ಸ್ವಂತ ಸೂರು ಬೇಕೆಂಬ ಆಸೆ ಯಾರಿಗಿಲ್ಲ ಹೇಳಿ? ಆದ್ರೆ ಬೆಂಗಳೂರಿನಂತಹ ಮಹಾನಗರದಲ್ಲಿ ಫ್ಲ್ಯಾಟ್ ಖರೀದಿಸೋದು ಅಥವಾ ಮನೆ ಕಟ್ಟಿಕೊಳ್ಳೋದು ಅಷ್ಟು ಸುಲಭದ ಕೆಲಸವಲ್ಲ. ಭೂಮಿ ಬೆಲೆ ಗಗನಕ್ಕೇರಿರೋವಾಗ ಮನೆ ಕೊಂಡುಕೊಳ್ಳೋದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ದುಬಾರಿ ಕನಸೇ ಸರಿ. ನಗರದ ಜೀವನಶೈಲಿಯಲ್ಲಿ ತಿಂಗಳ ವೇತನದಲ್ಲಿ ಒಂದಿಷ್ಟು ಉಳಿತಾಯ ಮಾಡೋದೆ ಕಷ್ಟ. ಹೀಗಾಗಿ ಮನೆ ಕೊಂಡುಕೊಳ್ಳೋರು ಬ್ಯಾಂಕ್‍ನಿಂದ ಸಾಲ ಮಾಡೋದು ಅನಿವಾರ್ಯ. ಇಂಥವರ ಸಾಲದ ಹೊರೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (ಪಿಎಂಎವೈ-ಯು) ಜಾರಿಗೊಳಿಸಿದೆ.

2015ರಲ್ಲಿ ಪ್ರಾರಂಭಗೊಂಡ ಪಿಎಂಎವೈ-ಯು ಅಡಿಯಲ್ಲಿ ಮನೆ ಖರೀದಿಸಲು ಬಯಸೋ ಮಧ್ಯಮ ಆದಾಯ ವರ್ಗ (ಎಂಐಜಿ)ಕ್ಕೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ಸೌಲಭ್ಯವನ್ನು ನೀಡಲು ಸರ್ಕಾರ ಅನುಮೋದನೆ ನೀಡಿತ್ತು. ಅದರ ಪ್ರಕಾರ ಈಗ ಪಿಎಂ ಅವಾಜ್ ಯೋಜನೆ ಅಡಿಯಲ್ಲಿ 16,488 ಮನೆ ನಿರ್ಮಾಣಕ್ಕೆ ಅನುಮೋದನೆ ದೊರಕಿದ್ದು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಇದರ ಕುರಿತಾಗಿ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಹಾಗೂ ಹೇಗೆ ಅರ್ಜಿ ಸಲ್ಲಿಸಬಹುದು ಎನ್ನುವ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಈ ಹಿಂದೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಪ್ರಯೋಜನವು ಬಡ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಈಗ ಗೃಹ ಸಾಲದ  ಮೊತ್ತವನ್ನು ಹೆಚ್ಚಿಸುವ ಮೂಲಕ ಮಧ್ಯಮ ವರ್ಗದವರಿಗೂ ಅದರ ಲಾಭವನ್ನು ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ  (PMAY-U) ಅಡಿಯಲ್ಲಿ, ಕೇಂದ್ರ ಸರ್ಕಾರವು ನಗರ ಪ್ರದೇಶಗಳಲ್ಲಿ 16,488 ಮನೆಗಳ ನಿರ್ಮಾಣದ ಪ್ರಸ್ತಾಪಕ್ಕೆ ಹಸಿರು ನಿಶಾನೆ ತೋರಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೇಂದ್ರ ಸರ್ಕಾರವು ಮನೆಯಿಲ್ಲದವರಿಗೆ ಈ ಮೂಲಕ ಮನೆಗಳನ್ನು ನಿರ್ಮಿಸಿ ಕೊಡುತ್ತಿದೆ. ಈ ಯೋಜನೆಯಲ್ಲಿ, ಸಾಲದ ಮೇಲೆ ಮನೆ ಅಥವಾ ಫ್ಲಾಟ್ ಖರೀದಿಸುವ ಜನರಿಗೆ ಸಬ್ಸಿಡಿ ಸಹ ನೀಡಲಾಗುತ್ತದೆ.

ಈ ನಿರ್ಧಾರವನ್ನು ಸರ್ಕಾರದ ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿಯ 54 ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಸಭೆಯಲ್ಲಿ ಭಾಗವಹಿಸಿದ್ದವು. ಹಾಗಾದರೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗಿರುತ್ತದೆ ಎಂದು ನೋಡುವುದಾದರೆ, ಮೊದಲಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು, ನಿಮ್ಮ ಮೊಬೈಲ್‌ನಿಂದ ಸರ್ಕಾರಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಲಾಗಿನ್ ಐಡಿಯನ್ನು ರಚಿಸಬೇಕು.

ಈಗ ಈ ಅಪ್ಲಿಕೇಶನ್ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಬಾರಿ ಪಾಸ್ವರ್ಡ್ ಕಳುಹಿಸುತ್ತದೆ. ನಂತರ ಇದರ ಸಹಾಯದಿಂದ ಲಾಗಿನ್ ಆಗಬೇಕು. ನಂತರ ಅಗತ್ಯವಿರುವ ಮಾಹಿತಿಯನ್ನು ನಮೂದಿಸಬೇಕು. PMAY G ಅಡಿಯಲ್ಲಿ ಮನೆ ಪಡೆಯಲು ಅರ್ಜಿ ಸಲ್ಲಿಸಿದ ನಂತರ, ಕೇಂದ್ರ ಸರ್ಕಾರ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ. ಇದರ ನಂತರ ಫಲಾನುಭವಿಗಳ ಅಂತಿಮ ಪಟ್ಟಿಯನ್ನು PMAYG ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. 

ಯೋಜನೆಯ ಲಾಭವನ್ನು ಯಾರು ಪಡೆಯುತ್ತಾರೆ ಎಂದು ನೋಡುವುದಾದರೆ, ಆವಾಸ್ ಅಂದರೆ ಮನೆ. ಈ ಯೋಜನೆಯ ಮೂಲ ಉದ್ದೇಶ ಎಲ್ಲರಿಗೂ ಸೂರು ಕಲ್ಪಿಸೋದು. ಹೀಗಾಗಿ ಯಾರಿಗೆ ವಾಸಿಸಲು ಸ್ವಂತ ಸೂರಿಲ್ಲವೋ ಅವರು ಈ ಯೋಜನೆಯ ಫಲಾನುಭವಿಯಾಗಬಹುದು. ಗಮನಿಸಬೇಕಾದ ಸಂಗತಿಯೆಂದರೆ, ಈ ಹಿಂದೆ ಪ್ರಧಾನಮಂತ್ರಿ ಆವಾಸ್ ಯೋಜನೆಯ (PMAY) ಪ್ರಯೋಜನವು ಬಡ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು.

ಈಗಾಗಲೇ ಮನೆ ಹೊಂದಿರೋರು ಅಥವಾ ಅವರ ಕುಟುಂಬದ ಇತರ ಸದಸ್ಯರ ಹೆಸರಲ್ಲಿ ಮನೆಯಿದ್ದರೆ ಅಂಥವರಿಗೆ ಪಿಎಂಎವೈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.ಫಲಾನುಭವಿ ಕುಟುಂಬ ಗಟ್ಟಿಮುಟ್ಟಾದ ಮನೆ ಹೊಂದಿರಬಾರದು ಹಾಗೂ ಆ ಕುಟುಂಬ ಈ ತನಕ ಭಾರತ ಸರ್ಕಾರದ ಯಾವುದೇ ವಸತಿ ಯೋಜನೆಯ ಪ್ರಯೋಜನ ಪಡೆದಿರಬಾರದು’ ಎಂಬ ಸ್ಪಷ್ಟ ನಿಯಮವನ್ನು ಈ ಯೋಜನೆ ಹೊಂದಿದೆ. ಆದರೆ, ಈಗ ಗೃಹ ಸಾಲದ ಮೊತ್ತವನ್ನು ಹೆಚ್ಚಿಸುವ ಮೂಲಕ ಮಧ್ಯಮ ವರ್ಗದವರಿಗೂ ಅದರ ಲಾಭವನ್ನು ನೀಡಲಾಗುತ್ತಿದೆ.

ಈ ಹಿಂದೆ, ಪಿಎಂಎವೈನಲ್ಲಿ ಗೃಹ ಸಾಲದ ಮೊತ್ತವು 3 ರಿಂದ 6 ಲಕ್ಷದವರೆಗೆ ಇತ್ತು, ಅದರ ಮೇಲೆ ಬಡ್ಡಿ ಮೇಲೆ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ, ಈಗ ಅದನ್ನು 8 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇನ್ನೂ ಈ ಯೋಜನೆಯ ವ್ಯಾಪ್ತಿಯನ್ನು ವಾರ್ಷಿಕ ಆದಾಯವನ್ನು 3 ಲಕ್ಷಕ್ಕೆ ನಿಗದಿಪಡಿಸಲಾಗಿದೆ. LIG ಯ ವಾರ್ಷಿಕ ಆದಾಯವು 3 ಲಕ್ಷದಿಂದ 6 ಲಕ್ಷದವರೆಗೆ ಇರಬೇಕು. ಅದೇ ಸಮಯದಲ್ಲಿ, ಈಗ 12 ಮತ್ತು 18 ಲಕ್ಷದವರೆಗೆ ವಾರ್ಷಿಕ ಆದಾಯವಿರುವ ಜನರು ಕೂಡ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. 

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!