ರಾಜ್ಯದಲ್ಲಿ ಕಾವೇರಿದ್ದ ಗ್ರಾಮ ಪಂಚಾಯ್ತಿ ಚುನಾವಣೆಗೆ ಇಂದು ತೆರೆ ಬಿದ್ದಿದೆ. ಮೊನ್ನೆಯಷ್ಟೇ ಎರಡೂ ಹಂತದ ಮತದಾನದ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಮತ ಎಣಿಕೆಯ ಕಾರ್ಯ ಕೂಡಾ ಪೂರ್ಣ ಗೊಂಡಿದೆ. ಇನ್ನು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಗಂಗಮ್ಮ ಹಾಗೂ ಅವರು ನೀಡಿದ ಹೇಳಿಕೆಗಳು ಸಾಕಷ್ಟು ವೈರಲ್ ಆಗಿದ್ದವು. ಆದರೆ ಈಗ ಗ್ರಾಮ ಪಂಚಾಯಿತಿ ಸದಸ್ಯೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಗಂಗಮ್ಮನಿಗೆ ಬಿದ್ದ ಮತಗಳು ಎಷ್ಟು ಎಂದು ತಿಳಿದರೆ ನಿಜಕ್ಕೂ ಶಾಕ್ ಆಗುವುದು ಖಂಡಿತ. ತುಮಕೂರು ಗ್ರಾಮಾಂತರ ತಾಲೂಕಿನ ಹೆಬ್ಬೂರು ಗ್ರಾಪಂನ ಕಲ್ಕರೆ ವಾರ್ಡ್​​ನಿಂದ ಗಂಗಮ್ಮ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದರು. ಗಂಗಮ್ಮ..! ಈ ಹೆಸರನ್ನು ನೀವು ವಾಟ್ಸಪ್​​-ಫೇಸ್​ಬುಕ್​ನಲ್ಲಿ ಓದಿರುತ್ತೀರಿ. ಏಕೆಂದರೆ, ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿಂತು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಇದಕ್ಕೆ ಕಾರಣ ಅವರು ನೀಡಿದ್ದ ಆಶ್ವಾಸನೆ. ಗೆಲುವಿನ ಜೊತೆ ಸೋತರೆ ಏನೆಲ್ಲ ಮಾಡುತ್ತೇನೆ ಎನ್ನುವ ಬಗ್ಗೆಯೂ ಗಂಗಮ್ಮ ಉಲ್ಲೇಖಿಸಿದ್ದರು. ಇದನ್ನು ಮತದಾರರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತದೆ. ಗಂಗಮ್ಮ ಅವರನ್ನು ಸೋಲಿಸಿ ಬಿಟ್ಟಿದ್ದಾರೆ!

ಗೆದ್ದರೂ ಕೆಲಸ ಮಾಡುವೆ ಸೋತರೂ ಕೆಲಸ ಮಾಡುವೆ ಎಂದು ವಿಶೇಷ ಪ್ರಚಾರ ಪತ್ರ ಹಂಚಿದ್ದ ಗಂಗಮ್ಮನಿಗೆ ಬಿದ್ದ ಮತಗಳು ನಿಜಕ್ಕೂ ಆಶ್ಚರ್ಯ ತರಿಸುತ್ತಿದೆ. ಹೌದು ತುಮಕೂರು ಗ್ರಾಮಾಂತರ ತಾಲೂಕಿನ ಹೆಬ್ಬೂರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗಂಗಮ್ಮ ಎಂಬುವವರು ಸ್ಪರ್ಧಿಸಿದ್ದರು. ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದಕ್ಕೆ ಕಾರಣ ಅವರು ಕೊಟ್ಟ ಭರವಸೆಗಳು. ಗೆದ್ದರೆ ಕೆಲ ಜಮೀನನ್ನು ದೇವಸ್ಥಾನದ ಹೆಸರಿಗೆ ಖಾತೆ ಮಾಡಿಸುವೆ, ಅರಳಿಕಟ್ಟೆ ಕಟ್ಟಿಸುವೆ , ರಸ್ತೆ ಮಾಡಿಸುವೆ, ಸಿಸಿ ಚರಂಡಿ ಮಾಡಿಸುವೆ ಎಂದಿದ್ದರು. ಇವಿಷ್ಟು ಅವರು ಗೆದ್ದರೆ ಮಾಡಿಸುವ ಕೆಲಸಗಳು ಆಗಿದ್ದು ಇದರ ಜೊತೆಗೆ ಸೋತರೆ ಅನರ್ಹವಾಗಿ ಪಡೆದಿರಿವ 25 ಕುಟುಂಬಗಳ ಪಡಿತರ ಚೀಟಿ ರದ್ದು ಪಡಿಸುವೆ, ಸುಳ್ಳು ಮಾಹಿತಿ ಕೊಟ್ಟು ಪಡೆದಿರುವ ನಲವತ್ತು ಕುಟುಂಬದ ವಿಧವಾವೇತನಾ ಹಾಗೂ ಇನ್ನಿತರ ವೇತನಾ ಗಳನ್ನು ರದ್ದು ಮಾಡಿಸುವೆ , ಸರ್ವೆ ನಂಬರ್ 86 ರಲ್ಲಿ‌ ಹಳೆ ದಾಖಲೆಯಂತೆ ಸ್ಮಶಾನ ಮಾಡಿಸುವೆ , ಹನ್ನೊಂದು ಕುಟುಂಬಗಳು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರುವು ಗೊಳಿಸುವೆ ಎಂದಿದ್ದರು.

ತುಮಕೂರು ಗ್ರಾಮಾಂತರ ತಾಲೂಕಿನ ಹೆಬ್ಬೂರು ಗ್ರಾಪಂನ ಕಲ್ಕರೆ ವಾರ್ಡ್​​ನಿಂದ ಸ್ಪರ್ಧಿಸಿದ್ದ ಗಂಗಮ್ಮ ಗೆದ್ದರೆ, ಗ್ರಾಮದಲ್ಲಿ ಅರಳಿ ಕಟ್ಟೆ ಕಟ್ಟಿಸುತ್ತೇನೆ, ಊರಿಗೆ ರಸ್ತೆ ಮಾಡಿಸುತ್ತೇನೆ ಎಂಬ ಭರವಸೆ ನೀಡಿದ್ದರು. ಇಷ್ಟೇ ಆಗಿದ್ದರೆ, ಅವರು ಹಂಚಿದ್ದ ಪಾಂಪ್ಲೆಟ್​ ವೈರಲ್​ ಆಗುತ್ತಿರಲಿಲ್ಲವೇನೋ. ಗೆಲುವಿನ ಜೊತೆ ಸೋತರೆ ಏನು ಮಾಡುತ್ತೇನೆ ಎನ್ನುವ ಬಗ್ಗೆಯೂ ಗಂಗಮ್ಮ ಉಲ್ಲೇಖಿಸಿದ್ದರು. ಆನೆ ಇದ್ದರೂ ಸಾವಿರ, ಸೋತರೂ ಸಾವಿರ ಎಂಬಂತಿತ್ತು ಇವರು ಕೊಟ್ಟ ಭರವಸೆಗಳು. ಹೀಗಾಗಿ, ಗಂಗಮ್ಮ ಸೋಲಲಿ ಅಥವಾ ಗೆಲ್ಲಲಿ ಅವರು ಕೆಲಸ ಮಾಡಿಯೇ ಮಾಡುತ್ತಾರೆ ಎಂದು ಜನರು ನಿರ್ಧರಿಸಿದಂತಿದೆ. ಇದೇ ಕಾರಣಕ್ಕೆ ಅವರಿಗೆ ಕೇವಲ ಆರೇ ಮತ ನೀಡಿದ್ದಾರೆ. ಅಷ್ಟೇ ಅಲ್ಲದೇ ಗಂಗಮ್ಮ ತಾನು ಈ ಎಲ್ಲಾ ಕೆಲಸಗಳನ್ನು ಮಾಡೇ ಮಾಡುತ್ತೇನೆ ಎಂಬುದಕ್ಕೆ ಈ ಹಿಂದೆ ಅಕ್ರಮವಾಗಿ ಪಡೆದಿದ್ದ 40‌ಮನೆಗಳ ಬಿಲ್ ಗಳನ್ನು ನಿಲ್ಲಿಸಿರುವುದೇ ಸಾಕ್ಷಿ ಎಂದಿದ್ದರು. ಈ ಪ್ರಚಾರ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಗಂಗಮ್ಮ ಸೋತರೆ ತೊಂದರೆ ಎಂದುಕೊಂಡು ಜನರು ವೋಟ್ ಹಾಕಿರಬಹುದು ಎಂದುಕೊಂಡಿದ್ದರು ನೆಟ್ಟಿಗರು. ಆದರೆ ಅಲ್ಲಿ ನಡೆದದ್ದೇ ಬೇರೆ.

ಗ್ರಾಮಪಂಚಾಯಿತಿ ಚುನಾವಣೆಯ ಫಲಿತಾಂಶ ಹೊರಬಂದಿದ್ದು ಗಂಗಮ್ಮನಿಗೆ ಬಿದ್ದ ಮತಗಳು ಕೇವಲ ಆರು. ಗಂಗಮ್ಮನಿಗೆ ಆರೇ ಆರು ಮತಗಳು ಬಿದ್ದಿದ್ದು ಆಕೆ ಸೋತರೆ ಮಾಡಬೇಕಾದ ಕೆಲಸಗಳು ಪಕ್ಕಾ ಎನ್ನಬಹುದು. ಮತ್ತೊಂದು ವಿಚಿತ್ರ ಎಂದರೆ, ಮತದಾನದ ದಿನ ಗಂಗಮ್ಮ ಅವರು ವೋಟ್​ ಮಾಡಲು ಬಂದಿರಲಿಲ್ಲ. ಮತದಾನದ ದಿನ ಗಂಗಮ್ಮ ತಮಗೆ ತಾವೇ ಮತದಾನ ಮಾಡಿಕೊಳ್ಳದೆ ಮತದಾನದಿಂದ‌ ದೂರ ಉಳಿದಿದ್ದರು. ಈಗ ಸೋಲು ಕಂಡಿದ್ದಾರೆ. ಈಗ ಸೋತರೂ ಮಾಡುವುದಾಗಿ ನೀಡಿರುವ ಭರವಸೆಯನ್ನು ಅವರು ಈಡೇರಿಸುತ್ತಾರಾ ಎನ್ನುವ ಕುತೂಹಲ ಜನರದ್ದು. ಬಹುಶಃ ಅವರ ಕುಟುಂಬದವರನ್ನು ಹೊರತು ಪಡಿಸಿ ಮತ್ತಿನ್ಯಾರೂ ಸಹ ಅವರಿಗೆ ಮತ ಹಾಕಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದಿದೆ. ಇನ್ನು ಗಂಗಮ್ಮ ಸೋತ ನಂತರ ಮಾಡಬೇಕಾದ ಕೆಲಸಗಳು ಸಾಕಷ್ಟಿದ್ದು ಆ ಕೆಲಸಗಳ ಕಡೆ ಗಮನ ಕೊಡುವುದು ಒಳ್ಳೆಯದು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಮತದಾನದ ದಿನವೇ ಗಂಗಮ್ಮ ಮತಗಟ್ಟೆಯ ಕಡೆಗೂ ಮುಖ ಮಾಡಿ ನೋಡಿಲ್ಲ. ಬಹುಶಃ ಅವರ ಮನೆಯವರ ಒತ್ತಾಯಕ್ಕೆ ಚುನಾವಣೆಗೆ ಸ್ಪರ್ಧಿಸಿರಬಹುದೆಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಬಹಳಷ್ಟು ಕಡೆ ಈ ರೀತಿ ನಡೆಯುತ್ತದೆ. ಮನೆಯ ಹೆಂಗಸರು ಚುನಾವಣೆಗೆ ನಿಂತರೂ ಕೂಡ ಅಧಿಕಾರ ಮಾತ್ರ ಅವರ ಗಂಡನ ಕೈಗಳಲ್ಲೇ ಇರುತ್ತವೆ. ಅದೇ ರೀತಿ ಬಹುಶಃ ಗಂಗಮ್ಮನ ಕುಟುಂಬದವರ ಒತ್ತಾಯಕ್ಕೋ ಅಥವಾ ಸ್ವ ಇಚ್ಛೆಯಿಂದಲೋ ಒಟ್ಟಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿ ಕೊನೆಗೆ ಚುನಾವಣೆಯಲ್ಲಿ‌ ಸೋಲನ್ನು ಕಂಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!