ಪುದಿನ ಹಲವು ಸೊಪ್ಪುಗಳ ಜಾತಿಗೆ ಸೇರಿದ್ದು ಇದರಲ್ಲಿ ಹತ್ತಾರು ಆರೋಗ್ಯಕಾರಿ ಲಾಭಗಳನ್ನು ಪಡೆಯಬಹುದಾಗಿದೆ, ಮನೆಯಲ್ಲಿ ಪುದಿನ ಇದ್ರೆ ಹೇಗೆಲ್ಲ ಸಹಕಾರಿ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ಬನ್ನಿ. ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ.
ಪುದಿನ ಸೊಪ್ಪಿನ ಕಷಾಯ ತಯಾರಿಸಿ ಸೇವಿಸಿದರೆ ಗಂಟಲು ಒಡೆದಿರುವುದು ಶೀಘ್ರವೇ ಗುಣವಾಗುವದು, ಇನ್ನು ಅಜೀರ್ಣ ಹೊಟ್ಟೆನೋವು, ಹೊಟ್ಟೆ ಉಬ್ಬರ ಇದ್ದರೆ ಪುದಿನ ಸೊಪ್ಪಿನ ಟೀ ತಯಾರಿಸಿ ದಿನಕ್ಕೆ ಎರಡು ಬಾರಿ ಕುಡಿದರೆ ವಾಸಿಯಾಗುತ್ತದೆ.
ಬಾಯಿ ದುರ್ಗಂಧ ಅಥವಾ ಹಲ್ಲು ನೋವು ಇದ್ರೆ ಬಾಯಿಯಿಂದ ದುರ್ಗಂಧ ಬರುತ್ತಿದ್ದರೆ ಒಂದೆರಡು ಎಲೆಗಳನ್ನು ಬಾಯಿಗೆ ಹಾಕಿಕೊಂಡು ಜಗಿಯುವುದರಿಂದ ದುರ್ಗಂಧ ಕಡಿಮೆಯಾಗುತ್ತದೆ. ಪುದಿನ ಸೊಪ್ಪಿನ ಎಲೆಗಳನ್ನು ಹಸಿಯಾಗಿ ತಿನ್ನುವುದರಿಂದ ಹಲ್ಲುನೋವು ಕಡಿಮೆಯಾಗುತ್ತದೆ.
ಅರುಚಿ ಸಮಸ್ಯೆಗೆ ಪುದಿನವನ್ನು ಒಣಗಿಸಿ ಪುಡಿಮಾಡಿ ಕೊಂಡು ಅರಚಿಉಂಟಾದಾಗ ಬೆಳಗ್ಗೆ ಮತ್ತು ರಾತ್ರಿ ಕಾಲದಲ್ಲಿ ಕಾಲು ಚಮಚ ಪುಡಿಯನ್ನು ಅರ್ಧ ಕಪ್ಪು ಬಿಸಿ ನೀರಿಗೆ ಸೇರಿಸಿ ಒಂದೆರಡು ದಿನ ಕುಡಿಯುವುದರಿಂದ ಆಹಾರ ಜೀರ್ಣವಾಗುತ್ತದೆ ಆಹಾರ ಸೇವಿಸಲು ಬಾಯಿಗೆ ರುಚಿಯುಂಟಾಗುತ್ತದೆ. ಹೀಗೆ ಹತ್ತಾರು ಪ್ರಯೋಜಗಳನ್ನು ಪುದಿನ ಸೊಪ್ಪಿನಿಂದ ಪಡೆಯಬಹುದಾಗಿದೆ.