ಎಸ್‍ಎಸ್‍ಎಲ್‍ಸಿ ಫೇಲಾದ ವಿದ್ಯಾರ್ಥಿಯಿಂದ ವಿನೂತನ ಶೈಲಿಯ ಬೈಕ್ ಆವಿಷ್ಕಾರ. ಕಲಿತಿದ್ದು ಎಸ್‍ಎಸ್‍ಎಲ್‍ಸಿ. ಅದು ಶಿಕ್ಷಕಿಯೊಬ್ಬರ ಬಲವಂತಕ್ಕೆ ಮರು ಪರೀಕ್ಷೆ ಕಟ್ಟಿ ತೇರ್ಗಡೆ. ಕಲಿಕೆ ತಲೆಗೆ ಹತ್ತಲ್ಲ ಎಂದು ತಂದೆಯ ಕ್ವೌರಿಕ ವೃತ್ತಿಗೆ ಸಹಕರಿಸುತ್ತಾ 17 ರ ಹರೆಯದ ಹುಡುಗ ತಯಾರಿಸಿದ್ದಾನೆ ವಿನೂತನ ಶೈಲಿಯ ಬೈಕ್. ಬಾಲ್ಯದಿಂದಲೂ ಕಲಿಕೆಯಲ್ಲಿ ಹಿಂದೆ, ಮೆಕ್ಯಾನಿಕ್, ಮೋಡೆಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದ ಸದ್ಯ ತಂದೆಯೊಂದಿಗೆ ಕ್ಷೌರದಂಗಡಿಯಲ್ಲಿ ಕೆಲಸ ಮಾಡುತ್ತಿರುವ ಶೋಶನ್ ವಿನೂತನ ಶೈಲಿಯ ಬೈಕ್ ತಯಾರಿಸಿ ಅಚ್ಚರಿ ಮೂಡಿಸಿದ್ದಾನೆ. 2 ರಿಂದ ಎರಡೂವರೆ ಲೀಟರ್ ಪೆಟ್ರೋಲ್ ಹಿಡಿಯುವ ಸುಮಾರು 40 ರಿಂದ 45 ಮೈಲೇಜ್ ನೀಡುವ ಈ ಮೋಟಾರ್‌ಸೈಕಲ್‍ಗೆ ಸದ್ಯ ವ್ಯಯಿಸಿರುವ ಹಣ ಕೇವಲ 9000 ರೂಪಾಯಿ 100 ಸಿಸಿ ಎಂಜಿನ್ ಹೊಂದಿದ್ದು, ಯಾವ ಮೆಕ್ಯಾನಿಕ್ ಶಿಕ್ಷಣವೂ ಇತನಿಗಿಲ್ಲ. ಇದು ಗೋಳಿಯಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಹೈಸ್ಕೂಲ್ ವಿಭಾಗದ ಹಳೆ ವಿದ್ಯಾರ್ಥಿ ವನಜಾ ಹಾಗೂ ಸುಧಾಕರ್ ಭಂಡಾರಿ ಅವರ ಪುತ್ರ ಶೋಶನ್ ಭಂಡಾರಿ ಕೆಂಚನೂರು ವಿಶಿಷ್ಟ ಸಾಧನೆ.


 
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌ ಆದರೇನು? ಈತ ಜೀವನ ಪರೀಕ್ಷೆಯಲ್ಲಿ ಫಸ್ಟ್‌ ಕ್ಲಾಸ್ ಸಾಧಕ..!ಬಾಲ್ಯದಿಂದಲೂ ಕಲಿಕೆಯಲ್ಲಿ ಹಿಂದೆ, ಮೆಕ್ಯಾನಿಕ್, ಮೋಡೆಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದ ಶೋಶನ್ 2018-19 ಶೈಕ್ಷಣಿಕ ಸಾಲಿನಲ್ಲಿ ಬರೆದ ಎಸ್‍ಎಸ್‍ಎಲ್‍ಸಿಯಲ್ಲಿ ಅನುತ್ತೀರ್ಣಗೊಂಡಿದ್ದ. ಹಠಕ್ಕೆ ಬಿದ್ದ ತಂದೆ ಓದಿದ್ದು ಸಾಕು, ತನ್ನೊಂದಿಗೆ ಕ್ಷೌರಿಕ ವೃತ್ತಿ ಕಲಿಯುವಂತೆ ತಿಳಿ ಹೇಳಿದ್ದರು. ತಂದೆಯೊಂದಿಗೆ ಸಹಕರಿಸುತ್ತಿದ್ದ ಶೋಶನ್‍ನ ಮರು ಪರೀಕ್ಷೆಗೆ ಇಂಗ್ಲೀಷ್ ವಿಷಯಕ್ಕೆ ವಿಶೇಷ ತರಬೇತಿ ಪಡೆದು ತೇರ್ಗಡೆಯಾಗಿದ್ದ. ತಂದೆಯೊಂದಿಗೆ ಕ್ಷೌರದಂಗಡಿಯಲ್ಲಿ ಕೆಲಸ ಮಾಡುತ್ತಿರುವ ಶೋಶನ್ ಅಲ್ಲೇ ಪಕ್ಕದ ವಾಸುದೇವ ಭಟ್‍ರ ಸಣ್ಣ ಗ್ಯಾರೇಜ್ ಮೇಲೆ ಕಣ್ಣಿಟ್ಟಿದ್ದ. ತಂದೆ ಅಂಗಡಿ ಬಿಟ್ಟು ಹೊರ ಹೋದಾಕ್ಷಣವೇ ಗ್ಯಾರೇಜ್‍ಗೆ ಬಂದು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ. ಈತ ಬೈಸಿಕಲ್ ಅನ್ನು ಪರಿವರ್ತಿಸಿ ಈ ವಿನೂತನ ಬೈಕ್ ತಯಾರಿಸಿದ್ದ. 100 ಸಿಸಿ ಎಂಜಿನ್, ಒಬ್ಬರು ಕುಳಿತು ಓಡಾಟ ಮಾಡುವ ಈ ಬೈಕ್ ತಯಾರಿಕೆಗೆ ತೆಗೆದುಕೊಂಡಿದ್ದ ಅವಧಿ ಕೇವಲ 25 ದಿನವಷ್ಟೇ.

ಇನ್ನು ಶೋಷನ್ ಈ ಆವಿಷ್ಕಾರದ ಕುರಿತಾಗಿ ಏನು ಹೇಳುತ್ತಾರೆ ಎಂದು ನೋಡುವುದಾದರೆ, ನನ್ನ ಹಿಂದಿ ಶಿಕ್ಷಕಿ ರೋಮಿಲಾ ಮೇಡಂ ಅವರ ಸೂರ್ತಿ, ಗ್ಯಾರೇಜ್ ಮಾಲೀಕ ವಾಸುದೇವ ಭಟ್‍ರ ಪ್ರೋತ್ಸಾಹದಿಂದ ಈ ಬೈಕ್ ತಯಾರಿಸಿದ್ದೇನೆ. ನನಗೆ ಮೆಕ್ಯಾನಿಕ್‍ನಲ್ಲಿ ಸಾಧನೆ ಮಾಡುವ ಆಸಕ್ತಿ. ಈ ಬೈಕ್ ಇನ್ನೂ ಪೂರ್ಣಗೊಂಡಿಲ್ಲ. ಎಂಜಿನ್, ಚಕ್ರ ಇತರೆ ಕೆಲಸಕ್ಕೆ ಒಟ್ಟು 9000 ರೂಪಾಯಿ ಖರ್ಚು ಮಾಡಿದ್ದೇನೆ. ಇನ್ನೂ ಸಣ್ಣಪುಟ್ಟ ಕೆಲಸ ಮಾಡಬೇಕಿದ್ದು, ಇದಕ್ಕೆ ಬಿಟಿಎಂ (ಭಂಡಾರಿ ಟ್ರೈನ್ಡ್ ಮೋಟಾರ್ಸ್) ಎಂದು ಹೆಸರಿಡುವ ಮನಸ್ಸಿದೆ ಎನ್ನುತ್ತಾರೆ ವಿನೂತನ ಬೈಕ್ ಸಂಶೋಧಕ ಶೋಶನ್ ಭಂಡಾರಿ ಕೆಂಚನೂರು.

ನಾನು ವಾಸವಿದ್ದ ಬಾಡಿಗೆ ಮನೆಯ ಸಮೀಪವೇ ಶೋಶನ್ ವಾಸವಿದ್ದ. ನನ್ನ ಮನೆಗೆ ಕರೆಸಿಕೊಂಡು ಓದಲು ಹೇಳುತ್ತಿದ್ದೆ. ಓದಲಿಕ್ಕೆ ಆತ ಬಾರದೇ ಹೋದಾಗ ನಾನೇ ಮನೆಗೆ ಹೋಗಿ ಓದಲು ಹೇಳಿದ್ದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಇಂಗ್ಲೀಷ್‍ನಲ್ಲಿ ಫೇಲಾದ ಮೇಲೆ ಶಾಲೆಗೆ ಕಳುಹಿಸಲ್ಲ ಎಂದರು. ಆದರೂ ಸಾಕಷ್ಟು ಮನವಿ ಮಾಡಿ, ಇಂಗ್ಲೀಷ್ ತರಬೇತಿ ಕೊಟ್ಟು ಮರು ಪರೀಕ್ಷೆ ಕಟ್ಟಿಸಿದೆ. ಮೆಕಾನಿಕ್‍ನಲ್ಲಿ ವಿಶೇಷ ಆಸಕ್ತಿ. ಉನ್ನತ ಶಿಕ್ಷಣ/ಐಟಿಐ ಶಿಕ್ಷಣ ಸಿಕ್ಕರೂ ಮುಂದೆ ದೊಡ್ಡ ಸಾಧಕನಾಗುತ್ತೇನೆ ಎನ್ನುವ ವಿಶ್ವಾಸವಿದೆ ಎಂದು ಶಿಕ್ಷಕಿ ತಿಳಿಸಿದರು. ಮಗನ ಸಾಧನೆ ತುಂಬಾನೇ ಖುಷಿ ಕೊಟ್ಟಿದೆ. ನಾವು ಬಾಡಿಗೆ ಮನೆಯಲ್ಲಿದ್ದು, ಆರ್ಥಿಕ ಸಮಸ್ಯೆಯೂ ಇದೆ. ಮಗನನ್ನು ಓದಿಸಲು ಮನಸ್ಸಿದೆ. ಆದರೆ ದುಡಿಮೆ ಇಲ್ಲದೇ ಆರ್ಥಿಕ ಸಮಸ್ಯೆಯಿಂದಾಗಿ ಸಾಧ್ಯವಾಗುತ್ತಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!