ನಮ್ಮದು ಸನಾತನ ಹಿಂದೂ ಧರ್ಮ ನಮ್ಮ ಹಿಂದೂಧರ್ಮದಲ್ಲಿ ರಾಶಿ ಭವಿಷ್ಯ ಜಾತಕ ಇವುಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ ಮತ್ತು ಅವುಗಳನ್ನು ನಂಬುತ್ತಾರೆ. ಜಾತಕದಲ್ಲಿ ಏನಾದರೂ ದೋಷ ಕಂಡುಬಂದಾಗ ಪರಿಹಾರವನ್ನು ಮಾಡಿಸುತ್ತಾರೆ. ಸ್ನೇಹಿತರೆ ನಾವು ಇವತ್ತು ಕುಜ ದೋಷ ಎಂದರೇನು ಕುಜ ದೋಷಕ್ಕೆ ಯಾವ ರೀತಿಯ ಪರಿಹಾರವನ್ನು ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ. ಹಾಗೂ ಕುಜ ದೋಷದಿಂದ ಬಳಲುತ್ತಿರುವವರಿಗೆ ಜೀವನದಲ್ಲಿ ಯಾವ ಯಾವ ರೀತಿಯ ಸಮಸ್ಯೆಗಳು ಬರಬಹುದು ಯಾವ ಯಾವ ಸಂದರ್ಭದಲ್ಲಿ ಯಾವ ಯಾವ ರೀತಿಯಲ್ಲಿ ಅವರಿಗೆ ತೊಂದರೆಗಳು ಕಾಣಬಹುದು ಎಂಬುದರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
ಕುಜದೋಷ ಯಾವುದಾದರೂ ವ್ಯಕ್ತಿಗೆ ಮದುವೆ ಆಗಿಲ್ಲ ಎಂದರೆ ಅಥವಾ ಮಕ್ಕಳು ಆಗಿಲ್ಲ ಎಂದರೆ ಅಥವಾ ಉದ್ಯೋಗದಲ್ಲಿ ಬೇರೆ ಯಾವುದಾದರೂ ರೀತಿಯ ತೊಂದರೆಗಳು ಇದ್ದಲ್ಲಿ ಜೀವನದಲ್ಲಿ ಅಭಿವೃದ್ಧಿಯೇ ಇಲ್ಲದಿದ್ದಲ್ಲಿ ಅಥವಾ ಮದುವೆಯಾದ ಸ್ವಲ್ಪ ದಿನದಲ್ಲಿಯೇ ಸಂಗಾತಿ ಸಾವನ್ನಪ್ಪಿದರೆ ಮದುವೆ ನಿಶ್ಚಯವಾಗುತ್ತಿಲ್ಲ ಎಂದಲ್ಲಿ ಹಣಕಾಸಿನ ವಿಚಾರದಲ್ಲಿ ಪದೇಪದೇ ತೊಂದರೆಗಳು ಕಾಣಿಸುತ್ತಿದ್ದರೆ ಹೀಗೆ ಹತ್ತು ಹಲವು ತೊಂದರೆಗಳು ನಿಮ್ಮನ್ನು ಕಾಡುತ್ತಿದ್ದರೆ ಆಗ ಕೆಲವರು ಹೇಳುತ್ತಾರೆ ನಿನಗೆ ಜಾತಕದಲ್ಲಿ ಕುಜ ದೋಷ ಇರಬಹುದು ಜಾತಕವನ್ನು ತೋರಿಸಿಕೊ ಎಂದು. ಈ ಕುಜದೋಷ ಇದ್ದಾಗ ಈ ರೀತಿಯಾಗಿ ಹತ್ತು ಹಲವು ಸಮಸ್ಯೆಗಳಿಂದ ಬಳಲ ಬೇಕಾಗುತ್ತದೆ. ಹಾಗಾದರೆ ಕುಜದೋಷದಿಂದ ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಎನ್ನುವುದಾದರೆ ಕುಜದೋಷ ಎಂದರೆ ಏನು ಎಂಬುದನ್ನು ತಿಳಿದುಕೊಳ್ಳೋಣ.
ಕುಜ ಕು ಅಂದರೆ ಭೂಮಿ ಜ ಎಂದರೆ ಹುಟ್ಟು ಅಂದರೆ ಭೂಮಿಯಿಂದ ಹುಟ್ಟಿದವನು ಭೂಮಿಯ ಮಗ ಅದಕ್ಕೆ ಅವನನ್ನು ಭೌಮ ಎಂದು ಕರೆಯುತ್ತಾರೆ ಇದು ಕೆಂಪು ವರ್ಣದಲ್ಲಿ ಭೂಮಿಯಿಂದ ಹುಟ್ಟಿರುವಂತದ್ದು ಖಗೋಳಶಾಸ್ತ್ರವನ್ನು ನಮ್ಮ ಪೂರ್ವಿಕರು ತುಂಬಾ ಅದ್ಭುತವಾಗಿ ಅಧ್ಯಯನವನ್ನು ಮಾಡಿದ್ದಾರೆ ಆ ಕಾಲದಲ್ಲಿ ಟೆಲಿಸ್ಕೋಪ್ ಗಳು ಇರಲಿಲ್ಲ ಯಾವುದೇ ರೀತಿಯ ಉಪಕರಣಗಳು ಅಂದರೆ ಈಗಿನ ಕಾಲದ ಅತ್ಯಾಧುನಿಕ ಉಪಕರಣಗಳು ಆಗ ಇರಲಿಲ್ಲ ಅಂತಹ ಕಾಲಘಟ್ಟದಲ್ಲಿ ಇಂತಿಂತಹ ಗ್ರಹಗಳಲ್ಲಿ ಇಂತಿಂತಹ ಖನಿಜಾಂಶಗಳು ಅವುಗಳ ಸೈಜು ಅವು ಯಾವ ವರ್ಣದಲ್ಲಿ ಇದ್ದಾವೆ ಹೀಗೆ ಎಲ್ಲವನ್ನು ಗ್ರಂಥದಲ್ಲಿ ಬರೆದಿಟ್ಟಿದ್ದಾರೆ.
ಕುಜ ಗ್ರಹದ ಜಾತಕದಲ್ಲಿ ಇದು ಸ್ಥಾನಗಳಲ್ಲಿ ಸ್ಥಿತ ವಾಗುವುದರಿಂದ ಅಂದರೆ ಈ ಕುಜ ಏನಾದರೂ ನಿಮಗೆ ಲಗ್ನದಲ್ಲಿ ಅಥವಾ ಲಗ್ನದಿಂದ ದ್ವಿತೀಯಮನೆಯಲ್ಲಿ ಅಥವಾ ಲಗ್ನದಿಂದ ಚತುರ್ಥಮನೆಯಲ್ಲಿ ಹಾಗೂ ಲಗ್ನದಿಂದ ಸಪ್ತಮಮನೆಯಲ್ಲಿ ಅಥವಾ ಲಗ್ನದಿಂದ ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿ ಹೀಗೆ ಇಷ್ಟು ಸ್ಥಾನಗಳಲ್ಲಿ ಸ್ಥಿತವಾಗಿದ್ದರೇ ಅದನ್ನು ಕುಜ ದೋಷ ಎಂದು ಕರೆಯುತ್ತಾರೆ. ಅಂದರೆ ಕುಜ ಒಂದನೇ ಮನೆಯಲ್ಲಿ ಎರಡನೇ ಮನೆಯಲ್ಲಿ ನಾಲ್ಕನೇ ಮನೆಯಲ್ಲಿ ಎಂಟನೇ ಮನೆಯಲ್ಲಿ ಹನ್ನೆರಡನೇ ಮನೆಯಲ್ಲಿ ಹೀಗೆ ಇದ್ದಾಗ ಅವನು ತೊಂದರೆಯನ್ನು ಕೊಡುವವನಾಗಿರುತ್ತಾನೆ. ಬೇರೆ ಬೇರೆ ಸ್ಥಾನದಲ್ಲಿದ್ದಾಗ ಬೇರೆ ಬೇರೆ ರೀತಿಯ ತೊಂದರೆಗಳನ್ನು ಕೊಡುತ್ತಾನೆ.
ಕುಜ ಏನಾದರೂ ಲಗ್ನದಲ್ಲಿದ್ದರೆ ಅಂದರೆ ಒಂದನೇ ಮನೆಯಲ್ಲಿದ್ದಾಗ ಯಾವ ರೀತಿಯ ತೊಂದರೆ ಬರುತ್ತದೆ ಎಂದರೆ ಪದೇಪದೇ ದೇಹಕ್ಕೆ ಪೀಡೆ ಬರುವಂತದ್ದು ಅನಾರೋಗ್ಯ ಉಂಟಾಗುವ ಅಂತದ್ದು ಅಥವಾ ದೇಹದ ಯಾವುದಾದರೂ ಅಂಗಗಳು ಕತ್ತರಿಸಿ ಹೋಗುವಂತದ್ದು ಅಪಘಾತಗಳ ಆಗುವಂಥದ್ದು.ಇನ್ನು ಕುಜ ದ್ವಿತೀಯ ಸ್ಥಾನದಲ್ಲಿದ್ದಾಗ ಆ ವ್ಯಕ್ತಿಗೆ ಹಣಕಾಸಿನ ವಿಷಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಂಡುಬರುವುದಿಲ್ಲ ಅವನು ಎಷ್ಟೇ ದುಡಿದರೂ ಅವನ ಕೈಯಲ್ಲಿ ಹಣ ನೀಲ್ಲುವುದಿಲ್ಲ. ಸಂಪಾದನೆ ಆಗುತ್ತದೆ ಆದರೆ ಆದ ಸಂಪಾದನೆ ಒಂದು ಉಳಿಯುವುದಿಲ್ಲ ತೊಂದರೆ ಮೇಲೆ ತೊಂದರೆಗಳು ಬರುತ್ತ ಇರುತ್ತವೆ ದುಡ್ಡುಕಾಸಿನ ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಅದೇ ರೀತಿಯಾಗಿ ನಾಲ್ಕನೇ ಸ್ಥಾನದಲ್ಲಿದ್ದಾಗ ಪಿತ್ರಾರ್ಜಿತ ಆಸ್ತಿಯಿಂದ ಕಿರಿಕಿರಿಗಳು ಬರುವಂತದ್ದು ನಾಲ್ಕನೇ ಮನೆಯಲ್ಲಿದ್ದಾಗ ಸುಖಕ್ಕೆ ಕೊರತೆಯಾಗುತ್ತದೆ ಜೀವನದಲ್ಲಿ ನೆಮ್ಮದಿ ಇಲ್ಲದಿರುವಂತಹ ಜೀವನವನ್ನು ಅವರು ನಡೆಸಬೇಕಾಗುತ್ತದೆ ಹೀಗೆ ಅವರು ಹಿಂಸೆಗಳ ಮೇಲೆ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ. ಇದೇ ರೀತಿಯಾಗಿ ಏಳನೇ ಮನೆಯಲ್ಲಿ ಇದ್ದಂತಹ ಸಂದರ್ಭದಲ್ಲಿ ಕುಜದೋಷ ಪುರಿತನಾಗಿದ್ದಾಗ ಮದುವೆಗೆ ಸಂಬಂಧಿಸಿದ ಹಾಗೆ ತೊಂದರೆಗಳು ಕಾಣಿಸುತ್ತವೆ ಮದುವೆ ನಿಶ್ಚಯವಾಗುವುದಿಲ್ಲ ಅಥವಾ ಮದುವೆಯಾಗುವುದಕ್ಕೆ ತುಂಬಾ ಕಷ್ಟ ಪಡಬೇಕಾಗುತ್ತದೆ ಹಾಗೂ-ಹೀಗೂ ಮದುವೆಯಾದರೆ ಮದುವೆಯ ನಂತರ ಜೀವನದಲ್ಲಿ ನೆಮ್ಮದಿ ಎಂಬುದಿರುವುದಿಲ್ಲ ಗಂಡ-ಹೆಂಡತಿ ಯಾವಾಗಲೂ ಹಾವು-ಮುಂಗುಸಿ ಕಿತ್ತಾಡಿದ ಹಾಗೆ ಕಿತ್ತಾಡುತ್ತಿರುತ್ತಾರೆ.
ಇನ್ನು ಕುಜ ಎಂಟನೇ ಮನೆಗೆ ಬಂದಂತಹ ಸಂದರ್ಭದಲ್ಲಿ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಜೊತೆಗೆ ಮದುವೆಗೂ ಮುಂಚೆ ನಿಮಗೆ ಮದುವೆ ನಂತರ ನಿಮ್ಮ ಸಂಗಾತಿಗೆ ಪದೇಪದೇ ವಾಹನ ಅಪಘಾತ ಆಗುವಂಥದ್ದು ಚಾಕುವಿನಿಂದ ಅಥವಾ ಕಬ್ಬಿಣದ ವಸ್ತುಗಳಿಂದ ಪದೇಪದೇ ತೊಂದರೆ ಉಂಟಾಗುವ ಅಂತದ್ದು ಆಕಸ್ಮಿಕ ಘಟನೆಗಳು ನಡೆಯುವಂಥದ್ದು ಹೀಗೆ ಹತ್ತು ಹಲವು ರೀತಿಯಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ಹನ್ನೆರಡನೇ ಮನೆಯಲ್ಲಿ ಕುಜ ಇದ್ದಂತಹ ಸಂದರ್ಭದಲ್ಲಿ ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ
ಆ ವ್ಯಕ್ತಿಗೆ ವಿಕೃತ ವಾದಂತಹ ಲೈಂ ಗಿಕ ಭಾವನೆಗಳು ಇರುತ್ತದೆ ಯಾಕೆಂದರೆ ಹನ್ನೆರಡನೇ ಮನೆ ಶಯನ ಸ್ಥಾನ. ಕಾಮದ ಭಾವನೆಗಳು ಅಥವಾ ಲೈಂ ಗಿಕ ಭಾವನೆಗಳು ಅದು ಗಂಡಾಗಿರಲಿ ಅಥವಾ ಹೆಣ್ಣಾಗಲೀ ಪ್ರತಿಯೊಬ್ಬರಿಗೂ ಬರುವಂತದ್ದು ಸಹಜ ಕ್ರಿಯೆ ಆದರೆ ಹನ್ನೆರಡನೇ ಸ್ಥಾನದಲ್ಲಿ ಕುಜ ಇದ್ದಾಗ ಆ ವ್ಯಕ್ತಿಗೆ ವಿಪರೀತವಾದಂತಹ ಲೈಂಗಿಕ ಬಯಕೆಗಳು ವಿಪರೀತವಾದಂತಹ ಕಾಮಚೇಷ್ಟೆಗಳು ಹೀಗೆ ಇದರಿಂದಾಗಿ ಸಂಸಾರದಲ್ಲಿ ನೆಮ್ಮದಿ ಎಂಬುದಿರುವುದಿಲ್ಲ ಅಲ್ಲೋಲ ಕಲ್ಲೋಲ ಯಾವಾಗಲೂ ಕಲಹಗಳು ಉಂಟಾಗುತ್ತದೆ. ಅದೇ ರೀತಿ ಹನ್ನೆರಡನೇ ಮನೆಯಲ್ಲಿ ಕುಜ ಇದ್ದಾಗ ಆ ವ್ಯಕ್ತಿಗೆ ಅನೈತಿಕ ಸಂಬಂಧಗಳು ಇರುತ್ತವೆ. ಗ್ರಹಗತಿಗಳು ಈ ರೀತಿಯಾಗಿ ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಹೀಗೆ ಆಯಾ ಸ್ಥಾನದಲ್ಲಿದ್ದಾಗ ಕುಜ ಆಯಾ ರೀತಿಯ ಸಮಸ್ಯೆಗಳನ್ನು ಉಂಟು ಮಾಡುತ್ತಾನೆ.
ಹಾಗಾದರೆ ಕುಜದೋಷಕ್ಕೆ ಹೇಗೆ ಪರಿಹಾರ ಮಾಡಿಕೊಳ್ಳಬೇಕು ಎಂದರೆ ಕುಜ ದೋಷಕ್ಕೆ ತುಂಬಾ ಸರಳವಾಗಿ ಪರಿಹಾರ ಮಾಡಿಕೊಳ್ಳಬಹುದು. ಕುಜದೋಷ ಇರುವವರಿಗೆ ಕುಜದೋಷ ಇರುವವರನ್ನೇ ಮದುವೆ ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತದೆ ಎನ್ನುವುದು ಕೆಲವು ಸಿದ್ಧಾಂತಗಳ ಉಲ್ಲೇಖ. ಅದೇ ರೀತಿಯಲ್ಲಿ ನಾವು ಪರಿಹಾರವನ್ನು ಕಂಡುಕೊಳ್ಳುವಾಗ ಕುಜ ಯಾವ ಸ್ಥಾನದಲ್ಲಿ ಇದ್ದು ಸಮಸ್ಯೆಗಳನ್ನು ಉಂಟು ಮಾಡುತ್ತಿದ್ದಾನೆ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಬೇರೆ ಬೇರೆ ಸ್ಥಾನದಲ್ಲಿರುವ ಕುಜದೋಷಕ್ಕೆ ಬೇರೆ ಬೇರೆ ರೀತಿಯಾದ ಆದಂತಹ ದೋಷ ಪರಿಹಾರಗಳು ಇರುತ್ತದೆ. ಕೆಲವರು ಹೇಳುತ್ತಾರೆ ಕುಜದೋಷ ಇದ್ದಾಗ ಕುಂಭವಿವಾಹ ಮಾಡಿ ಕದಳಿ ವಿವಾಹ ಮಾಡಿ ಎಂದು ಆದರೆ ಇದು ಕುಜದೋಷ ಇರುವವರಿಗೆ ಅಲ್ಲ ಅದು ದ್ವಿಕಳತ್ರಯೋಗ ಇರುವವರಿಗೆ. ನಿಮಗೆ ಕುಜದೋಷ ಇದ್ದಲ್ಲಿ ಯಾವ ಯಾವ ಸ್ಥಾನಗಳಲ್ಲಿ ಯಾವ ಯಾವ ರೀತಿಯ ಸಮಸ್ಯೆ ಇದೆ ಎಂಬುದನ್ನು ತಿಳಿದುಕೊಂಡು ಅದಕ್ಕೆ ಪರಿಹಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೆಲವು ಬಾರಿ ಕುಜದೋಷದಲ್ಲಿ ಹುಟ್ಟಿದರು ಅವರು ಹುಟ್ಟಿರುವ ನಕ್ಷತ್ರದಿಂದಾಗಿ ಕುಜದೋಷಗಳು ಉಂಟಾಗುವುದಿಲ್ಲ. ಅದೇ ರೀತಿಯಾಗಿ ಚಂದ್ರನಿಂದ ಕುಜ ಕೇಂದ್ರಕ್ಕೆ ಬಂದಾಗ ಮತ್ತು ಶುಕ್ರನಿಂದ ಕೇಂದ್ರಕ್ಕೆ ಬಂದಾಗ ಕುಜ ದೋಷಪೂರಿತನಾಗಿ ಬಾದೆ ಕೊಡುವುದಿಲ್ಲ. ಹೀಗೆ ನಿಮ್ಮ ಜಾತಕದಲ್ಲಿ ಕುಜ ದೋಷ ಇದ್ದಾಗಲೂ ಅದು ತೊಂದರೆಗಳನ್ನು ಕೊಡುತ್ತದೆಯೋ ಇಲ್ಲವೋ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
ಕುಜ ದೋಷ ಇದ್ದಾಗ ನೀವು ದುರ್ಗಾಜಪಗಳನ್ನಾಗಲಿ ಅಥವಾ ದೇವಿ ಉಪಾಸನೆ ಯನ್ನಾಗಲಿ ದುರ್ಗಾ ಸಪ್ತಶತಿಯ ಪಾರಾಯಣ ಮಾಡಿಸುವುದಾಗಲಿ ಹೀಗೆ ಮಾಡುವುದರಿಂದ ಕುಜ ದೋಷ ನಿವಾರಣೆಯಾಗುತ್ತದೆ. ನಿಮಗೆ ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕುಜದೋಷವಿದ್ದರೂ ಈ ಪರಿಹಾರವನ್ನು ಮಾಡುವುದರಿಂದ ಕುಜ ದೋಷವನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದಾಗಿದೆ.