ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಕೊರೊನಾ ನಡುವೆಯೇ ವಿವಾಹವಾದರು. ಬಿಡದಿ ಬಳಿಯ ಫಾರ್ಮ್ ಹೌಸ್‌ನಲ್ಲಿ ಆಪ್ತ ಕುಟುಂಬ ವರ್ಗದ ಸಮ್ಮುಖದಲ್ಲಿ ನಿಖಿಲ್-ರೇವತಿಯ ವಿವಾಹ ನಡೆಯಿತು. ಮದುವೆ ನಂತರ ಕೆಲ ಕಾಲ ಬಿಡದಿಯಲ್ಲಿಯೇ ಈ ಜೋಡಿ ವಾಸವಿದ್ದರು. ಬಿಡದಿ ಸಮೀಪ ಜಮೀನಿನಲ್ಲಿ ಕೃಷಿ ಆರಂಭಿಸಿದ್ದರು. ಜೊತೆಗೆ ಹೊಸ ಮನೆ ನಿರ್ಮಾಣ ಕಾರ್ಯವನ್ನೂ ಆರಂಭಿಸಿದ್ದರು ನಿಖಿಲ್ ಕುಮಾರಸ್ವಾಮಿ. ಪರಸ್ಪರ ಅನ್ಯೋನ್ಯವಾಗಿರುವ ನಿಖಿಲ್-ರೇವತಿ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿ ಜೋಡಿಗಳಲ್ಲೊಂದು. ಈಗ ಈ ಸಿಲೆಬ್ರೆಟಿ ಜೋಡಿಗೆ ಮಗುವಿನ ಆಗಮನದ ದಿನ ಹತ್ತಿರವಾಗುತ್ತಿದ್ದು ಅದ್ಧೂರಿಯಾಗಿ ಸೀಮಂತ ಶಾಸ್ತ್ರವನ್ನು ಮಾಡಲಾಗಿದೆ. ಈ ಕುರಿತು ವಿವರವಾಗಿ ಈ ಲೇಖನದಲ್ಲಿ ನೋಡೋಣ.
ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ತಂದೆ ಆಗುವ ನಿರೀಕ್ಷೆಯಲ್ಲಿದ್ದಾರೆ. ನಿಖಿಲ್ ಹಾಗೂ ರೇವತಿ ಮಗುವಿನ ನಿರೀಕ್ಷೆಯಲ್ಲಿದ್ದು, ಕೆಲವೇ ತಿಂಗಳಲ್ಲಿ ದೇವೇಗೌಡರ ಕುಟುಂಬಕ್ಕೆ ಪುಟ್ಟ ಮಗುವಿನ ಆಗಮನವಾಗಲಿದೆ. ತಾಯಿಯಾಗುತ್ತಿರುವ ರೇವತಿಗೆ ಇಂದು ಸೀಮಂತ ಶಾಸ್ತ್ರ ಮಾಡಲಾಗುತ್ತಿದೆ. ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿಯೇ ಮಾಡುತ್ತಿದ್ದಾರೆ
ನಿಖಿಲ್ ಕುಮಾರಸ್ವಾಮಿ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಮಾನ್ವಿ ಕನ್ವೆನ್ಷನ್ ಸೆಂಟರ್‌ನಲ್ಲಿ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ದೇವೇಗೌಡರ ಕುಟುಂಬದ ಸಂಬಂಧಿಗಳು, ನಿಖಿಲ್ ಹಾಗೂ ರೇವತಿಯ ಗೆಳೆಯರು, ಆಪ್ತರಿಗಷ್ಟೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಕೆಲವು ತಿಂಗಳ ಹಿಂದೆಯೇ ರೇವತಿ-ನಿಖಿಲ್ ಪೋಷಕರಾಗುತ್ತಿರುವ ಸುದ್ದಿ ಹರಡಿತ್ತು. ಸ್ವತಃ ಕುಮಾರಸ್ವಾಮಿ ಅವರೇ ಈ ವಿಷಯವನ್ನು ಮೊದಲಿಗೆ ಮಾಧ್ಯಮಗಳಿಗೆ ತಿಳಿಸಿದ್ದರು. ನಂತರ ನಿಖಿಲ್ ಕುಮಾರಸ್ವಾಮಿ ಸಹ ಈ ಸುದ್ದಿಯನ್ನು ಧೃಡಪಡಿಸಿದ್ದರು.
ನಿಖಿಲ್ ಕುಮಾರಸ್ವಾಮಿ ಸದ್ಯ ಸಿನಿಮಾ ಜೊತೆಗೆ ರಾಜಕೀಯದಲ್ಲಿಯೂ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟ. ನಿಖಿಲ್ ಅವರು ಇದೀಗ ತಮ್ಮ ಮಡದಿಯ ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ನೆರವೇರಿಸಿದ್ದು ಸಂತೋಷ ಹಂಚಿಕೊಂಡಿದ್ದಾರೆ. ಜೂನ್ ತಿಂಗಳಿನಲ್ಲಿ ರೇವತಿ ಅವರ ಹುಟ್ಟುಹಬ್ಬದ ದಿನ ತಮ್ಮ ಕುಟುಂಬಕ್ಕೆ ಮೊಮ್ಮಗುವಿನ ಆಗಮನವಾಗುತ್ತಿರುವ ವಿಚಾರ ತಿಳಿಸಿ ಕುಮಾರಸ್ವಾಮಿ ಅವರು ಸಂತೋಷ ಹಂಚಿಕೊಂಡಿದ್ದರು.
ಆದರೆ ನಿಖಿಲ್ ಅವರಾಗಲಿ ರೇವತಿ ಅವರಾಗಲಿ ಹೊರಗೆಲ್ಲೂ ವಿಚಾರ ತಿಳಿಸಿರಲಿಲ್ಲ. ಮಡದಿಯ ಹುಟ್ಟುಹಬ್ಬದ ದಿನ ವಿಶೇಷ ಮಕ್ಕಳ ಆಶ್ರಮಕ್ಕೆ ಆಗಮಿಸಿ ಅವರಿಗೆ ಬಟ್ಟೆ ಹಾಗೂ ಊಟವನ್ನು ನೀಡುವ ಸಂದರ್ಭದಲ್ಲಿ ರೇವತಿ ಅವರು ಗರ್ಭಿಣಿ ಎಂಬ ವಿಚಾರ ತಿಳಿದಿದ್ದು ಕುಮಾರಸ್ವಾಮಿ ಅವರು ಈ ಬಗ್ಗೆ ಮಾದ್ಯಮದ ಜೊತೆ ತಮ್ಮ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗುತ್ತಿರುವುದು ನಿಜ.
ಸೊಸೆ ರೇವತಿ ಅವರು ಗರ್ಭಿಣಿಯಾಗಿದ್ದು ಕೆಲವೇ ತಿಂಗಳಲ್ಲಿ ಮೊಮ್ಮಗುವಿನ ಆಗಮನವಾಗಲಿದೆ ಎಂದಿದ್ದರು. ಇನ್ನು ಕೆಲ ದಿನಗಳ ನಂತರ ನಿಖಿಲ್ ಅವರು ಸಹ ರಾಜಕೀಯ ಸಭೆಯೊಂದರಲ್ಲಿ ಭಾಗವಹಿಸಿದ ಸಮಯದಲ್ಲಿ ಮಾದ್ಯಮದ ಜೊತೆ ಮಾತನಾಡಿ ವಿಚಾರವನ್ನು ಖಚಿತ ಪಡಿಸಿ ಸಂತೋಷ ಹಂಚಿಕೊಂಡಿದ್ದರು. ನಿಖಿಲ್ ಅವರು ಆಗ ಸದ್ಯದಲ್ಲಿಯೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದಷ್ಟೇ ಹೇಳಿ ಸುಮ್ಮನಾಗಿದ್ದರು. ಸಧ್ಯ ರೇವತಿ ಅವರು ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದು ಮಡದಿಯ ಸೀಮಂತ ಶಾಸ್ತ್ರವನ್ನು ಖುದ್ದು ನಿಖಿಲ್ ಅವರೇ ಎಲ್ಲಾ ತಯಾರಿ ನಡೆಸಿ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನೆರವೇರಿಸಿದ್ದಾರೆ.
ಕಳೆದ ವರ್ಷ ಏಪ್ರಿಲ್ ಹದಿನೇಳರಂದು ನಿಖಿಲ್ ಹಾಗೂ ರೇವತಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಅದ್ಧೂರಿಯಾಗಿ ರಾಮನಗರದ ಜನಗಳ ನಡುವೆ ನಡೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದ ರಾಮನಗರದ ತೋಟದ ಮನೆಯಲ್ಲಿ ಸರಳವಾಗಿ ಕುಟುಂಬದ ಕೆಲವೇ ಸದಸ್ಯರ ನಡುವೆ ನೆರವೇರಿತ್ತು. ನಂತರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ಅದ್ಧೂರಿಯಾಗಿ ಅರತಕ್ಷತೆ ನೆರವೇರಿಸುವ ಯೋಜನೆ ಮಾಡಿದ್ದರು. ಆದರೆ ಕಳೆದ ಒಂದೂವರೆ ವರ್ಷದಿಂದ ಅಂತಹ ಯಾವುದೇ ಸಂದರ್ಭ ಒದಗಿ ಬಾರಲಿಲ್ಲ.
ಆದರೀಗ ವರ್ಷದ ಬಳಿಕ ನಿಖಿಲ್ ಅವರು ತಂದೆಯಾಗುವ ಸಂಭ್ರಮದಲ್ಲಿದ್ದು ಮಡದಿಯ ಸೀಮಂತವನ್ನು ಕೆಲವೇ ಜನರ ನಡುವೆಯಾದರೂ ಸಹ ಅದ್ಧೂರಿಯಾಗಿ ರೇವತಿ ಅವರ ಕನಸಿನಂತೆ ನೆರವೇರಿಸಿದ್ದಾರೆ. ಇನ್ನು ಇತ್ತ ರೇವತಿ ಅವರ ಕುಟುಂಬ ಹಾಗೂ ರಾಜಕೀಯದ ಕೆಲ ಮುಖಂಡರು ಜೆ ಡಿ ಎಸ್ ಪಕ್ಷದ ಶರವಣ, ಸಾ ರಾ ಮಹೇಶ್ ಸೇರಿದಂತೆ ಇನ್ನೂ ಅನೇಕ ನಾಯಕರು. ಮುನಿರತ್ನ ಅವರು ಹಾಗೂ ಇನ್ನಿತರ ಸಿನಿಮಾ ಮಂದಿ ಹಾಗೂ ನಿಖಿಲ್ ಮತ್ತು ರೇವತಿ ಅವರ ಆಪ್ತ ಸ್ನೇಹಿತರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿ ಮಗುವಿಗೆ ಶುಭ ಹಾರೈಸಿದರು.
ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430