ಇತ್ತೀಚಿನ ದಿನದಲ್ಲಿ ಎಲ್ಲಾ ಕಡೆಗಳಲ್ಲಿಯೂ ಕಂಡುಬರುತ್ತಿರುವ ಪ್ರಮುಖ ಸಮಸ್ಯೆ ನಿರುದ್ಯೋಗ ಸಮಸ್ಯೆ ಸರ್ಕಾರವು ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಖಾಲಿ ಇರುವ ಅನೇಕ ಹುದ್ದೆಗಳ ನೇಮಕಾತಿಯನ್ನು ಮಾಡುತ್ತಾ ಬರುತ್ತಿದೆ. ಪ್ರಸ್ತುತ ಸರ್ಕಾರವು ಯಾವ ಹುದ್ದೆಯ ಕರಡು ಅಧಿಸೂಚನೆಯನ್ನು ಹೊರಡಿಸಿದೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಕರ್ನಾಟಕ ಸರ್ಕಾರವು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗೆ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಕಾಲಿ ಇರುವ ಹುದ್ದೆಗಳ ವಿದ್ಯಾರ್ಹತೆ ವೇತನ ನೇಮಕಾತಿ ವಿಧಾನದ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..
ಮೊದಲನೇಯ ಹುದ್ದೆಯ ಹೆಸರು ಗ್ರಂಥಪಾಲಕರು ಲೈಬ್ರರಿಯನ್. ಇಲ್ಲಿ ಒಟ್ಟು ಹದಿನಾಲ್ಕು ಹುದ್ದೆಗಳು ಖಾಲಿ ಇವೆ ಇವು ಕಾಯಂ ಹುದ್ದೆಗಳಾಗಿವೆ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಪ್ರತಿತಿಂಗಳು ಮೂವತ್ತು ಸಾವಿರದ ಮುನ್ನುರಾಐವತ್ತ ರಿಂದ ಐವತ್ತೆಂಟು ಸಾವಿರದ ಎರಡುನೂರಾ ಐವತ್ತರ ಶ್ರೇಣಿಯಲ್ಲಿ ವೇತನವನ್ನು ನೀಡಲಾಗುತ್ತದೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವವರು ಲೈಬ್ರರಿ ಸೈನ್ಸ್ ನಲ್ಲಿ ಪದವಿಯನ್ನು ಪಡೆದಿರಬೇಕು. ಹುದ್ದೆಗೆ ಆಯ್ಕೆಯನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಮತ್ತು ಪದವಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ.
ಎರಡನೇ ಹುದ್ದೆ ವಾರ್ಡನ್ ಹುದ್ದೆ ಇಲ್ಲಿ ಏಳುನೂರಾ ಹನ್ನೆರಡು ಹುದ್ದೆಗಳು ಖಾಲಿ ಇವೆ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ಇಪ್ಪತ್ತೇಳು ಸಾವಿರದ ಆರುನೂರಾ ಐವತ್ತರಿಂದ ರಿಂದ ಐವತ್ತೆರಡು ಸಾವಿರದ ಆರುನೂರಾಐವತ್ತರ ಶ್ರೇಣಿಯಲ್ಲಿ ವೇತನವನ್ನು ನೀಡಲಾಗುತ್ತದೆ. ಈ ಹುದ್ದೆಗೆ ವಿದ್ಯಾರ್ಹತೆಯನ್ನು ನೋಡುವುದಾದರೆ ಅಭ್ಯರ್ಥಿಗಳು ಕಲಾ ವಿಭಾಗ ಅಥವಾ ವಿಜ್ಞಾನ ವಿಭಾಗದಲ್ಲಿ ಪದವಿಯನ್ನು ಪಡೆದಿರಬೇಕು ಹಾಗೂ ಬಿಎಡ್ ಪದವಿಯನ್ನೂ ಹೊಂದಿರಬೇಕು. ಈ ಹುದ್ದೆಗೆ ನೇಮಕಾತಿಯನ್ನು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಪದವಿ ಮತ್ತು ಬಿಎಡ್ ನಲ್ಲಿಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಅದರ ಮೂಲಕ ನೇಮಕಾತಿಯನ್ನು ಮಾಡಲಾಗುವುದು.
ಮೂರನೆಯ ಹುದ್ದೆ ಶೀಘ್ರಲಿಪಿಗಾರ ಹುದ್ದೆ ಈ ವಿಭಾಗದಲ್ಲಿ ಒಂದು ಕಾಯಂ ಹುದ್ದೆ ಖಾಲಿ ಇದೆ ಈ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ವೇತನ ಇಪ್ಪತ್ತೇಳು ಸಾವಿರದ ಆರುನೂರಾಐವತ್ತರಿಂದ ಐವತ್ತೆರಡು ಸಾವಿರದ ಆರುನೂರಾಐವತ್ತರ ಶ್ರೇಣಿಯಲ್ಲಿ ವೇತನವನ್ನು ನೀಡಲಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರ ಕನಿಷ್ಠ ವಿದ್ಯಾರ್ಹತೆ ಪಿಯುಸಿ ಹಾಗೂ ಕನ್ನಡ ಮತ್ತು ಇಂಗ್ಲೀಷ್ ಹಿರಿಯ ದರ್ಜೆ ಬೆರಳಚ್ಚು ಹಾಗೂ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಈ ಹುದ್ದೆಗೆ ಪಿಯುಸಿ ಬೆರಳಚ್ಚು ಹಾಗೂ ಶೀಘ್ರಲಿಪಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕಾತಿಯನ್ನು ಮಾಡಲಾಗುತ್ತದೆ.
ನಾಲ್ಕನೆಯ ಹುದ್ದೆ ಎಫ್ ಡಿ ಎ ಕಮ್ ಕಂಪ್ಯೂಟರ್ ಆಪರೇಟರ್ ಹುದ್ದೆ ಇಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಏಳುನೂರಾ ಹದಿನಾರು ಖಾಯಂಹುದ್ದೆಗಳು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ವೇತನ ಇಪ್ಪತ್ತೇಳು ಸಾವಿರದ ಆರುನೂರಾಐವತ್ತರಿಂದ ಐವತ್ತೆರಡು ಸಾವಿರದ ಶ್ರೇಣಿಯಲ್ಲಿ ವೇತನವನ್ನು ನೀಡಲಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಯಾವುದಾದರೂ ಪದವಿಯನ್ನು ಪಡೆದಿರಬೇಕು ಈ ಹುದ್ದೆಯ ನೇಮಕಾತಿಯನ್ನು ಶೇಕಡ ಐವತ್ತರಷ್ಟು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಮತ್ತು ಶೇಕಡಾ ಐವತ್ತರಷ್ಟು ಮುಂಬಡ್ತಿ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.
ಐದನೇಯ ಹುದ್ದೆ ಎಸ್ ಎಸ್ ಡಿ ಎ ಕಮ್ ಕಂಪ್ಯೂಟರ್ ಆಪರೇಟರ್. ಈ ವಿಭಾಗದಲ್ಲಿ ಒಟ್ಟು ಮೂವತ್ಮೂರು ಹುದ್ದೆಗಳು ಖಾಲಿ ಇವೆ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ಇಪ್ಪತ್ತೊಂದು ಸಾವಿರದ ನಾಲ್ಕುನೂರು ರೂಪಾಯಿಯಿಂದ ನಲವತ್ತೆರಡು ಸಾವಿರ ರೂಪಾಯಿ ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಮುಗಿಸಿರಬೇಕು ಈ ಹುದ್ದೆಗೆ ನೇಮಕಾತಿ ಯನ್ನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಮತ್ತು ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೇರಿಟ್ ಲಿಸ್ಟ್ ಅನ್ನು ತಯಾರಿಸಿ ಅದರ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ನಾವು ನಿಮಗೆ ತಿಳಿಸುತ್ತಿರುವ ಆರನೆಯ ಹುದ್ದೆ ಪ್ರಯೋಗಾಲಯ ಸಹಾಯಕ ಹುದ್ದೆ ಈ ವಿಭಾಗದಲ್ಲಿ ಒಟ್ಟು ಹನ್ನೊಂದು ಕಾಯಂ ಹುದ್ದೆಗಳು ಖಾಲಿ ಇದೆ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ಇಪ್ಪತ್ತೊಂದು ಸಾವಿರದ ನಾಲ್ಕುನೂರು ರೂಪಾಯಿಯಿಂದ ನಲವತ್ತೆರಡು ಸಾವಿರ ರೂಪಾಯಿ ಶ್ರೇಣಿಯಲ್ಲಿ ವೇತನವನ್ನು ನೀಡಲಾಗುವುದು. ಈ ಹುದ್ದೆಯ ವಿದ್ಯಾರ್ಹತೆಯ ಬಗ್ಗೆ ನೋಡುವುದಾದರೆ ಅಭ್ಯರ್ಥಿಗಳು ವಿಜ್ಞಾನ ವಿಭಾಗದಲ್ಲಿ ಪಿಯುಸಿಯನ್ನು ಮತ್ತು ಪಿಯುಸಿಯ ಜೊತೆಗೆ ಡಿಪ್ಲೋಮಾ ಇನ್ ಲ್ಯಾಬರೋಟರಿ ಟೆಕ್ನಿಕ್ ಅರ್ಹತೆಯನ್ನು ಹೊಂದಿರಬೇಕು. ಈ ಹುದ್ದೆಯನ್ನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮತ್ತು ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗ
ಏಳನೆಯ ಹುದ್ದೆ ಅಡುಗೆ ಮಾಡುವವರ ಹುದ್ದೆ. ಈ ವಿಭಾಗದಲ್ಲಿ ಒಟ್ಟು ಎರಡು ಸಾವಿರದ ಮುವತ್ತೊಂಬತ್ತು ತಾತ್ಕಾಲಿಕ ಹುದ್ದೆಗಳು ಖಾಲಿ ಇವೆ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹದಿನೆಂಟು ಸಾವಿರದ ಆರುನೂರರಿಂದ ಮೂವತ್ತೆರಡು ಸಾವಿರದ ಆರುನೂರು ರೂಪಾಯಿ ಶ್ರೇಣಿಯಲ್ಲಿ ವೇತನವನ್ನು ನೀಡಲಾಗುವುದು. ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ವಿದ್ಯಾರ್ಹತೆಯನ್ನು ಅಡುಗೆಯಲ್ಲಿ ಎರಡು ವರ್ಷದ ಅನುಭವವನ್ನು ಪಡೆದಿರಬೇಕು. ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ಹುದ್ದೆಗೆ ನೇಮಕ ಮಾಡಲಾಗುವುದು.
ಮುಂದಿನ ಹುದ್ದೆ ಸಹಾಯಕ ಅಡುಗೆಯವರ ಹುದ್ದೆ ಈ ವಿಭಾಗದಲ್ಲಿ ಒಟ್ಟು ಸಾವಿರ ಐದುನೂರಾಹನ್ನೆರಡು ತಾತ್ಕಾಲಿಕ ಹುದ್ದೆಗಳು ಖಾಲಿ ಇವೆ. ಈ ಒಂದು ಹುದ್ದೆಗೆ ಮಾಸಿಕ ವೇತನವನ್ನು ಹದಿನೇಳು ಸಾವಿರದಿಂದ ಇಪ್ಪತ್ತೆಂಟು ಸಾವಿರದ ಒಂಬೈನೂರಾ ಐವತ್ತು ರೂಪಾಯಿ ಶ್ರೇಣಿಯಲ್ಲಿ ವೇತನವನ್ನು ನೀಡಲಾಗುವುದು ಈ ಒಂದು ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸಾಗಿರುವ ಅಥವಾ ಫೇಲ್ ಆಗಿರುವ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದು. ಈ ಒಂದು ಹುದ್ದೆಗೆ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗುತ್ತದೆ.
ಮುಂದಿನ ಹುದ್ದೆ ಚಾಲಕ ಹುದ್ದೆ. ಈ ವಿಭಾಗದಲ್ಲಿ ಒಟ್ಟು ಹತ್ತೊಂಬತ್ತು ಹುದ್ದೆಗಳು ಖಾಲಿ ಇವೆ ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನ ಇಪ್ಪತ್ತೊಂದು ಸಾವಿರದ ನಾಲ್ಕುನೂರು ರೂಪಾಯಿಯಿಂದ ನಲವತ್ತೆರಡು ಸಾವಿರ ರೂಪಾಯಿ ಶ್ರೇಣಿಯ ರೂಪದಲ್ಲಿ ವೇತನವನ್ನು ನೀಡಲಾಗುವುದು. ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ವಿದ್ಯಾರ್ಹತೆಯ ಜೊತೆಗೆ ಲಘು ವಾಹನ ಚಾಲನೆ ಪರವಾನಿಗೆಯನ್ನು ಪಡೆದಿರಬೇಕು ಈ ಒಂದು ಹುದ್ದೆಗೆ ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗುತ್ತದೆ.
ಹುದ್ದೆ ಸ್ವೀಪರ್ ಹುದ್ದೆ ಇಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ ಸಾವಿರದ ಏಳುನೂರಇಪ್ಪತ್ತೆಂಟು ತಾತ್ಕಾಲಿಕ ಹುದ್ದೆಗಳು ಖಾಲಿ ಇದೆ. ಈ ಹುದ್ದೆಗೆ ಅಭ್ಯರ್ಥಿಗಳಿಗೆ ಮಾಸಿಕ ವೇತನ ಹದಿನೇಳು ಸಾವಿರದಿಂದ ಇಪ್ಪತ್ತೆಂಟು ಸಾವಿರದ ಒಂಬೈನೂರಾ ಐವತ್ತು ರೂಪಾಯಿ ಶ್ರೇಣಿಯಲ್ಲಿ ಮಾಸಿಕ ವೇತನವನ್ನು ನೀಡಲಾಗುವುದು ಅಭ್ಯರ್ಥಿಗಳು ಕನಿಷ್ಠ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆಯನ್ನು ಪಡೆದಿರಬೇಕು ಈ ಒಂದು ಹುದ್ದೆಗೆ ತಾತ್ಕಾಲಿಕವಾಗಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ಹುದ್ದೆ ವಾಚ್ಮ್ಯಾನ್ ಅಥವಾ ಫ್ಯೂನ್ ಹುದ್ದೆ ಈ ವಿಭಾಗದಲ್ಲಿ ಒಟ್ಟು ಎರಡು ಸಾವಿರದ ತೊಂಬತ್ತೆಂಟು ಹುದ್ದೆಗಳು ಖಾಲಿ ಇವೆ ಈ ಹುದ್ದೆಗೆಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ಹದಿನೇಳು ಸಾವಿರದಿಂದ ಇಪ್ಪತ್ತೆಂಟು ಸಾವಿರದ ಒಂಬೈನೂರಾ ಐವತ್ತು ರೂಪಾಯಿ ಶ್ರೇಣಿಯಲ್ಲಿ ವೇತನವನ್ನು ನೀಡಲಾಗುವುದು ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಉತ್ತೀರ್ಣ ವಾಗಿರಬಹುದು ಅಥವಾ ಫೇಲ್ ಆಗಿರುವಂತಹ ಅಭ್ಯರ್ಥಿಗಳು ಈ ಕೆಲಸಕ್ಕೆ ಅರ್ಹರಾಗಿರುತ್ತಾರೆ. ತಾತ್ಕಾಲಿಕವಾಗಿ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ
ನೋಡಿದಿರಲ್ಲ ಸ್ನೇಹಿತರೆ ಸರ್ಕಾರ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಒದಗಿಸುವ ಉದ್ದೇಶದಿಂದ ಹಲವಾರು ವಿಭಾಗಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಕರಡುಪ್ರತಿಯನ್ನು ಹೊರಡಿಸಿದೆ ಆದಷ್ಟು ಬೇಗ ಈ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸುತ್ತದೆ ನಿಮಗೆ ಈ ಮೇಲಿನ ಹುದ್ದೆಗಳಲ್ಲಿ ಆಸಕ್ತಿ ಇದ್ದರೆ ಅರ್ಜಿ ಆಹ್ವಾನವನ್ನು ಮಾಡಿದ ತಕ್ಷಣ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಿ ಜೊತೆಗೆ ನಿಮ್ಮ ಸ್ನೇಹಿತರಿಗೂ ಪರಿಚಯದವರಿಗೂ ಈ ಉದ್ಯೋಗ ಮಾಹಿತಿಯನ್ನು ತಿಳಿಸಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430