆ ಮಕ್ಕಳ ಸರಳತೆಗೆ ತಾಜಾ ಉದಾಹರಣೆ ಇಲ್ಲಿದೆ ನೋಡಿರಿ.
ಕನ್ನಡ ಚಿತ್ರರಂಗದಲ್ಲಿ ಸರಸ ಇನ್ನೊಂದು ಹೆಸರು ಎಂದರೆ ಅದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ತಮ್ಮನ್ನು ಪ್ರೀತಿಯಿಂದ ಕಾಣುವ ಅಭಿಮಾನಿಗಳ ಜೊತೆಗೆ ಅಪ್ಪು ಬಹಳಷ್ಟು ಆತ್ಮೀಯತೆಯಿಂದ ಬೆರೆಯುತ್ತಾರೆ. ತಾನೊಬ್ಬ ಮೇರು ನಟನ ಮಗ ಅಥವಾ ತಾನೊಬ್ಬ ದೊಡ್ಡ ಸ್ಟಾರ್ ಎನ್ನುವ ಯಾವುದೇ ಅಹಂಕಾರ ಇಲ್ಲದ ಪುನೀತ್ ರಾಜಕುಮಾರ್ ಅವರ ಹೃದಯ ಶ್ರೀಮಂತಿಕೆ ಇವರ ಅಭಿಮಾನಿಗಳಿಗೆ ಖುಷಿ ತರಿಸುತ್ತದೆ ಮತ್ತು ಅದೊಂದು ರೀತಿಯ ಹೆಮ್ಮೆ ಕೂಡಾ. ಸಾಕಷ್ಟು ಸಮಯದಲ್ಲಿ ನಾವು ಪುನೀತ್ ರಾಜಕುಮಾರ್ ಅವರ ಸರಳತೆಯನ್ನು ಗುರುತಿಸಬಹುದು. ಒಮ್ಮೆ ಪುನೀತ್ ರಾಜಕುಮಾರ್ ಅವರು ಕಾರಿನಲ್ಲಿ ಪ್ರಯಾಣ ಮಾಡುವಾಗ ಅವರನ್ನು ಕಂಡು ಗುರುತಿಸಿದ ಅಭಿಮಾನಿ ಒಬ್ಬರು ಅವರ ಕಾರನ್ನೆ ಹಿಂಬಾಲಿಸಿ ಹೋಗುತ್ತಾರೆ. ತನ್ನನ್ನೇ ಯಾರೋ ಹಿಂಬಾಲಿಸಿ ಬರುವುದನ್ನು ಕಾರಿನ ಮಿರರ್ ಮೂಲಕ ನೋಡಿದ ಅಪ್ಪು ತಮ್ಮ ಕಾರನ್ನು ಪಕ್ಕಕ್ಕೆ ನಿಲ್ಲಿಸಿ ಅವರಿಗೆ ಬುದ್ಧಿ ಹೇಳಿ ಫೋಟೋ ತೆಗೆಸಿಕೊಳ್ಳುತ್ತಾರೆ.
ಸುಮಾರು ಆರು ಕಿಲೋಮೀಟರ್ ಅಷ್ಟು ತನ್ನನ್ನೇ ಹಿಂಬಾಲಿಸಿಕೊಂಡು ಬಂದ ಅಭಿಮಾನಿಗೆ ಅಪ್ಪು , ಮೊದಲು ನಿಮ್ಮ ಪ್ರಾಣ ಮುಖ್ಯ ನಾನು ಬೇಕಿದ್ದರೆ ಮತ್ತೆ ಸಿಗುವೆ , ಫೋಟೋ ಬೇಕಿದ್ದರೆ ತೆಗೆದುಕೊಳ್ಳಿ ಎಂದು ಬುದ್ಧಿವಾದ ಹೇಳಿ ಫೋಟೋ ತೆಗೆಸಿಕೊಳ್ಳುತ್ತರೆ. ಇನ್ನು ಪುನೀತ್ ರಾಜಕುಮಾರ್ ಅವರು ತಮ್ಮ ಅಭಿಮಾನಿಗಳ ಮನೆಗೂ ಕೂಡಾ ಹೋಗಿ ಅವರ ಜೊತೆ ಕೂತು ಊಟ ಮಾಡಿದ್ದಾರೆ. ಇತ್ತೀಚೆಗೆ ಅಷ್ಟೇ ಶೂಟಿಂಗ್ ಸಮಯದಲ್ಲಿ ಅಭಿಮಾನಿ ಒಬ್ಬರ ಮನೆಗೆ ಹೋಗಿ ಮಣ್ಣಿನ ನೆಲದ ಮೇಲೇ ಕುಳಿತು ಊಟ ಮಾಡಿದ್ದಾರೆ. ಅಪ್ಪು ಅವರ ಈ ಸರಳತೆ ಸಜ್ಜನತೆಯಿಂದಲೆ ಅಭಿಮಾನಿಗಳಿಗೆ ದೊಡ್ಡಮನೆ ಹುಡುಗ ಅಂದರೆ ಇಷ್ಟ.