ಇನ್ನೇನು ಅಕ್ಟೋಬರ್ ಒಂದು ಬರಲಿದೆ ಅಕ್ಟೋಬರ್ 1 ನೇ ತಾರೀಖಿನಿಂದ ಬ್ಯಾಂಕ್ ಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಅನೇಕ ಬದಲಾವಣೆಗಳಾಗಲಿವೆ. ಹಾಗಾದರೆ ಯಾವ ಯಾವ ವಿಷಯಕ್ಕೆ ಸಂಬಂಧಿಸಿ ಯಾವೆಲ್ಲಾ ಬದಲಾವಣೆಗಳಾಗಲಿವೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಇನ್ನು ಮುಂದೆ ಬ್ಯಾಂಕ್ ಗೆ ಸಂಬಂಧಿಸಿ ಅನೇಕ ಬದಲಾವಣೆಗಳಾಗಲಿವೆ. ಇದೆ ಬರುವ ಅಕ್ಟೋಬರ್ 1, 2021 ರಿಂದ ಡಿಜಿಟಲ್ ಜೀವನ ಪ್ರಮಾಣಪತ್ರಗಳಿಗೆ ಸಂಬಂಧಿಸಿದ ನಿಯಮಗಳು ಬದಲಾಗಲಿವೆ. ಈ ನಿಯಮಗಳು 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅನ್ವಯಿಸಲಿದೆ. ಅಕ್ಟೋಬರ್‌ನಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ ಪಿಂಚಣಿದಾರರು ದೇಶದ ಎಲ್ಲಾ ಮುಖ್ಯ ಅಂಚೆ ಕಚೇರಿಗಳ ಜೀವನ್ ಪ್ರಮಾಣ ಕೇಂದ್ರದಲ್ಲಿ ತಮ್ಮ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವ ಸೌಲಭ್ಯವನ್ನು ಹೊಂದಲಿದ್ದಾರೆ,
ಈ ಕೆಲಸ ನಿರ್ವಹಿಸಲು ಕೊನೆಯ ದಿನಾಂಕ ನವೆಂಬರ್ 30, 2021 ಎಂದು ನಿಗದಿಪಡಿಸಲಾಗಿದೆ. ಮುಂದಿನ ತಿಂಗಳಿನಿಂದ ಮೂರು ಬ್ಯಾಂಕ್‌ಗಳು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC), ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅಲಹಾಬಾದ್ ಬ್ಯಾಂಕ್ ಗಳ ಹಳೆಯ ಚೆಕ್‌ಬುಕ್‌ಗಳು ಮತ್ತು MICR ಕೋಡ್‌ಗಳು ಅಮಾನ್ಯವಾಗುತ್ತವೆ.
ಬ್ಯಾಂಕ್ ವಿಲೀನವಾದ ಹಿನ್ನೆಲೆಯಲ್ಲಿ ಈ ಬದಲಾವಣೆಗಳನ್ನು ಘೋಷಿಸಲಾಗಿದೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಪಂಜಾಬ್ ನ್ಯಾಷನಲ್ ಬ್ಯಾಂಕಿನೊಂದಿಗೆ ವಿಲೀನಗೊಂಡಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಹಳೆಯ ಚೆಕ್ ಬುಕ್ ಮತ್ತು ಈಗಾಗಲೆ ಇರುವ ಎಂಐಸಿಆರ್ ಕೋಡ್ ಮತ್ತು ಐಎಫ್ ಎಸ್ ಸಿ ಕೋಡ್ ಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನ ಇತ್ತೀಚಿನ ಆದೇಶದ ಪ್ರಕಾರ ನಿಮ್ಮ ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್‌ನಿಂದ ಸ್ವಯಂ-ಡೆಬಿಟ್ ಸೌಲಭ್ಯವು ಕೆಲವು ಬದಲಾವಣೆಗಳಿಗೆ ಒಳಗಾಗಿದೆ.
ಎಲ್ಲಾ ಬ್ಯಾಂಕ್ ಗಳು ಹೆಚ್ಚುವರಿ ದೃಢೀಕರಣ ಕೈಗೊಳ್ಳುವಂತೆ ಅಪೆಕ್ಸ್ ಬ್ಯಾಂಕ್ ಆದೇಶಿಸಿದೆ ಅಂದರೆ ನಿಮ್ಮ ಮಾಸಿಕ ಯುಟಿಲಿಟಿ ಬಿಲ್ಲ್ ಗಳು ಅಥವಾ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ನಂತಹ ಮಾಸಿಕ ಸ್ವಯಂ-ಡೆಬಿಟ್ ವಹಿವಾಟು ಚಂದಾದಾರಿಕೆಗಳು ನಮ್ಮ ಅನುಮೋದನೆಯಿಲ್ಲದೆ ಹಾದು ಹೋಗುವುದಿಲ್ಲ. ಈ ಅಧಿಸೂಚನೆಯನ್ನು ಗ್ರಾಹಕರ ಪಾವತಿಗೆ 24 ಗಂಟೆಗಳ ಮುಂಚಿತವಾಗಿ ಸಂಬಂಧಿತ ಬ್ಯಾಂಕ್ ಮೂಲಕ ಕಳುಹಿಸಲಾಗುತ್ತದೆ. ಒಮ್ಮೆ ನೀವು ವಹಿವಾಟನ್ನು ಅನುಮೋದಿಸಿದರೆ ಹಣವನ್ನು ಖಾತೆಯಿಂದ ಡೆಬಿಟ್ ಮಾಡಲಾಗುತ್ತದೆ.
ಈ ಸೂಚನೆಯು SMS ಅಥವಾ ಇ-ಮೇಲ್ ರೂಪದಲ್ಲಿ ಬರುತ್ತದೆ. ಮ್ಯೂಚುವಲ್ ಫಂಡ್ ಹೂಡಿಕೆದಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಸೆಕ್ಯುರಿಟೀಸ್ ಮತ್ತು ಸೆಬಿ ಹೊಸ ನಿಯಮವನ್ನು ತಂದಿದೆ. ಈ ನಿಯಮವು ಅಸೆಟ್ ಅಂಡರ್ ಮ್ಯಾನೇಜ್‌ಮೆಂಟ್ (ಎಎಂಸಿ) ಅಂದರೆ ಮ್ಯೂಚುವಲ್ ಫಂಡ್ ಹೌಸ್‌ನಲ್ಲಿ ಕೆಲಸ ಮಾಡುವ ಕಿರಿಯ ಉದ್ಯೋಗಿಗಳಿಗೆ ಅನ್ವಯಿಸುತ್ತದೆ.
ಮ್ಯಾನೇಜ್‌ಮೆಂಟ್ ಕಂಪನಿಗಳ ಅಡಿಯಲ್ಲಿರುವ ಕಿರಿಯ ಉದ್ಯೋಗಿಗಳು ತಮ್ಮ ಒಟ್ಟು ಸಂಬಳದ ಶೇಕಡಾ 10 ನ್ನು ಆ ಮ್ಯೂಚುವಲ್ ಫಂಡ್‌ನ ಘಟಕಗಳಲ್ಲಿ ಅಕ್ಟೋಬರ್ 1, 2021 ರಿಂದ ಜಾರಿಗೆ ಬರುವಂತೆ ಹೂಡಿಕೆ ಮಾಡಬೇಕು. ಅವರ ಸಂಬಳದ ಶೇಕಡಾ 20ನ್ನು ಹೂಡಿಕೆ ಮಾಡಬೇಕು. ಈ ಹೂಡಿಕೆಯು ಲಾಕ್-ಇನ್ ಅವಧಿಯನ್ನು ಹೊಂದಿರುತ್ತದೆ. ದೆಹಲಿಯಲ್ಲಿ ಮುಂದಿನ ತಿಂಗಳಿನ ನವೆಂಬರ್ 16, 2021 ರವರೆಗೆ ಖಾಸಗಿ ಮದ್ಯದಂಗಡಿಗಳು ಮುಚ್ಚಲ್ಪಡುತ್ತವೆ. ಆ ಸಮಯದಲ್ಲಿ ಸರ್ಕಾರಿ ಅಂಗಡಿಗಳು ಮಾತ್ರ ಮದ್ಯ ಮಾರಾಟ ಮಾಡಲಿವೆ.
ಹೊಸ ಅಬಕಾರಿ ನೀತಿಯ ಅಡಿಯಲ್ಲಿ ರಾಜಧಾನಿಯನ್ನು 32 ವಲಯಗಳಾಗಿ ವಿಭಜಿಸುವ ಮೂಲಕ ಪರವಾನಗಿ ಹಂಚಿಕೆಯ ಪ್ರಕ್ರಿಯೆಯನ್ನು ಬದಲಾಯಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದರು. ಈ ನಿಯಮ ಬದಲಾವಣೆಯಂತೆ ಹೊಸ ಪಾಲಿಸಿಯ ಅಡಿಯಲ್ಲಿ ಬರುವ ಅಂಗಡಿಗಳಿಗೆ ಮಾತ್ರ ನವೆಂಬರ್ 17 ರಿಂದ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ಈ ರೀತಿ ಬ್ಯಾಂಕ್ ಹಾಗೂ ಇನ್ನಿತರ ಕೆಲವು ವಿಷಯಗಳಲ್ಲಿ ಬದಲಾವಣೆಗಳಾಗಿವೆ. ಅದರಂತೆ ನಾವು ನಮ್ಮ ದೈನಂದಿನ ಜೀವನದಲ್ಲಿ ಬದಲಾದ ವ್ಯವಸ್ಥೆಗೆ ಹೊಂದಿಕೊಳ್ಳಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430