ಅಲಂಕಾರ ಪ್ರಿಯನಾದ ವಿಷ್ಣುವಿನ ಇನ್ನೊಂದು ರೂಪ ವೆಂಕಟೇಶ್ವರ. ತಿರುಪತಿಯ ತಿಮ್ಮಪ್ಪನಿಗೆ ಅಲಂಕಾರ ಮಾಡಲಾಗುತ್ತದೆ. ವೆಂಕಟೇಶ್ವರನ ಅಲಂಕಾರದಲ್ಲಿ ಪುನುಗು ಬೆಕ್ಕಿನ ತೈಲ ವಿಶೇಷ ಸ್ಥಾನ ಪಡೆದಿದೆ. ಹಾಗಾದರೆ ಪುನುಗು ಬೆಕ್ಕಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ವಿಷ್ಣುವಿನ ಅಲಂಕಾರವನ್ನು ನೋಡುವುದೆ ಕಣ್ಣಿಗೆ ಹಬ್ಬ. ಅಲಂಕಾರ ಪ್ರಿಯ ವಿಷ್ಣುವಿನ ಇನ್ನೊಂದು ರೂಪ ವೆಂಕಟೇಶ್ವರ. ಸರ್ವಾಲಂಕಾರ ಭೂಷಿತನಾಗಿ ಭಕ್ತರ ಎದುರು ನಿಂತಾಗ ಗೋವಿಂದಾ ಗೋವಿಂದಾ ಎಂಬ ನಾಮಸ್ಮರಣೆ ಜನ ಸಾಗರದಲ್ಲಿ ಕೇಳುತ್ತದೆ. ವೆಂಕಟೇಶ್ವರನ ಅಲಂಕಾರದಲ್ಲಿ ಸುಗಂಧ ದ್ರವ್ಯಕ್ಕೆ ಹೆಚ್ಚಿನ ಮಹತ್ವವಿದೆ.
ಪುನುಗು ಬೆಕ್ಕು ರಾತ್ರಿಯಿಡಿ ಎಚ್ಚರವಿರುವ ನಿಶಾಚರಿ ಪ್ರಾಣಿ. ಇದರ ದಾಯಾದಿ ಸಂಕುಲದ ಮರಬೆಕ್ಕು ಇಡಿ ರಾತ್ರಿ ಹೆಂಡ ಕುಡಿಯುತ್ತದೆ ಅಂದರೆ ಮರಹತ್ತಿ ಮರದಲ್ಲಿ ಸಿಗುವ ದ್ರವ್ಯವನ್ನು ಸೇವಿಸುತ್ತದೆ ಹಾಗೂ ಹಗಲಿಡಿ ನಿದ್ರೆ ಮಾಡುತ್ತದೆ. ಈ ಎರಡು ಬೆಕ್ಕುಗಳು ಸದಾ ಕಚ್ಚಾಡುತ್ತಲೆ ಇರುತ್ತದೆ. ಪುನುಗು ಬೆಕ್ಕು ರಾತ್ರಿ ಇಡಿ ಹೊಂಚು ಹಾಕುತ್ತಾ ಬೇಟೆಯಾಡುತ್ತದೆ. ಈ ಬೆಕ್ಕು ನೋಡಲು ಮುಂಗುಸಿಯಂತೆ ಕಾಣುತ್ತದೆ. ದಟ್ಟಕಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಪುನುಗು ಬೆಕ್ಕು ಈಗ ಹವಾಮಾನ ವೈಪರೀತ್ಯದಿಂದ ಅಳಿವಿನಂಚಿನಲ್ಲಿವೆ ಆದ್ದರಿಂದಲೆ ಅರಣ್ಯ ಇಲಾಖೆ ಈ ಪ್ರಾಣಿಯ ಮೇಲೆ ನಿಗಾ ಇಟ್ಟಿದೆ. ಇಂಡೋನೇಷ್ಯಾ, ಮಲೇಶಿಯಾ ದೇಶಗಳಲ್ಲಿ ಈ ಬೆಕ್ಕಿಗೆ ಹೆಚ್ಚಿನ ಬೇಡಿಕೆ ಇದೆ.
ಈ ಬೆಕ್ಕಿಗೆ ಕಾಫಿ ಹಣ್ಣನ್ನು ತಿನ್ನಿಸಿ ಜೀರ್ಣವಾಗದೆ ಹೊರ ಬರುವ ಬೀಜವನ್ನು ಕುಟ್ಟಿ ಪುಡಿ ಮಾಡಿ ತಯಾರಿಸಿದ ಕಾಫಿಗೆ ಭಾರಿ ಬೆಲೆ ಇದೆ. ಈ ಕಾಫಿಗೆ ಹೊರದೇಶಗಳಲ್ಲಿ ಒಂದು ಲೋಟ ಕಾಫಿಗೆ ಒಂದುವರೆ ಸಾವಿರದಿಂದ ಎರಡು ಸಾವಿರ ರೂಪಾಯಿ ಬೆಲೆ ಇದೆ. ಈ ಕಾಫಿಯನ್ನು ಕುಡಿಯುವುದರಿಂದ ಆರೋಗ್ಯ ವರ್ಧಕವಾಗಿ ಕೆಲಸ ಮಾಡುತ್ತದೆ. ವೆಂಕಟೇಶ್ವರನಿಗೆ ಅಲಂಕಾರ ಮಾಡಲು ಪುನುಗು ಬೆಕ್ಕಿನ ತೈಲ ಬೇಕು. ಪಂಚ ಕರ್ಪೂರ, ಏಲಕ್ಕಿ, ಲವಂಗಗಳನ್ನು ಸುಗಂಧ ದ್ರವ್ಯವಾಗಿ ಬಳಸಿದರೂ ಪುನುಗು ಬೆಕ್ಕಿನ ತೈಲ ಮುಖ್ಯವಾಗಿದೆ.
ಶುಕ್ರವಾರದ ದಿನ ಅಭಿಷೇಕವಾದ ನಂತರ ನಡೆಯುವ ತಿರುವಾಭರಣ ಅಲಂಕಾರಕ್ಕೂ ಮುನ್ನ ಪಂಚ ಕರ್ಪೂರದಿಂದ ನಾಮ ಧಾರಣೆ ಅಂದರೆ ಪಂಚ ಕರ್ಪೂರದಿಂದ ಎರಡು ಬಿಳಿ ನಾಮಗಳನ್ನು ಎಳೆದು ಮಧ್ಯೆ ಕಸ್ತೂರಿ ತಿಲಕವನ್ನು ಇಡಲಾಗುತ್ತದೆ. ನಂತರ ಪುನುಗು ಬೆಕ್ಕಿನ ತೈಲವನ್ನು ಹಚ್ಚಲಾಗುತ್ತದೆ ಇದರಿಂದ ವೆಂಕಟೇಶ್ವರನ ಮುಖ ಪಳಪಳ ಹೊಳೆಯುತ್ತದೆ. ದೇವರ ಮುಂದಿರುವ ದೀಪದ ಕಾಂತಿಗೂ ಪುನುಗು ಬೆಕ್ಕಿನ ತೈಲ ಹಚ್ಚಿದ ನಂತರ ಸ್ವಾಮಿಯ ಮುಖ ನೋಡುವುದೆ ಚೆಂದ.
ತಿರುಮಲದಲ್ಲಿ ಪುನುಗು ಬೆಕ್ಕುಗಳನ್ನು ಸಾಕಲಾಗಿದೆ. ಪುನುಗು ಬೆಕ್ಕಿನ ತೈಲವನ್ನು ಪ್ರಾಣಿಗೆ ಹಿಂಸೆ ಮಾಡುವುದರಿಂದ ತೆಗೆಯುವುದಿಲ್ಲ, ಪ್ರಕೃತಿ ಸಹಜವಾಗಿ ತೆಗೆಯಲಾಗುತ್ತದೆ. ಬಹಳ ಉಷ್ಣತೆ ಇದ್ದಾಗ ಪುನುಗು ಬೆಕ್ಕುಗಳು ಮರಕ್ಕೆ ತನ್ನ ಮೈಯನ್ನು ಉಜ್ಜಿಕೊಳ್ಳುತ್ತದೆ ಆಗ ಒಂದು ರೀತಿಯ ತೈಲದಂತಹ ದ್ರವ್ಯ ಮರಕ್ಕೆ ಅಂಟಿಕೊಳ್ಳುತ್ತದೆ ಆದ್ದರಿಂದ ಪುನುಗು ಬೆಕ್ಕಿನ ಮುಂದೆ ಗಂಧದ ಮರ ಅಥವಾ ಚಂದನ ಮರದ ತುಂಡನ್ನು ಇಡಲಾಗುತ್ತದೆ.
ಒಂದು ಸಲಕ್ಕೆ ಎರಡರಿಂದ ಮೂರು ಗ್ರಾಮ ತೈಲ ಸಿಗುತ್ತದೆ. ತೈಲವನ್ನು ಮರದಿಂದ ಪ್ರತ್ಯೇಕಿಸಿ ಸಂಸ್ಕರಿಸಿ ವಾರಕ್ಕೊಮ್ಮೆ ನಡೆಯುವ ಅಭಿಷೇಕದ ನಂತರ ಸ್ವಾಮಿಗೆ ಹಚ್ಚಲಾಗುತ್ತದೆ. ಈ ಪದ್ಧತಿಯು ಸಾವಿರಾರು ವರ್ಷಗಳಿಂದ ನಡೆಯುತ್ತ ಬಂದಿದೆ. ಪುನುಗು ಬೆಕ್ಕಿನ ತೈಲದಲ್ಲಿ 64 ಪುಷ್ಪಗಳ ದ್ರವ್ಯವಿರುತ್ತದೆ ಇದರಿಂದ ಈ ತೈಲವನ್ನು ಅರ್ಪಿಸಿದರೆ 64 ಹೂವುಗಳನ್ನು ಅರ್ಪಿಸಿದಷ್ಟೆ ಪುಣ್ಯ ಬರುತ್ತದೆ ಎಂದು ಶಾಸ್ತ್ರದಲ್ಲಿ ಉಲ್ಲೇಖವಿದೆ. ಈ ಸೇವೆಗಾಗಿ ಅಂದಿನ ವಿಜಯನಗರ ಸಾಮ್ರಾಟ ಶ್ರೀ ಕೃಷ್ಣದೇವರಾಯ ಒಂದು ಸಹಸ್ರ ಚಿನ್ನದ ವರಹಗಳನ್ನು ಮುಡುಪಾಗಿಟ್ಟಿದ್ದಾರೆ. ಈ ದುಡ್ಡಿನಲ್ಲಿ ಪುನುಗು ಬೆಕ್ಕಿನ ಸಾಕಾಣಿಕೆ, ನಿರ್ವಹಣೆ, ತೈಲ ಸಂಗ್ರಹಣೆ ಮುಂತಾದ ಕೆಲಸಗಳನ್ನು ಮಾಡಲಾಗುತ್ತಿತ್ತು.
ಪುನುಗು ಬೆಕ್ಕಿನ ತೈಲ ಆಯುರ್ವೇದಿಕ್ ಗುಣವನ್ನು ಕೂಡ ಹೊಂದಿದೆ. ಪಿತ್ತ ಶಾಮಕವಾಗಿ ಇದು ಕೆಲಸ ಮಾಡುತ್ತದೆ, ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ. ತಿಮ್ಮಪ್ಪನ ಗರ್ಭಗುಡಿಗೆ ಕಿಟಕಿಗಳಿಲ್ಲ ಹೊರಗಿನ ಪಂಚಭೂತಗಳಿಂದ ಶ್ರೀನಿವಾಸನ ಮೂರ್ತಿಗೆ ಯಾವುದೇ ಮಾಲಿನ್ಯವಾಗಬಾರದು ಎಂದು ಈ ನಿಯಮವನ್ನು ಪಾಲಿಸಲಾಗುತ್ತಿದೆ. ಸದಾಕಾಲ ಪೂಜೆ ನಡೆಯುತ್ತದೆ, ದೂಪ ದೀಪಗಳ ಉಷ್ಣತೆ ಸದಾಕಾಲ ಇರುತ್ತದೆ. ಸ್ವಾಮಿಗೆ ಉಷ್ಣ ಹೆಚ್ಚಾಗದೆ ಇರಲಿ ಎಂದು ಚಂದನವನ್ನು ಲೇಪಿಸಲಾಗುತ್ತದೆ ಮತ್ತು ಪುನುಗು ಬೆಕ್ಕಿನ ತೈಲವನ್ನು ಹಚ್ಚಲಾಗುತ್ತದೆ. ಸ್ವಾಮಿ ವೆಂಕಟೇಶ್ವರ ಎಲ್ಲರನ್ನೂ ಕಾಪಾಡಲಿ.
ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430