ವಿಘ್ನ ವಿನಾಶಕ ಗಣೇಶನಿಗೆ ಪೂಜಾ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಪೂಜೆಯಲ್ಲೂ ಮೊದಲು ಆರಾಧಿಸುವುದು ಗಣಪತಿಯನ್ನೇ ಆಗಿದೆ. ಹೊಸ ಕಾರ್ಯ ಹಾಗೂ ಯೋಜನಗಳಿಗೆ ಯಾವುದೇ ವಿಘ್ನ ಬಾರದಿರಲಿ ಎಂಬುದಕ್ಕೆ ಮೊದಲು ಗಣೇಶನನ್ನು ಆರಾಧಿಸುವುದು ರೂಢಿಯಲ್ಲಿದೆ. ಹೀಗಾಗಿಯೇ ಅಂದು ಗಣೇಶ ಚತುರ್ಥಿಯೆಂದು ಆಚರಣೆ ಮಾಡಲಾಗುತ್ತದೆ.

ಎಲ್ಲಾ ದೇವತೆಗಳ ಆರಾಧನೆಯಂತೆಯೇ ಗಣಪತಿಗೂ ವಿಶೇಷ ಆಚರಣೆಯ ದಿನವಿದ್ದು ಈ ದಿನವನ್ನು ಗಣೇಶ ಚತುರ್ಥಿ ಎಂದು ಆಚರಣೆ ಮಾಡುತ್ತಾರೆ. ಗಣಪತಿಯ ಪೂಜೆಯನ್ನು ಮಾಡುವವರು ಯಾವ ರೀತಿಯಾಗಿ ಪೂಜೆಯನ್ನು ಮಾಡಬೇಕು ಎಂಬುದರ ಬಗ್ಗೆ ನಾವು ಇಲ್ಲಿ ಹೆಚ್ಚಿ ನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯನ್ನು ಗಣೇಶ ಕೈಲಾಸದಿಂದ ಭೂಮಿಗೆ ಬರುತ್ತಾನೆಂದು ನಮ್ಮ ಪುರಾಣಗಳಲ್ಲಿ ನಂಬಿಕೆಯಾಗಿದೆ. ಏಕದಂತನ ಪೂಜೆಯು ಹತ್ತು ದಿನಗಳವರೆಗೆ ನಡೆಯುತ್ತದೆ. ಈ ಪೂಜೆಯನ್ನು ನಾವು ಸರಿಯಾದ ರೀತಿಯಲ್ಲಿ ಜರುಗಿಸಬೇಕು.ಇದಕ್ಕೆ ಸರಿಯಾದ ಜಾಗದಲ್ಲಿ ವಿಘ್ನ ವಿನಾಶಕನನ್ನು ಸ್ಥಾಪಿಸಿ ಪ್ರತಿಷ್ಠಾಪನೆಯನ್ನು ಮಾಡಿ ಪೂಜಿಸಬೇಕು.

ವಿಘ್ನವಿನಾಶಕನನ್ನು ಪ್ರತಿಷ್ಠಾಪಿಸುವುದರಲ್ಲಿ 16 ವಿಧಿಯು ಇರುತ್ತದೆ ಎಂದು ಹೇಳುತ್ತಾರೆ. ಮೂಷಿಕವಾಹನ ಗಣೇಶನು ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನ ಮಧ್ಯಾಹ್ನ ಹೊತ್ತಿಗೆ ಜನಿಸಿದ ಎಂದು ಹೇಳುತ್ತಾರೆ. ಹೀಗಾಗಿ ಗಣೇಶನನ್ನು 12 ರಿಂದ 1 ಗಂಟೆಯ ಒಳಗಡೆ ಪ್ರತಿಷ್ಠಾಪನೆಯನ್ನು ಮಾಡಿಕೊಳ್ಳಬೇಕು.

ದೀಪವನ್ನು ಬೆಳಗಿ ಸಂಕಲ್ಪವನ್ನು ಮಾಡಿಕೊಂಡು ಗಣಪತಿಯನ್ನು ಪ್ರತಿಷ್ಠಾಪಿಸಿ ಆಹ್ವಾನಿಸಿಕೊಳ್ಳಬೇಕು. ಮೊದಲಿಗೆ ಹಸುವಿನ ತುಪ್ಪದ ದೀಪವನ್ನು ಹಚ್ಚಿ ಭಾವನೆಗಳಿಂದ ಸಮರ್ಪಿಸಿಕೊಳ್ಳಬೇಕು. ಆಹ್ವಾನದ ನಂತರ ಗಣಪತಿಯನ್ನು ಕಲಶಸ್ಥಾಪನೆಯಿಂದ ಪೂಜಿಸಿಕೊಳ್ಳಬೇಕು. ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭಾ ನಿರ್ವಿಘ್ನಮ್ ಕುರುಮೆದೇವಾ ಸರ್ವ ಕಾರ್ಯೆಶು ಸರ್ವದಾ ಎಂದು ಆಸನವನ್ನು ಹಾಕಿ ಆತನಿಗೆ ಅಗತ್ಯವಿರುವ ಎಲ್ಲಾ ಸುಗಂಧ ದ್ರವ್ಯಗಳನ್ನು ಅರ್ಪಿಸಿಕೊಳ್ಳುತ್ತಾ ಆತನನ್ನು ಪ್ರತಿಷ್ಠಾಪಿಸಿಕೊಳ್ಳಬೇಕು. ನಂತರ ಯಜ್ಞೋಪವೀತವನ್ನು ವಿಘ್ನ ವಿನಾಯಕನಿಗೆ ಸಮರ್ಪಣೆಯನ್ನು ಮಾಡಬೇಕು.

ಗಣಪತಿಗೆ ಪಂಚಕಗಳು ತುಂಬಾ ಪ್ರಿಯವಾದ ತಿಂಡಿಯಾಗಿದೆ. ಅದನ್ನು ತಯಾರಿಸಿ ವಿಘ್ನವಿನಾಶಕನಿಗೆ ನೈವೇದ್ಯ ನೀಡಬೇಕು. ತಾಂಬೂಲ ಸಮರ್ಪಣೆಯನ್ನು ಏಕದಂತನಿಗೆ ಮಾಡಬೇಕು. ವಿಘ್ನವಿನಾಶಕನನ್ನು ಏಕಚಿತ್ತದಿಂದ ಭಕ್ತಿಭಾವಗಳಿಂದ ಹೂವು ಮತ್ತು ಮಂಗಳಾರತಿಯ ಸಮರ್ಪಣೆಯ ಮೂಲಕ ಮನಸ್ಪೂರ್ವಕವಾಗಿ ಪೂಜಿಸಬೇಕು. ಹೀಗೆ ವಿಘ್ನವಿನಾಶಕ ನನ್ನು ಪೂಜಿಸುವುದರಿಂದ ಸಕಲ ಸಂಪತ್ತು ಸನ್ಮಂಗಳಗಳು ಹೋಗುವುದಲ್ಲದೆ ವಿಘ್ನವಿನಾಶಕ ಯಾವುದೇ ಕಾರ್ಯಗಳನ್ನು ನಿರ್ವಿಘ್ನವಾಗಿ ನೆರವೇರಿಸಿ ಕೊಡುತ್ತಾನೆ ಮತ್ತು ಜೀವನದಲ್ಲಿ ಯಶಸ್ಸನ್ನು ತಂದು ಕೊಡುತ್ತಾನೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!